ಕರ್ನಾಟಕ

karnataka

ETV Bharat / bharat

ಶತ್ರುಗಳಿಂದ ಸೈನಿಕರ ರಕ್ಷಣೆ.. ಆರ್ಮಿ ಆಂಟಿ ಅಟ್ಯಾಕ್ ಸಿಸ್ಟಮ್ ಅಭಿವೃದ್ಧಿಗೊಳಿಸಿದ ಶ್ಯಾಮ್ ಚೌರಾಸಿಯಾ - ಸೇನೆ ದಾಳಿ ನಿಗ್ರಹ ವ್ಯವಸ್ಥೆ

ಸೈನಿಕರನ್ನು ಶತ್ರುಗಳ ದಾಳಿಯಿಂದ ರಕ್ಷಿಸಲು ಶ್ಯಾಮ್ ಚೌರಾಸಿಯಾ ಎಂಬುವರು ಆರ್ಮಿ ಆಂಟಿ ಅಟ್ಯಾಕ್ ಸಿಸ್ಟಮ್ ಎಂಬ ಸಾಧನವನ್ನು ಸಿದ್ಧಪಡಿಸಿದ್ದಾರೆ. ಈ ಸಾಧನದ ಸಹಾಯದಿಂದ 1 ಕಿಲೋಮೀಟರ್ ದೂರದಲ್ಲಿರುವ ಭಯೋತ್ಪಾದಕರ ಚಟುವಟಿಕೆಗಳ ಮೇಲೆ ನಿಗಾ ಇಡಲು ಅನುಕೂಲವಾಗುತ್ತದೆ.

army anti attack system
Etv Bharat, ಆರ್ಮಿ ಆಂಟಿ ಅಟ್ಯಾಕ್ ಸಿಸ್ಟಮ್

By

Published : Aug 15, 2022, 10:11 AM IST

ವಾರಾಣಸಿ: ದೇಶದ ಸೈನಿಕರ ವಿರುದ್ಧ ದಾಳಿ ನಡೆಸುವ ಭಯೋತ್ಪಾದಕರ ಉದ್ದೇಶವನ್ನು ವಿಫಲಗೊಳಿಸಲು ಶ್ಯಾಮ್ ಚೌರಾಸಿಯಾ ಎಂಬಾತ ಆರ್ಮಿ ಆಂಟಿ ಅಟ್ಯಾಕ್ ಸಿಸ್ಟಮ್ (ಸೇನೆ ದಾಳಿ ನಿಗ್ರಹ ವ್ಯವಸ್ಥೆ) ಅನ್ನು ಅಭಿವೃದ್ಧಿಗೊಳಿಸಿದ್ದಾರೆ. ಇದರ ಸಹಾಯದಿಂದ ಯೋಧರು ಭಯೋತ್ಪಾದಕ ಚಟುವಟಿಕೆಗಳ ಮೇಲೆ ಎಚ್ಚರ ವಹಿಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಬಹುದು. ಈ ಸಾಧನವು ಮಾನವರಹಿತವಾಗಿದೆ.

