ಕರ್ನಾಟಕ

karnataka

ETV Bharat / bharat

ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ನೀಡಿಕೆ: ದೇಶದಲ್ಲೇ ಪ್ರಥಮ ಸ್ಥಾನ ಪಡೆದ ವಾರಣಾಸಿ ಏರ್​ಪೋರ್ಟ್​

ಪ್ರತಿವರ್ಷದಂತೆ ಈ ವರ್ಷವು ವರ್ಷವೂ ವಿಮಾನ ನಿಲ್ದಾಣ ಕೌನ್ಸಿಲ್ ವಿಮಾನ ನಿಲ್ದಾಣ ಸೇವಾ ಗುಣಮಟ್ಟ ಸಮೀಕ್ಷೆಯನ್ನು ನಡೆಸುತ್ತದೆ. ಅದರಂತೆ ಕಳೆದ 2020 ಜನವರಿಯಿಂದ ಡಿಸೆಂಬರ್​ವರೆಗೆ ನಡೆಸಿದ ಸಮೀಕ್ಷೆಯಲ್ಲಿ ಬಾಬತ್‌ಪುರದ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದ 22 ವಿಮಾನ ನಿಲ್ದಾಣಗಳಲ್ಲಿ ಪ್ರಥಮ ಸ್ಥಾನ ಪಡೆದಿದೆ.

ವಾರಣಾಸಿ ವಿಮಾನ ನಿಲ್ದಾಣ
Varanasi airport

By

Published : Feb 25, 2021, 11:42 AM IST

ವಾರಣಾಸಿ:ಪಿಎಂ ಮೋದಿಯವರ ಸಂಸದೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಎಲ್ಲಾ ಅಭಿವೃದ್ಧಿ ಕಾರ್ಯಗಳ ಪೈಕಿ ಬಾಬತ್‌ಪುರದ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದ 22 ವಿಮಾನ ನಿಲ್ದಾಣಗಳ ಪೈಕಿ ಪ್ರಥಮ ಸ್ಥಾನ ಪಡೆದಿದೆ.

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದ ಈ ಶ್ರೇಯಾಂಕಗಳನ್ನು ನೀಡಲಾಗಿದೆ. ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಎರಡನೇ ಸ್ಥಾನ ಮತ್ತು ಲಖನೌದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮೂರನೇ ಸ್ಥಾನದಲ್ಲಿದೆ.

ಪ್ರತಿವರ್ಷ ವಿಮಾನ ನಿಲ್ದಾಣ ಕೌನ್ಸಿಲ್ ವಿಮಾನ ನಿಲ್ದಾಣ ಸೇವಾ ಗುಣಮಟ್ಟ ಸಮೀಕ್ಷೆಯನ್ನು ನಡೆಸುತ್ತದೆ. ಅದರಂತೆ ಕಳೆದ 2020 ರ ಜನವರಿಯಿಂದ ಡಿಸೆಂಬರ್​​​ವರೆಗೆ ನಡೆಸಿದ ಸಮೀಕ್ಷೆಯಲ್ಲಿ ವಾರಣಾಸಿ ವಿಮಾನ ನಿಲ್ದಾಣಕ್ಕೆ 4.94 ರೇಟಿಂಗ್ ಸಿಕ್ಕಿದ್ದು, ಎರಡನೇ ಸ್ಥಾನದಲ್ಲಿರುವ ಅಹಮದಾಬಾದ್ ವಿಮಾನ ನಿಲ್ದಾಣವು 4.93, ಲಕ್ನೋ ವಿಮಾನ ನಿಲ್ದಾಣ 4.93 ಮತ್ತು ಅಮೃತಸರ ವಿಮಾನ ನಿಲ್ದಾಣವು 4.93 ರೇಟಿಂಗ್ ಪಡೆದಿವೆ.

ಓದಿ: ಕೇರಳ ಮೀನುಗಾರರೊಂದಿಗೆ ಸಮುದ್ರದಲ್ಲಿ ಈಜಾಟ: ರಾಹುಲ್​ ಗಾಂಧಿ ಸಂಭ್ರಮ ನೋಡಿ

ವಾರಣಾಸಿ, ಅಹಮದಾಬಾದ್, ಲಕ್ನೋ, ಅಮೃತಸರ, ಗೋವಾ, ತಿರುವನಂತಪುರ, ಇಂದೋರ್, ಶ್ರೀನಗರ, ಕ್ಯಾಲಿಕಟ್, ರಾಯ್‌ಪುರ, ಕೋಲ್ಕತ್ತಾ, ಜೈಪುರ ಸೇರಿದಂತೆ ಒಟ್ಟು ದೇಶದ 22 ವಿಮಾನ ನಿಲ್ದಾಣಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿತ್ತು. ಇದರಲ್ಲಿ ವಾರಣಾಸಿ ನಂ. 1 ಸ್ಥಾನ ಪಡೆದಿದೆ.

ಸಮೀಕ್ಷೆಯಲ್ಲಿ ವಿಮಾನ ನಿಲ್ದಾಣದಲ್ಲಿ ವಾಹನ ಸೌಲಭ್ಯ, ಪಾರ್ಕಿಂಗ್ ಸೌಲಭ್ಯ, ಪಾರ್ಕಿಂಗ್ ಶುಲ್ಕ, ಭದ್ರತೆ, ನೌಕರರ ವರ್ತನೆಯೊಂದಿಗೆ ಅವರ ದಕ್ಷತೆ ಮತ್ತು ಭದ್ರತಾ ಪರಿಶೀಲನೆಯಲ್ಲಿ ತೆಗೆದುಕೊಂಡ ಸಮಯ ಮತ್ತು ಸ್ವಚ್ಛತೆ ಸೇರಿದಂತೆ ಒಟ್ಟು 33 ಪ್ರಶ್ನೆಗಳನ್ನು ಪ್ರಯಾಣಿಕರಿಗೆ ಕೇಳಲಾಗಿತ್ತು. ಇದರಲ್ಲಿ ಬಂದ ಉತ್ತರಗಳ ಆಧಾರದ ಮೇಲೆ ವಾರಣಾಸಿ ವಿಮಾನ ನಿಲ್ದಾಣಕ್ಕೆ ಪ್ರಥಮ ಸ್ಥಾನ ಸಿಕ್ಕಿದೆ. ಇದು ಬಹಳ ಹೆಮ್ಮೆಯ ವಿಷಯವಾಗಿದೆ ಎಂದು ವಿಮಾನ ನಿಲ್ದಾಣ ನಿರ್ದೇಶಕರು ಹೇಳಿದ್ದಾರೆ.

ABOUT THE AUTHOR

...view details