ಕರ್ನಾಟಕ

karnataka

ETV Bharat / bharat

ದೇಹದ ಅಸಮತೋಲನ ಕಾಯಿಲೆಗೆ ಒಳಗಾದ ನಟ ವರುಣ್ ಧವನ್​ - ದೇಹದ ಅಸಮತೋಲನ ಕಾಯಿಲೆ

ದೇಹದ ಅಸಮತೋಲನಕ್ಕೆ ಕಾರಣವಾದ ವೆಸ್ಟಿಬುಲರ್ ಹೈಪೋಫಂಕ್ಷನ್ ಕಾಯಿಲೆಯ ಬಗ್ಗೆ ವರುಣ್ ಧವನ್ ಮಾಹಿತಿ ಹಂಚಿಕೊಂಡಿದ್ದಾರೆ.

Varun Dhawan gives update on vestibular hypofunction diagnosis
ದೇಹದ ಅಸಮತೋಲನ ಕಾಯಿಲೆಗೆ ಒಳಗಾದ ನಟ ವರುಣ್ ಧವನ್​

By

Published : Nov 8, 2022, 11:09 PM IST

ಮುಂಬೈ :ತಮ್ಮ ದೇಹದ ಅಸಮತೋಲನಕ್ಕೆ ಕಾರಣವಾದ ವೆಸ್ಟಿಬುಲರ್ ಹೈಪೋಫಂಕ್ಷನ್ ಬಗ್ಗೆ ಬಾಲಿವುಡ್ ನಟ ವರುಣ್ ಧವನ್ ಹಂಚಿಕೊಂಡಿದ್ದಾರೆ. ಇದರಿಂದ ಹೊರಬರಲು ಜೀವನಶೈಲಿಯನ್ನು ಬದಲಾಯಿಸಿದ್ದಾಗಿ ವರುಣ್ ಧವನ್ ಹೇಳಿದ್ದಾರೆ. ದೇಹದ ಸಮತೋಲನದ ಮೇಲೆ ಕಿವಿಯ ಒಳಗಿನ ಅಂಗಾಂಗಗಳು ಹೇಗೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಧವನ್, ಕೆಲವು ದಿನಗಳಿಂದ ನನ್ನ ಹಿತೈಷಿಗಳು ನನ್ನ ಮೇಲೆ ತೋರಿದ ಪ್ರೀತಿ ಮತ್ತು ಕಾಳಜಿಗೆ ನಾನು ಆಭಾರಿಯಾಗಿದ್ದೇನೆ. ಇತ್ತೀಚಿಗೆ ನಾನು ಸಂದರ್ಶನವೊಂದರಲ್ಲಿ ನನ್ನ ಆರೋಗ್ಯದ ಬಗ್ಗೆ ಮಾತನಾಡಿದ್ದೆ. ನನ್ನ ಆರೋಗ್ಯದ ಬಗ್ಗೆ ನೀವು ತೋರಿದ ಕಾಳಜಿ ಮತ್ತು ಪ್ರೀತಿಯು ನನ್ನ ಆರೋಗ್ಯ ಸುಧಾರಿಸಲು ಶಕ್ತಿ ತುಂಬಿದೆ ಎಂದು ಹೇಳಿದ್ದಾರೆ.

ಆರೋಗ್ಯವನ್ನು ಉತ್ತಮಪಡಿಸಲು ನಾನು ಯೋಗ, ಈಜು, ಫಿಸಿಯೋ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಿದ್ದೇನೆ. ಸೂರ್ಯನ ಶಾಖವನ್ನು ಪಡೆಯುತ್ತಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ದೇವರ ಆಶೀರ್ವಾದ ಇದೆ ಎಂದು ಅವರು ಹೇಳಿದ್ದಾರೆ.

ವರುಣ್​​ ಧವನ್ ಅಭಿನಯದ ಹಾರರ್ ಕಾಮಿಡಿ ಸಿನೆಮಾ ಭೇಡಿಯಾ ನವೆಂಬರ್ 25ರಂದು ಬಿಡುಗಡೆಯಾಗಲಿದೆ. ಈ ಸಿನೆಮಾವನ್ನು ಅಮರ್ ಕೌಶಿಕ್ ನಿರ್ದೇಶಿಸಿದ್ದಾರೆ. ಸಿನೆಮಾದಲ್ಲಿ ಕೃತಿ ಸನೋನ್, ದೀಪಕ್ ಡೊಬ್ರಿಯಾಲ್ ಮತ್ತು ಅಭಿಷೇಕ್ ಬ್ಯಾನರ್ಜಿ ಮುಂತಾದವರು ನಟಿಸಿದ್ದಾರೆ. ಈ ಸಿನೆಮಾವನ್ನು ದಿನೇಶ್ ವಿಜನ್ ನಿರ್ಮಿಸಿದ್ದು, ಜಿಯೋ ಸ್ಟುಡಿಯೋಸ್ ಮತ್ತು ವಿಜಾನ್ಸ್ ಮ್ಯಾಡಾಕ್ ಫಿಲ್ಮ್ಸ್ ಪ್ರಸ್ತುತಪಡಿಸಲಿದ್ದಾರೆ.

ಇದನ್ನೂ ಓದಿ :ಪಾಕಿಸ್ತಾನದಲ್ಲಿ ಶಾರುಖ್​ ಖಾನ್​ ಅಭಿಮಾನಿಯ ಅಭಿಮಾನ..! ರಾವಲ್ಪಿಂಡಿ ಎಕ್ಸ್‌ಪ್ರೆಸ್ ಪ್ರತಿಕ್ರಿಯೆ ಹೀಗಿದೆ

ABOUT THE AUTHOR

...view details