ಅಹಮದಾಬಾದ್ (ಗುಜರಾತ್):ಗುಜರಾತ್ ಹೈಕೋರ್ಟ್‌ನ ಬೇಸಿಗೆ ರಜೆ ಪೂರ್ಣಗೊಂಡ ನಂತರ ಅಂದರೆ, ಜೂನ್ 5ರ ನಂತರ ರಾಹುಲ್ ಗಾಂಧಿ ವಿರುದ್ಧದ ಮೋದಿ ಉಪನಾಮದ ಮಾನಹಾನಿ ಪ್ರಕರಣದ ಪರಿಷ್ಕರಣೆ ಅರ್ಜಿಯ ತೀರ್ಪು ಹೊರಬೀಳುವ ಸಾಧ್ಯತೆಯಿದೆ. ಸದ್ಯ ಗುಜರಾತ್ ಹೈಕೋರ್ಟ್ ರಜೆಯಲ್ಲಿದೆ. ನಿಯಮಿತ ನ್ಯಾಯಾಲಯವು ಜೂನ್ 5 ರಂದು ಪ್ರಾರಂಭವಾಗುತ್ತದೆ. ಬಳಿಕ ಜೂನ್ 5ರ ನಂತರ ಯಾವುದೇ ದಿನವು ಕೂಡ ರಾಹುಲ್ ಗಾಂಧಿ ಮಾನನಷ್ಟ ಮೊಕದ್ದಮೆಯ ಪರಿಷ್ಕರಣೆ ಅರ್ಜಿಯ ತೀರ್ಪು ಪ್ರಕಟವಾಗುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ:ಸಿಸೋಡಿಯಾ ಜತೆಗೆ ಭದ್ರತಾ ಸಿಬ್ಬಂದಿ ಅನುಚಿತ ವರ್ತನೆ: ಸಿಸಿಟಿವಿ ದೃಶ್ಯಾವಳಿ ಸಂರಕ್ಷಿಸುವಂತೆ ಕೋರ್ಟ್ ಆದೇಶ
15ರೊಳಗೆ ದಾಖಲೆಗಳನ್ನು ಸಲ್ಲಿಸುವಂತೆ ಆದೇಶ: ಮಾನನಷ್ಟ ಮೊಕದ್ದಮೆಯಲ್ಲಿ 2023ರ ಏಪ್ರಿಲ್ 25ರಂದು ರಾಹುಲ್ ಗಾಂಧಿ ಗುಜರಾತ್ ಹೈಕೋರ್ಟ್‌ನಲ್ಲಿ ಪರಿಷ್ಕರಣೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಮೊದಲ ವಿಚಾರಣೆಯನ್ನು 29 ಏಪ್ರಿಲ್ 2023 ರಂದು ನಡೆಸಲಾಯಿತು. ಎರಡನೇ ವಿಚಾರಣೆಯನ್ನು 2 ಮೇ 2023 ರಂದು ಹೈಕೋರ್ಟ್‌ನಲ್ಲಿ ನಡೆಯಿತು. ಮೇ 2 ರಂದು, ನ್ಯಾಯಮೂರ್ತಿ ಹೇಮಂತ್ ಪ್ರಚಕ್ ಅವರ ವಿಭಾಗೀಯ ಪೀಠವು ಗುಜರಾತ್ ಹೈಕೋರ್ಟ್‌ನಲ್ಲಿ ಮೋದಿ ಅವರ ಉಪನಾಮವನ್ನು ಅವಮಾನಿಸಿದ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರ ಪರಿಷ್ಕರಣೆ ಅರ್ಜಿಯ ವಿಚಾರಣೆ ಪೂರ್ಣಗೊಂಡಿದೆ ಎಂದು ಘೋಷಿಸಿತು. ಗುಜರಾತ್ ಹೈಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದ್ದು, ಬೇಸಿಗೆ ರಜೆಯ ನಂತರ ಈ ವಿಷಯದಲ್ಲಿ ತನ್ನ ತೀರ್ಪನ್ನು ಪ್ರಕಟಿಸುವುದಾಗಿ ಹೇಳಿದೆ. ಇದರೊಂದಿಗೆ ಸೂರತ್ ನ್ಯಾಯಾಲಯದ ದಾಖಲೆಗಳನ್ನು ಇದೇ 15ರೊಳಗೆ ಹೈಕೋರ್ಟ್‌ಗೆ ಸಲ್ಲಿಸುವಂತೆಯೂ ಹೈಕೋರ್ಟ್ ಆದೇಶ ನೀಡಿತ್ತು.