ಹೈದರಾಬಾದ್(ತೆಲಂಗಾಣ): ಇಂದು ಡಿಎನ್‌ಎ ಫಿಂಗರ್‌ಪ್ರಿಂಟಿಂಗ್ ಮತ್ತು ಡಯಾಗ್ನೋಸ್ಟಿಕ್ಸ್ (ಸಿಡಿಎಫ್‌ಡಿ) ಕೇಂದ್ರದ ಬೆಳ್ಳಿ ಮಹೋತ್ಸವ ನಡೆಯಿತು. ಈ ವೇಳೆ ಉಪಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ಪೀಡಿಯಾಟ್ರಿಕ್ ರೇರಾ ಜೆನೆಟಿಕ್ ಡಿಸಾರ್ಡರ್ ಲ್ಯಾಬೊರೇಟರಿಯನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸಿಡಿಎಫ್‌ಡಿ ಒಂದು ವಿಶಿಷ್ಟ ಸಂಸ್ಥೆಯಾಗಿದೆ. ಅಪರಾಧ ಪ್ರಮಾಣದಲ್ಲಿ ಅಸಹಜ ಹೆಚ್ಚಳವು ವಿಶ್ವದ ಪ್ರಮುಖ ಸಮಸ್ಯೆಯಾಗಿದೆ.
ಕ್ರಿಮಿನಲ್ ಪ್ರಕರಣಗಳಲ್ಲಿ ಸರಿಯಾದ ತೀರ್ಪು ನೀಡಲು ಮತ್ತು ವಿಪತ್ತುಗಳಿಗೆ ಪರಿಹಾರ ಒದಗಿಸಲು ಸಿಡಿಎಫ್‌ಡಿ ನ್ಯಾಯಾಲಯಗಳು, ಎನ್ಐಎ, ಸಿಬಿಐಗೆ ಅತ್ಯಾಧುನಿಕ ಡಿಎನ್ಎ ಫಿಂಗರ್ ಪ್ರಿಂಟಿಂಗ್ ಸೇವೆ ಒದಗಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ನಾವು ಇದನ್ನು ಒಂದು ಅನನ್ಯ ಸಂಸ್ಥೆ ಎಂದು ಕರೆಯುತ್ತೇವೆ ಎಂದು ನಾಯ್ಡು ಹೇಳಿದರು.