ಆರ್ಮಿ ಆಂಟಿ ಅಟ್ಯಾಕ್ ಸಿಸ್ಟಮ್ ಅಭಿವೃದ್ಧಿಗೊಳಿಸಿದ ಶ್ಯಾಮ್ ಚೌರಾಸಿಯಾ

ವಾರಾಣಸಿಯ ಅಶೋಕ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಜೂನಿಯರ್ ಸೈಂಟಿಸ್ಟ್ ಶ್ಯಾಮ್ ಚೌರಾಸಿಯಾ ಎಂಬುವರು ಸೈನಿಕರ ಸುರಕ್ಷತೆಗಾಗಿ ಆರ್ಮಿ ಆಂಟಿ ಅಟ್ಯಾಕ್ ಸಿಸ್ಟಮ್ ಅನ್ನು ಕಂಡುಹಿಡಿದ್ದಾರೆ. ಸೈನಿಕರನ್ನು ಶತ್ರುಗಳ ದಾಳಿಯಿಂದ ರಕ್ಷಿಸಲು ಶ್ಯಾಮ್ ಈ ಸಾಧನವನ್ನು ಸಿದ್ಧಪಡಿಸಿದ್ದಾರೆ. ಹಗಲು ರಾತ್ರಿ ಈ ಯಂತ್ರವು ಸಮೀಪಿಸುತ್ತಿರುವ ಶತ್ರುಗಳ ಮಾಹಿತಿಯನ್ನು ಸೇನಾ ಸಿಬ್ಬಂದಿಗೆ ತಲುಪಿಸಲು ನೆರವಾಗುತ್ತದೆ. ಆರ್ಮಿ ಬೇಸ್ ಕ್ಯಾಂಪ್‌ನಿಂದ 1 ಕಿಲೋಮೀಟರ್ ಪ್ರದೇಶದಲ್ಲಿ ಸೇನಾ ವಿರೋಧಿ ದಾಳಿ ವ್ಯವಸ್ಥೆಯನ್ನು ಮಾಡಬಹುದು.

ಈ ಸಾಧನವು ದ್ವಿಮುಖ ಸಂವಹನವನ್ನು ಆಧರಿಸಿದೆ. ಶಿಬಿರದಿಂದ ಒಂದು ಕಿಲೋಮೀಟರ್ ದೂರದಲ್ಲಿ ಈ ಸಾಧನವನ್ನು ಸ್ಥಾಪಿಸಿದ ನಂತರ ಶತ್ರುಗಳು ಸೈನಿಕರ ಶಿಬಿರದ ಬಳಿ ಬರಲು ಪ್ರಯತ್ನಿಸಿದರೆ, ದೂರದಲ್ಲಿರುವ ಸೈನಿಕರಿಗೆ ಈ ಯಂತ್ರವು ಎಚ್ಚರಿಕೆ ನೀಡುತ್ತದೆ. ಈ ಸಾಧನದ ಸಹಾಯದಿಂದ ಸೈನಿಕರು ತಮ್ಮನ್ನು ರಕ್ಷಿಸಿಕೊಳ್ಳಬಹುದು. ಅಷ್ಟೇ ಅಲ್ಲದೇ ಈ ಯಂತ್ರಕ್ಕೆ ಗನ್ ಕೂಡ ಜೋಡಿಸಲಾಗಿದೆ. ಕ್ಯಾಮೆರಾದ ಅಸಹಾಯದಿಂದ ಸೇನಾ ಸಿಬ್ಬಂದಿ ರೇಡಿಯೋ ರಿಮೋಟ್‌ನಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಶತ್ರುಗಳತ್ತ ಗುರಿಯಿಟ್ಟು ಗುಂಡಿನ ದಾಳಿ ನಡೆಸಲು ಸಾಧ್ಯವಾಗುತ್ತದೆ.

ಈ ಯಂತ್ರವು ಸುಮಾರು 4 ಕೆಜಿ ಇದೆ. ಇದನ್ನು ತಯಾರಿಸಲು 1 ತಿಂಗಳು ತೆಗೆದುಕೊಂಡಿದ್ದು, 20 ರಿಂದ 25 ಸಾವಿರ ಖರ್ಚು ಮಾಡಲಾಗಿದೆ. ಶ್ಯಾಮ್ ಚೌರಾಸಿಯಾ ಸಾಧನೆಗೆ ಅಶೋಕ ಸಂಸ್ಥೆಯ ಚೇರ್ಮನ್ ಅಂಕಿತ್ ಮೌರ್ಯ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ವಿವಿಧತೆಯಲ್ಲಿ ಏಕತೆಯೇ ಭಾರತದ ಶಕ್ತಿ.. 100ನೇ ವರ್ಷದ ಸ್ವಾತಂತ್ರ್ಯ ದಿನಕ್ಕೆ ಪಂಚ ಪ್ರಾಣ ಪ್ರತಿಪಾದಿಸಿದ ಮೋದಿ

ABOUT THE AUTHOR

...view details