ಕರ್ನಾಟಕ

karnataka

ETV Bharat / bharat

ಕೊಳೆತ ಹಣ್ಣು ಕೊಟ್ಟಿದ್ದಕ್ಕೆ ಕಬ್ಬಿಣದ ರಾಡ್‌ನಿಂದ ಹೊಡೆದು ವ್ಯಾಪಾರಿಯ ಕೊಲೆ - ಕಬ್ಬಿಣದ ರಾಡ್‌ನಿಂದ ಹೊಡೆದು ವ್ಯಾಪಾರಿಯ ಕೊಲೆ

ವ್ಯಕ್ತಿಯೊಬ್ಬರಿಗೆ ತರಕಾರಿ ವ್ಯಾಪಾರಿ ಹಲಸಿನ ಹಣ್ಣು ಮಾರಿದ್ದ. ಆದರೆ, ಆ ಹಲಸು ಕೆಟ್ಟಿತ್ತು. ಹೀಗಾಗಿ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಲಾಗಿದೆ.

vegetable-seller-murdered-in-ghaziabad
ಗಾಜಿಯಾಬಾದ್​ನಲ್ಲಿ ತರಕಾರಿ ವ್ಯಾಪಾರಿಯ ಕೊಲೆ

By

Published : Jun 25, 2022, 7:16 PM IST

ನವದೆಹಲಿ/ಗಾಜಿಯಾಬಾದ್:ಕೊಳೆತ ಹಣ್ಣು ಕೊಟ್ಟ ಎಂಬ ಕಾರಣಕ್ಕೆ ತರಕಾರಿ ವ್ಯಾಪಾರಿಯೊಬ್ಬರನ್ನು ಹತ್ಯೆ ಮಾಡಿರುವ ಪ್ರಕರಣ ಗಾಜಿಯಾಬಾದ್‌ನ ಮಧುಬನ್ ಬಾಪುಧಾಮ್ ಪ್ರದೇಶದಲ್ಲಿ ನಡೆದಿದೆ. ಈ ಹತ್ಯೆಯಿಂದ ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಇಲ್ಲಿನ ಅನಿಲ್​​ ಎಂಬಾತನೇ ಕೊಲೆಗೀಡಾದ ವ್ಯಾಪಾರಿ ಎಂದು ಗುರುತಿಸಲಾಗಿದೆ. ಸಂದೀಪ್ ಎಂಬಾತ ಕೊಲೆ ಆರೋಪಿಯಾಗಿದ್ದಾನೆ. ಜೂನ್​ 23ರಂದು ಸಂಜೆ ವ್ಯಾಪಾರಿ ಅನಿಲ್​​ ಆರೋಪಿ ಸಂದೀಪ್​ಗೆ ಹಲಸಿನ ಹಣ್ಣು ಮಾರಿದ್ದ. ಆದರೆ, ಆ ಹಲಸು ಕೆಟ್ಟಿತ್ತು ಎನ್ನಲಾಗ್ತಿದ್ದು.

ಇದರಿಂದ ಸಿಟ್ಟಿಗೆದ್ದ ಆರೋಪಿ ಸಂದೀಪ್ ವ್ಯಾಪಾರಿ ಜೊತೆಗೆ ಜಗಳವಾಡಿದ್ದಲ್ಲದೆ, ತರಕಾರಿ ಸ್ಟಾಂಡ್‌ನಲ್ಲಿ ಇರಿಸಿದ್ದ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ್ದಾನೆ. ಹೀಗಾಗಿ ತೀವ್ರವಾಗಿ ಗಾಯಗೊಂಡಿದ್ದ ವ್ಯಾಪಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಇದರ ವರದಿ ಬರಬೇಕಿದೆ. ಈಗಾಗಲೇ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಪತ್ತೆಗೆ ಪ್ರತ್ಯೇಕ ತಂಡ ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಠಾಣಾಧಿಕಾರಿ ಅವಿನಾಶ್​​ ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ:ಆಸ್ಪತ್ರೆಯ ಎಂಟನೇ ಮಹಡಿಯಿಂದ ಜಿಗಿದ ರೋಗಿ.. ಸತತ 2 ಗಂಟೆಗಳ ರಕ್ಷಣಾ ಕಾರ್ಯ ವಿಫಲ

For All Latest Updates

ABOUT THE AUTHOR

...view details