ಲತೇಹರ್ (ಜಾರ್ಖಂಡ್): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾಗಿರುವ ಯಾಸ್ ಚಂಡಮಾರುತವು ಜಾರ್ಖಂಡ್ನ ಹಲವಾರು ಜಿಲ್ಲೆಗಳಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡಿದೆ.
ಜಿಲ್ಲೆಯ ತುಪ್ಪು ಹೆಸ್ಲಾ ಗ್ರಾಮದ ಬಳಿಯ ದಾರ್ಧಾರಿ ನದಿಯ ಮೂಲಕ ಹಾದು ಹೋಗುವಾಗ ವಾಹನವೊಂದು ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದೆ. ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.