ಕರ್ನಾಟಕ

karnataka

ETV Bharat / bharat

ವೆಲ್ಲೂರಿನಲ್ಲಿ ಕಳ್ಳತನ ತಡೆಗೆ Unique Idea.. ಗೂಗಲ್ ಡಾಕ್, ಕ್ಯೂಆರ್ ಕೋಡ್​ನಿಂದ ನಿಮ್ಮ ಮನೆ ಸೇಫ್​.. - ವೆಲ್ಲೂರಿನಲ್ಲಿ ಕಳ್ಳತನ ತಡೆಗೆ ಪೊಲೀಸರ ಹೊಸ ಉಪಾಯ ಸುದ್ದಿ

ಜನರು ತಮ್ಮ ವಿಳಾಸ ಮತ್ತು ಮನೆ ಖಾಲಿ ಮಾಡುವ ದಿನವನ್ನು ನೇರವಾಗಿ ಕಳ್ಳರಿಗೆ ನೀಡಿದಾಗ ಅದು ದುರಂತವಾಗಿ ಬದಲಾಗಬಹುದು. ಆದ್ದರಿಂದ Gov.in ವೆಬ್‌ಸೈಟ್‌ನಿಂದ ಇದನ್ನು ಕಾರ್ಯಗತಗೊಳಿಸುವುದು ಉತ್ತಮ’ ಎಂದು ಟ್ವಿಟರ್ ಬಳಕೆದಾರರೊಬ್ಬರು ಸಲಹೆ ನೀಡಿದ್ದಾರೆ..

ಗೂಗಲ್ ಡಾಕ್, ಕ್ಯೂಆರ್ ಕೋಡ್​ನಿಂದ ನಿಮ್ಮ ಮನೆ ಸೇಫ್​
ಗೂಗಲ್ ಡಾಕ್, ಕ್ಯೂಆರ್ ಕೋಡ್​ನಿಂದ ನಿಮ್ಮ ಮನೆ ಸೇಫ್​

By

Published : Sep 5, 2021, 7:55 PM IST

ವೆಲ್ಲೂರು(ತಮಿಳುನಾಡು) :ತಮ್ಮ ನಿವಾಸಿಗಳಿಗೆ ಬೀಗ ಹಾಕಿರುವ ಮನೆಗಳ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸರು ವಿನಂತಿಸುವುದು ಹೊಸದೇನಲ್ಲ. ಆದರೆ, ತಮಿಳುನಾಡಿನ ವೆಲ್ಲೂರು ಜಿಲ್ಲಾ ಪೊಲೀಸರು ಸರಳ ತಂತ್ರಜ್ಞಾನವನ್ನು ಬಳಸಿ ಹೊಸ ಯೋಜನೆ ರೂಪಿಸಿದ್ದಾರೆ.

ಗೂಗಲ್ ಡಾಕ್ ಮತ್ತು ಕ್ಯೂಆರ್ ಕೋಡ್​ನಿಂದ ನಿವಾಸಿಗಳು ಸುದೀರ್ಘ ಪ್ರವಾಸಕ್ಕೆ ಹೋಗಬೇಕಾದರೆ ತಮ್ಮ ಬೀಗ ಹಾಕಿದ ಮನೆಗಳ ಬಗ್ಗೆ ತಿಳಿಸುವಂತೆ ಕೋರಿದ್ದಾರೆ. ತನ್ನ ಇತ್ತೀಚಿನ ಟ್ವೀಟ್ ನಲ್ಲಿ, ವೆಲ್ಲೂರು ಎಎಸ್ಪಿ ಆಲ್ಬರ್ಟ್ ಜಾನ್ ಈ ಸೌಲಭ್ಯ ಅನಾವರಣಗೊಳಿಸಿದ್ದಾರೆ.

