ಕರ್ನಾಟಕ

karnataka

ETV Bharat / bharat

ಗಣತಂತ್ರ ದಿನಾಚರಣೆ... ವಿದ್ಯುತ್​ ದೀಪಗಳಿಂದ ಕಂಗೊಳಿಸುತ್ತಿವೆ ಸರ್ಕಾರಿ ಕಟ್ಟಡಗಳು - ವಿದ್ಯುತ್​ ದೀಪಾಲಂಕಾರ

73ನೇ ಗಣತಂತ್ರ ದಿನಾಚರಣೆಗೆ ದೇಶವು ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ವಿಶೇಷ ದಿನದ ಅಂಗವಾಗಿ ಸರ್ಕಾರಿ ಕಟ್ಟಡಗಳು, ಸೇತುವೆ ಅಣೆಕಟ್ಟು, ತ್ರಿವರ್ಣ ಸೇರಿದಂತೆ ವಿದ್ಯುತ್​ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.

Various government buildings illuminated ahead of the Republic Day
ವಿದ್ಯುತ್​ ದೀಪಗಳಿಂದ ಕಂಗೊಳಿಸುತ್ತಿವೆ ಸರ್ಕಾರಿ ಕಟ್ಟಡಗಳು

By

Published : Jan 26, 2022, 4:37 AM IST

Updated : Jan 26, 2022, 5:48 AM IST

ನವದೆಹಲಿ: ದೇಶಾದ್ಯಂತ 73ನೇ ಗಣತಂತ್ರ ದಿನಾಚರಣೆ ಅಂಗವಾಗಿ ಸರ್ಕಾರಿ ಕಟ್ಟಡಗಳು, ಸೇತುವೆ ಅಣೆಕಟ್ಟು, ತ್ರಿವರ್ಣ ಸೇರಿದಂತೆ ವಿದ್ಯುತ್ ದೀಪಾಲಂಕಾರದಿಂದ ನೋಡುಗರನ್ನು ಸೆಳೆಯುತ್ತಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಗಣರಾಜ್ಯೋತ್ಸವ ಆಚರಣೆಗಾಗಿ ದೋಡಾದ ಗಣಪತ್ ಸೇತುವೆ, ಜಮ್ಮುವಿನ ತಾವಿ ರೈಲು ನಿಲ್ದಾಣ ದೀಪಾಲಂಕಾರದಿಂದ ಝಗಮಗಿಸುತ್ತಿದೆ. ಗುಜರಾತ್​ನ ರಾಜ್‌ಕೋಟ್‌ನಲ್ಲೂ ಕೂಡ ವಿವಿಧ ಸರ್ಕಾರಿ ಕಟ್ಟಡಗಳು ವಿದ್ಯುತ್​ ದೀಪಗಳಿಂದ ಅಲಂಕೃತಗೊಂಡಿವೆ.

ವಿದ್ಯುತ್​ ದೀಪಗಳಿಂದ ಕಂಗೊಳಿಸುತ್ತಿವೆ ಸರ್ಕಾರಿ ಕಟ್ಟಡಗಳು

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಪಶ್ಚಿಮ ಬಂಗಾಳದಲ್ಲಿ ರಾಜಭವನ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೋಲ್ಕತ್ತಾದ ಹಳೆಯ ಟೆಲಿಗ್ರಾಫ್ ಕಚೇರಿಗಳು ತ್ರಿವರ್ಣಗಳಿಂದ ಪ್ರಕಾಶಿಸುತ್ತಿವೆ. ತಮಿಳುನಾಡಿನ ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಮತ್ತು ಚೆನ್ನೈ ರೈಲು ನಿಲ್ದಾಣಗಳು ತ್ರಿವರ್ಣದಲ್ಲಿ ಕಂಗೊಳಿಸುತ್ತಿವೆ.

ಇದನ್ನೂ ಓದಿ:73ನೇ ಗಣತಂತ್ರ ದಿನದ ಸಂಭ್ರಮ... ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಗಿ ಭದ್ರತೆ

Last Updated : Jan 26, 2022, 5:48 AM IST

ABOUT THE AUTHOR

...view details