ಕರ್ನಾಟಕ

karnataka

ETV Bharat / bharat

ಫರೀದ್‌ಕೋಟ್‌ನ ವೈದ್ಯಕೀಯ ಕಾಲೇಜಿನಲ್ಲಿ ಬಳಕೆಯಾಗದೇ ಬಿದ್ದ ರಾಶಿ ರಾಶಿ ವೆಂಟಿಲೇಟರ್​ಗಳು!

ಫರೀದ್‌ಕೋಟ್‌ನ ಗುರು ಗೋವಿಂದ್ ಸಿಂಗ್ ವೈದ್ಯಕೀಯ ಕಾಲೇಜಿನಲ್ಲಿ ರಾಶಿ ರಾಶಿ ವೆಂಟಿಲೇಟರ್‌ಗಳು ಬಳಕೆಯಾಗದೇ ಬಿದ್ದಿರುವ ವಿಡಿಯೋವನ್ನು ಕೋಟ್ಕಾಪುರದ ಆಮ್ ಆದ್ಮಿ ಪಕ್ಷದ ಶಾಸಕ ಕುಲ್ತಾರ್ ಸಂಧ್ವಾನ್ ಟ್ವಿಟ್ಟರ್​ಲ್ಲಿ ಹಂಚಿಕೊಂಡಿದ್ದಾರೆ.

Gobind Singh Medical College
ಬಳಕೆಯಾಗದೇ ಬಿದ್ದ ರಾಶಿ ರಾಶಿ ವೆಂಟಿಲೇಟರ್​ಗಳು

By

Published : May 12, 2021, 5:23 PM IST

ಫರೀದ್‌ಕೋಟ್(ಪಂಜಾಬ್​):ಫರೀದ್‌ಕೋಟ್‌ನ ಗುರು ಗೋವಿಂದ್​ ಸಿಂಗ್ ವೈದ್ಯಕೀಯ ಕಾಲೇಜಿನಲ್ಲಿ ಸಾಕಷ್ಟು ವೆಂಟಿಲೇಟರ್‌ಗಳಿವೆ ಎಂದು ಕೋಟ್ಕಾಪುರದ ಆಮ್ ಆದ್ಮಿ ಪಕ್ಷದ ಶಾಸಕ ಕುಲ್ತಾರ್ ಸಂಧ್ವಾನ್ ಟ್ವೀಟ್ ಮಾಡಿದ್ದಾರೆ.

ಬಳಕೆಯಾಗದೇ ಬಿದ್ದ ರಾಶಿ ರಾಶಿ ವೆಂಟಿಲೇಟರ್​ಗಳು

ಇವುಗಳನ್ನು ಪ್ರಧಾನಮಂತ್ರಿ ಯೋಜನೆಯಡಿ ಫರೀದ್‌ಕೋಟ್‌ನ ವೈದ್ಯಕೀಯ ಕಾಲೇಜಿಗೆ ನೀಡಲಾಗಿತ್ತು. ಆದರೆ ಇವುಗಳನ್ನು ಉಪಯೋಗಿಸದೆ ಮುಚ್ಚಿಡಲಾಗಿದೆ. ದಯವಿಟ್ಟು ಇವುಗಳನ್ನು ರೋಗಿಗಳ ಉಪಯೋಗಕ್ಕೆ ನೀಡಿ ಎಂದು ಕುಲ್ತಾರ್ ಸಂಧ್ವಾನ್ ಮನವಿ ಮಾಡಿದ್ದಾರೆ.

ಕುಲ್ತಾರ್ ಸಂಧ್ವಾನ್ ಇದನ್ನು ಟ್ವೀಟ್ ಬಗ್ಗೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ರಾಜ್ ಬಹದ್ದೂರ್ ಮಾತನಾಡಿ, ನಮ್ಮಲ್ಲಿ 42 ವೆಂಟಿಲೇಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಪ್ರಧಾನ್ ಮಂತ್ರಿ ಯೋಜನೆಯಡಿ ನಮಗೆ ದೊರೆತ ಸುಮಾರು 82 ವೆಂಟಿಲೇಟರ್‌ಗಳ ಪೈಕಿ 62 ವೆಂಟಿಲೇಟರ್‌ಗಳು ದೋಷಯುಕ್ತವಾಗಿವೆ ಎಂದಿದ್ದಾರೆ. ಕುಲ್ತಾರ್ ಸಂಧ್ವಾನ್ ಟ್ವೀಟ್​ ಮಾಡಿದ್ದಾರೆ. ವೆಂಟಿಲೇಟರ್‌ಗಳನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು ಎಂದಿದ್ದಾರೆ.

ABOUT THE AUTHOR

...view details