ಕಚ್ (ಗುಜರಾತ್):ದೇಶಾದ್ಯಂತ ಆಗಸ್ಟ್ 13 ರಿಂದ 15ರವರೆಗೆ 'ಹರ್ ಘರ್ ತಿರಂಗ' ಅಭಿಯಾನ ನಡೆಯಲಿದೆ. ಅಭಿಯಾನದ ಭಾಗವಾಗಿ ರಾಷ್ಟ್ರಧ್ವಜ ಹಾರಿಸುವಂತೆ ಮಾಧಪರ್ ಗ್ರಾಮದ ವೀರಾಂಗಣರು ದೇಶದ ಜನತೆಗೆ ಮನವಿ ಮಾಡಿದರು.
ಒಂದೇ ರಾತ್ರಿಯಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಭುಜ್ ತಾಲೂಕಿನ ಮಾಧಪರ್ ಗ್ರಾಮದ ವೀರಾಂಗಣರು ರನ್ ವೇ ನಿರ್ಮಿಸಿದ್ದರು. 1971ರ ಯುದ್ಧದಲ್ಲಿ, ಪಾಕಿಸ್ತಾನಿ ಮಿಲಿಟರಿ ವಿಮಾನಗಳ ಬಾಂಬ್ ದಾಳಿಯಲ್ಲಿ ಏರ್‌ಸ್ಟ್ರಿಪ್ ಹಾನಿಗೊಂಡಿದೆ. ದೇಶಕ್ಕೆ ನಮ್ಮ ಅಗತ್ಯವಿದ್ದಾಗ ಪ್ರಾಣವನ್ನು ಪಣಕ್ಕಿಟ್ಟು ನಮ್ಮ ಕುಟುಂಬ, ಮಕ್ಕಳ ಬಗ್ಗೆ ತಲೆಕೆಡಿಸಿಕೊಳ್ಳದೇ ವಿಮಾನ ನಿಲ್ದಾಣದ ರನ್ ವೇ ನಿರ್ಮಿಸುವ ಕೆಲಸ ಮಾಡಿದ್ದೇವೆ. ಕೇವಲ ಒಂದು ಕರೆಗೆ ಅನೇಕ ಮಹಿಳೆಯರು ತಮ್ಮ ಮನೆಗಳನ್ನು ತೊರೆದು ಪಾಕಿಸ್ತಾನದ ಬಾಂಬ್ ದಾಳಿಯ ನಡುವೆ ರಾತ್ರೋರಾತ್ರಿ ಭುಜ್ ಏರ್‌ಸ್ಟ್ರಿಪ್ ಅನ್ನು ನಿರ್ಮಿಸುವ ಮೂಲಕ ದೇಶದ ರಕ್ಷಣೆಗೆ ಕೊಡುಗೆ ನೀಡಿದ್ದಾರೆ.