ಬೆಂಗಳೂರು:ರಾಜಕಾರಣಿ ಮತ್ತು ಸಾಹಿತಿ ಎಂ.ವೀರಪ್ಪ ಮೊಯ್ಲಿ ಅವರಿಗೆ 2020ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಒಲಿದು ಬಂದಿದೆ. ‘ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ' ಮಹಾಕಾವ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿಯು ಫೆಸ್ಟಿವಲ್ ಆಫ್ ಲೆಟರ್ಸ್ ಕಾರ್ಯಕ್ರಮದಲ್ಲಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ವೀರಪ್ಪ ಮೊಯ್ಲಿ ಸೇರಿದಂತೆ 20 ಮಂದಿಗೆ ಪ್ರಶಸ್ತಿ ಒಲಿದುಬಂದಿದೆ. ಅವರಲ್ಲಿ ಮುಖ್ಯವಾಗಿ ಅರುಂಧತಿ ಸುಬ್ರಮಣಿಯಮ್ ಅವರ ಇಂಗ್ಲಿಷ್ ಭಾಷೆಯ 'ವೆನ್ ಗಾಡ್ ಈಸ್ ಎ ಟ್ರಾವೆಲರ್'ಗೆ ಪ್ರಶಸ್ತಿ ಒಲಿದಿದೆ.