ವೆಲ್ಲೂರಿನಲ್ಲಿ ಕಳ್ಳತನ ತಡೆಗೆ Unique Idea

"ವೆಲ್ಲೂರು ಪಟ್ಟಣದ ಸಾರ್ವಜನಿಕರು ರಾತ್ರಿಯಿಡೀ ತಮ್ಮ ಮನೆಗಳನ್ನು ತೊರೆದರೆ ಪೊಲೀಸರಿಗೆ ಮಾಹಿತಿ ನೀಡಬಹುದು. ನಿಮ್ಮ ಬೀಗ ಹಾಕಿರುವ ಮನೆಗಳ ಮೇಲೆ ನಾವು ನಿಗಾ ಇಡುತ್ತೇವೆ. ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅಥವಾ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಯಾರಾದರೂ ಈ ಸರಳ ನಮೂನೆಯನ್ನು ಭರ್ತಿ ಮಾಡಬಹುದು" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕ್ಲಿಕ್ ಮಾಡಿದಾಗ, ಗೂಗಲ್ ಡಾಕ್ ಬಳಕೆದಾರರಿಗೆ ಮೂಲ ಮಾಹಿತಿಯನ್ನು ಭರ್ತಿ ಮಾಡಲು ವಿನಂತಿಸುತ್ತದೆ. ವಿನಂತಿಸಿದ ಮಾಹಿತಿಯು ಮನೆ ಮಾಲೀಕರ ಹೆಸರು, ವಿಳಾಸ, ಯಾವುದೇ ಮಾನ್ಯ ಗುರುತಿನ ಚೀಟಿಯನ್ನು ಒಳಗೊಂಡಿದೆ. ಮನೆಯ ಮಾಲೀಕರು ನಿರ್ಗಮನದ ದಿನಾಂಕ ಮತ್ತು ಹಿಂದಿರುಗುವ ದಿನಾಂಕವನ್ನು ನಮೂನೆಯಲ್ಲಿ ತುಂಬಬೇಕು. ಹತ್ತಿರದ ಪೊಲೀಸ್ ಠಾಣೆಯನ್ನು ನಮೂದಿಸಿ ಮತ್ತು ಅವರ ಮೊಬೈಲ್ ಸಂಖ್ಯೆಯನ್ನು ಸೇರಿಸಬೇಕು.

ಈಟಿವಿ ಭಾರತದ ಜತೆ ಮಾತನಾಡಿದ ಎಎಸ್ಪಿ ಆಲ್ಬರ್ಟ್ ಜಾನ್, ‘ಸಾಮಾನ್ಯ ಅಭ್ಯಾಸವೆಂದರೆ ಪೊಲೀಸರು ಪ್ರತಿದಿನ ಬೀಟ್, ಪೆಟ್ರೋಲ್‌ಗೆ ಹೋಗುತ್ತಾರೆ. ಬೀಗ ಹಾಕಿದ ಮನೆಗಳನ್ನು ಗಮನಿಸುತ್ತಾರೆ. ಪಟ್ಟಣದ ವ್ಯಾಪ್ತಿಯಲ್ಲಿ ಪ್ರತಿದಿನ ಸರಾಸರಿ 100 ರಿಂದ 150 ಮನೆಗಳನ್ನು ಪೊಲೀಸರು ಗುರುತಿಸುತ್ತಾರೆ. ಆದರೆ, ಕೆಲವು ಮನೆಗಳು ಕಣ್ತಪ್ಪಿ ಹೋಗುವ ಸಾಧ್ಯತೆಗಳಿವೆ.

ನಾವು ಸಾಮಾನ್ಯವಾಗಿ ಸಾರ್ವಜನಿಕರಿಗೆ ತಮ್ಮ ವಿವರಗಳನ್ನು ಹತ್ತಿರದ ಪೊಲೀಸ್ ಠಾಣೆಗಳಲ್ಲಿ ನೀಡುವಂತೆ ವಿನಂತಿಸುತ್ತೇವೆ. ಪೋಲಿಸ್ ಠಾಣೆಗೆ ವೈಯಕ್ತಿಕವಾಗಿ ಭೇಟಿ ನೀಡುವ ಬದಲು, ಸರಳ ತಂತ್ರಜ್ಞಾನವನ್ನು ಬಳಸುವಂತೆ ನಾವು ಕೇಳುತ್ತಿದ್ದೇವೆ. ದೀರ್ಘ ಪ್ರವಾಸದ ವೇಳೆ ಅವರು ತಮ್ಮ ವಿವರಗಳನ್ನು ತಮ್ಮ ಮನೆಯಿಂದಲೇ ಲಾಗ್​ಇನ್ ಮಾಡಿಕೊಂಡು ಹೊರಡಬಹುದು’ ಎಂದರು.

