ಕರ್ನಾಟಕ

karnataka

ETV Bharat / bharat

ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಸಂವಿಧಾನದ ಆದರ್ಶ ಪಾಲಕರು : ಅಮಿತ್ ಶಾ - ಸ್ವರ್ಣ ಭಾರತ್ ಟ್ರಸ್ಟ್‌

ವೆಂಕಯ್ಯನಾಯ್ಡು ಅವರು ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿದ್ದ ದಿನಗಳನ್ನು ನೆನಪಿಸಿಕೊಂಡ ಅಮಿತ್ ಶಾ, ಪಕ್ಷವು ಹಲವು ಏಳುಬೀಳುಗಳ ಮೂಲಕ ಪ್ರಗತಿಯ ಹಾದಿಯನ್ನು ಸಾಧಿಸಿದೆ. ಶಿಸ್ತಿನಿಂದ ವೆಂಕಯ್ಯ ನಾಯ್ಡು ಅವರು ಪಕ್ಷವನ್ನು ಮುನ್ನಡೆಸುವ ಕೆಲಸವನ್ನು ಮಾಡಿದ್ದಾರೆ ಎಂದಿದ್ದಾರೆ..

Venkaiah Naidu setting example as ideal custodian of Constitution: Amit Shah
ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಸಂವಿಧಾನದ ಆದರ್ಶ ಪಾಲಕರು: ಅಮಿತ್ ಶಾ

By

Published : Nov 14, 2021, 6:40 PM IST

ವೆಂಕಟಾಚಲಂ,ಆಂಧ್ರಪ್ರದೇಶ :ಕೇಂದ್ರ ಗೃಹ ಸಚಿವ ಅಮಿತ್ ಶಾ (Amit sha) ಅವರು ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು (M Venkaiah Naidu) ಅವರನ್ನು ಭಾನುವಾರ ಶ್ಲಾಘಿಸಿದ್ದಾರೆ. ನಾಯ್ಡು ಅವರನ್ನು 'ಸಂವಿಧಾನದ ಆದರ್ಶ ಪಾಲಕರು'(Ideal Custodian of Constitution) ಎಂದು ಕರೆದಿದ್ದಾರೆ.

ಆಂಧ್ರಪ್ರದೇಶದ ನೆಲ್ಲೂರಿನ ವೆಂಕಟಾಚಲಂನಲ್ಲಿ ಸ್ವರ್ಣ ಭಾರತ್ ಟ್ರಸ್ಟ್‌ನ (Swarna Bharat Trust) 20ನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್​ ಶಾ ಅವರು, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಸಂವಿಧಾನದಲ್ಲಿ ಉಲ್ಲೇಖಿಸಿರುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಶ್ಲಾಘಿಸಿದರು.

ವೆಂಕಯ್ಯನಾಯ್ಡು ಅವರು ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿದ್ದ ದಿನಗಳನ್ನು ನೆನಪಿಸಿಕೊಂಡ ಅಮಿತ್ ಶಾ, ಪಕ್ಷವು ಹಲವು ಏಳುಬೀಳುಗಳ ಮೂಲಕ ಪ್ರಗತಿಯ ಹಾದಿಯನ್ನು ಸಾಧಿಸಿದೆ. ಶಿಸ್ತಿನಿಂದ ವೆಂಕಯ್ಯ ನಾಯ್ಡು ಅವರು ಪಕ್ಷವನ್ನು ಮುನ್ನಡೆಸುವ ಕೆಲಸವನ್ನು ಮಾಡಿದ್ದಾರೆ ಎಂದಿದ್ದಾರೆ.

ಅಧಿಕಾರದಲ್ಲಿದ್ದಾಗ ಬಹುತೇಕ ಪಕ್ಷಗಳು ಶಿಫಾರಸುಗಳ ಮೂಲಕ ಪದ್ಮ ಪ್ರಶಸ್ತಿಗಳನ್ನು ನೀಡುತ್ತವೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಪುರಸ್ಕಾರಕ್ಕೆ ಅರ್ಹರಾದವರನ್ನು ಆಯ್ಕೆ ಮಾಡಿದ್ದಾರೆ. ಕರ್ನಾಟಕದ ಮಹಿಳೆಯೊಬ್ಬರಿಗೆ, ವಾರಸುದಾರರಿಲ್ಲದ ಮೃತದೇಹಗಳಿಗೆ ಅಂತ್ಯಕ್ರಿಯೆ ಮಾಡುತ್ತಿದ್ದ ಓರ್ವ ಮುಸ್ಲಿಂ ವ್ಯಕ್ತಿಗೂ ಪದ್ಮಶ್ರೀ (Padma Shri) ನೀಡಲಾಗಿದೆ ಎಂದಿದ್ದಾರೆ.

ಸ್ವರ್ಣ ಭಾರತ್ ಟ್ರಸ್ಟ್‌ ಅನ್ನು ವೆಂಕಯ್ಯನಾಯ್ಡು ಅವರು ಸ್ಥಾಪನೆ ಮಾಡಿದ್ದು, ಬಡ, ಅನಾಥ ಮತ್ತು ವಿಶೇಷ ಅಗತ್ಯವಿರುವ ಮಕ್ಕಳಿಗಾಗಿ ಶಾಲೆಯನ್ನು ನಡೆಸುವುದಲ್ಲದೇ, ಮಹಿಳೆಯರು ಮತ್ತು ಯುವಕರಿಗೆ ಸ್ವಯಂ ಉದ್ಯೋಗ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಕೆಲಸ ಮಾಡುತ್ತಿದೆ.

ಇದನ್ನೂ ಓದಿ:ಕಲ್ಲಿದ್ದಲು ಕೊರತೆ.. ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗೆ ಶೇ.13ರಷ್ಟು ಆಮದು ಹೆಚ್ಚಳ..

ABOUT THE AUTHOR

...view details