ನಂದೂರ್ಬಾರ್(ಮಹಾರಾಷ್ಟ್ರ):ಪ್ರಯಾಣಿಕರಿದ್ದ ಖಾಸಗಿ ಕ್ರೂಸರ್ ವಾಹನವೊಂದು ಕಂದಕದೊಳಗೆ ಬಿದ್ದು, 8 ಮಂದಿ ಸಾವನ್ನಪ್ಪಿ, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ತೋರನ್ಮಲ್ ಕಣಿವೆಯ ಸಿಂದಿದಿಗರ್ ಘಾಟ್ನಲ್ಲಿ ನಡೆದಿದೆ.
ಕಂದಕಕ್ಕೆ ಕ್ರೂಸರ್ ವಾಹನ ಉರುಳಿ 8 ಮಂದಿ ದುರ್ಮರಣ - ನಂದೂರ್ಬಾರ್ ಜಿಲ್ಲೆಯಲ್ಲಿ ಅಪಘಾತ
ಕಂದಕಕ್ಕೆ ಕ್ರೂಸರ್ ವಾಹನ ಉರುಳಿ, 8 ಮಂದಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಸಾವಿನ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ.
ಕಂದಕಕ್ಕೆ ಕ್ರೂಸರ್ ವಾಹನ ಉರುಳಿ, ಎಂಟು ಮಂದಿ ದುರ್ಮರಣ
ಸ್ಥಳೀಯರ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಕಂದಕದೊಳಗೆ ಬಿದ್ದು ಸಾವನ್ನಪ್ಪಿದವರ ಮೃತದೇಹಗಳನ್ನು ಹೊರತೆಗೆಯಲು ಕಾರ್ಯಾಚರಣೆ ನಡೆಯುತ್ತಿದೆ.
ಇದನ್ನೂ ಓದಿ:ಕೃತಕ ಸೂರ್ಯನಿಗಾಗಿ ಬ್ರಿಟನ್ ವಿಜ್ಞಾನಿಗಳ ಪ್ರಯೋಗ: ಕುತೂಹಲಕಾರಿ ಸಂಶೋಧನೆಯ ಪೂರ್ಣ ವಿವರ..
Last Updated : Jul 18, 2021, 8:55 PM IST