ಎಎಸ್ಪಿಯ ಟ್ವೀಟ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅನೇಕರು ಈ ಉಪಕ್ರಮವನ್ನು ಶ್ಲಾಘಿಸಿದ್ದಾರೆ. ಇದೇ ವೇಳೆ ‘ನಿಮ್ಮ ಉದ್ದೇಶವನ್ನು ಶ್ಲಾಘಿಸುತ್ತೇವೆ. ನಕಲಿ ಗೂಗಲ್ ಡಾಕ್ ಫಾರ್ಮ್ ಮತ್ತು ನಕಲಿ ಕ್ಯೂಆರ್ ಕೋಡ್ ಅನ್ನು ವಾಟ್ಸ್ಆ್ಯಪ್ ಫಾರ್ವರ್ಡ್‌ಗಳಿಗೆ ಕಳುಹಿಸುವುದು ಸುಲಭ. ಜನರು ತಮ್ಮ ವಿಳಾಸ ಮತ್ತು ಮನೆ ಖಾಲಿ ಮಾಡುವ ದಿನವನ್ನು ನೇರವಾಗಿ ಕಳ್ಳರಿಗೆ ನೀಡಿದಾಗ ಅದು ದುರಂತವಾಗಿ ಬದಲಾಗಬಹುದು. ಆದ್ದರಿಂದ Gov.in ವೆಬ್‌ಸೈಟ್‌ನಿಂದ ಇದನ್ನು ಕಾರ್ಯಗತಗೊಳಿಸುವುದು ಉತ್ತಮ’ ಎಂದು ಟ್ವಿಟರ್ ಬಳಕೆದಾರರೊಬ್ಬರು ಸಲಹೆ ನೀಡಿದ್ದಾರೆ.

ಈ ಸಂದೇಹಗಳಿಗೆ ಉತ್ತರಿಸಿದ ಎಎಸ್ಪಿ, ‘ಮನೆಗಳನ್ನು ಪರಿಶೀಲಿಸಲು ಬೀಟ್, ಪೆಟ್ರೋಲ್ ವ್ಯವಸ್ಥೆ ಯಾವಾಗಲೂ ಇರುತ್ತದೆ. ಬೀಗ ಹಾಕಿದ ಮನೆಗಳ ಬಗ್ಗೆ ತಿಳಿದುಕೊಳ್ಳಲು ಪೊಲೀಸ್ ವೆಬ್‌ಸೈಟ್‌ಗೆ ಹ್ಯಾಕ್ ಮಾಡುವುದು ದರೋಡೆಕೋರರ ದೂರದ ಕಲ್ಪನೆ ಎಂದು ಅವರು ಗಮನಸೆಳೆದರು. ಈ ಉಪಕ್ರಮವನ್ನು ಶ್ಲಾಘಿಸಿ, ಕೆಲವು ಟ್ವಿಟರ್ ಬಳಕೆದಾರರು ತಮ್ಮ ಪ್ರದೇಶದಲ್ಲಿ ಇಂತಹ ಉಪಕ್ರಮವು ಲಭ್ಯವಿದೆಯೇ ಎಂದು ವಿಚಾರಿಸಿದ್ದಾರೆ.

ಓದಿ:ಪ್ರತಿಭಟನಾ ಸ್ಥಳದಲ್ಲಿ ನಮ್ಮ ಸ್ಮಶಾನ ನಿರ್ಮಿಸಿದರೂ.. ರೈತ ಮುಖಂಡ ರಾಕೇಶ್ ಟಿಕಾಯತ್​ ಎಚ್ಚರಿಕೆ

ABOUT THE AUTHOR

...view details