ತಿರುವನಂತಪುರಂ (ಕೇರಳ): ಬ್ರಿಟನ್ನಿಂದ ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಹಿರಿಯ ಮಾನವಶಾಸ್ತ್ರಜ್ಞ ಮತ್ತು ಸಮಾಜಶಾಸ್ತ್ರಜ್ಞ ಫಿಲಿಪ್ಪೊ ಒಸೆಲ್ಲಾ ಅವರಿಗೆ ಭಾರತ ಪ್ರವೇಶಿಸಲು ನಿರಾಕರಿಸಲಾಗಿದೆ. ದುಬೈ ಮೂಲಕ ತಿರುವನಂತರಪುರಂಗೆ ಅವರು ಆಗಮಿಸಿದ್ದರು. ಆದರೆ, ಅವರನ್ನು ದುಬೈಗೇ ವಾಪಸ್ ಕಳುಹಿಸಲಾಗಿದ್ದು, ಅಲ್ಲಿಂದ ಬ್ರಿಟನ್ಗೆ ಮರಳಲಿದ್ದಾರೆ.
ವಿಮಾನ ನಿಲ್ದಾಣಕ್ಕೆ ಆಗಮಿಸಿದ ಫಿಲಿಪ್ಪೊ ಒಸೆಲ್ಲಾ ಅವರನ್ನು ಅಧಿಕಾರಿಯೊಬ್ಬರು ಇಮಿಗ್ರೇಷನ್ (ವಲಸೆ) ಡೆಸ್ಕ್‌ಗೆ ಕರೆದೊಯ್ದರು. ಅಲ್ಲಿ ಸ್ವಲ್ಪ ಸಮಯದ ಅವರೊಂದಿಗೆ ಮಾತನಾಡಿದ ಬಳಿಕ ಮರಳಿ ಕಳುಹಿಸಲಾಯಿತು ಎನ್ನಲಾಗಿದೆ. ಆದರೆ, ಯಾವ ಕಾರಣಕ್ಕೆ ಮರಳಿ ಕಳುಹಿಸಲಾಯಿತು ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.