ತೂತುಕುಡಿ (ತಮಿಳುನಾಡು):ತಾಂತ್ರಿಕ ಕಾರಣಾಂತರಗಳಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿದ್ದ ಕೆಲವು ದಿನಗಳ ನಂತರ, ಸ್ಟರ್ಲೈಟ್ ತಾಮ್ರ ಕರಗಿಸುವ ಘಟಕವು ವೈದ್ಯಕೀಯ ಆಮ್ಲಜನಕ ಉತ್ಪಾದಯನ್ನು ಪುನರಾರಂಭಿಸಿದೆ.
ಈ ವೈದ್ಯಕೀಯ ಆಮ್ಲಜನಕದ ಉತ್ಪಾದನೆಯು ಮೇ 13 ರಂದು ವೇದಾಂತ ಒಡೆತನದ ಸ್ಟರ್ಲೈಟ್ ತಾಮ್ರ ಸ್ಥಾವರದಲ್ಲಿ ಪ್ರಾರಂಭವಾಗಿದೆ.
ಸ್ಥಾವರವು ಕಾರ್ಯಾಚರಣೆ ಪ್ರಾರಂಭಿಸಿದ ನಂತರ, ಸಂಜೆಯ ವೇಳೆಗೆ ಸುಮಾರು 6.34 ಮೆ.ಟನ್ ಎಂ.ಜಿ ಆಮ್ಲಜನಕವನ್ನು ಪೂರೈಸಿದೆ.
ಇನ್ನು ಪರಿಸರ ಕಾಳಜಿಯ ಬಗ್ಗೆ ಕಂಪನಿಯ ವಿರುದ್ಧದ ಪ್ರತಿಭಟನೆಯ ಭಾಗವಾಗಿದ್ದ 13 ಪ್ರತಿಭಟನಾಕಾರರು ಪೊಲೀಸ್ ಗುಂಡಿನ ದಾಳಿಯಲ್ಲಿ ಕೊಲ್ಲಲ್ಪಟ್ಟ ಕೆಲವು ದಿನಗಳ ನಂತರ, 2018 ರ ಮೇ ತಿಂಗಳಲ್ಲಿ ಈ ಸ್ಥಾವರವನ್ನು ರಾಜ್ಯ ಸರ್ಕಾರ ನಿರ್ಬಂಧ ಮಾಡಿತ್ತು.