ಕರ್ನಾಟಕ

karnataka

ETV Bharat / bharat

ಪಾಕ್​​ನಲ್ಲಿ ಧ್ವಂಸಗೊಂಡ ಹಿಂದೂ ದೇವಾಲಯದ ಪುನರ್ ನಿರ್ಮಾಣ: ಸ್ಥಳೀಯ ಸರ್ಕಾರದ ಘೋಷಣೆ - ಪಾಕ್​​ನಲ್ಲಿ ಹಿಂದೂ ದೇವಾಲಯ ಪುನರ್ನಿರ್ಮಾಣ

ಹಿಂದೂ ದೇವಾಲಯದ ಪುನರ್ ನಿರ್ಮಾಣ ಕುರಿತು ಖಚಿತಪಡಿಸಿಕೊಳ್ಳಲು ಸಂಬಂಧಪಟ್ಟವರಿಗೆ ಪುಖ್ತನ್ಖ್ವಾ ಪ್ರಾಂತ್ಯದ ಮುಖ್ಯಮಂತ್ರಿ ಮಹಮೂದ್ ಖಾನ್​ ಸೂಚನೆ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು 3 ಧರ್ಮ ಗುರುಗಳು ಸೇರಿದಂತೆ 45 ಜನರನ್ನು ಬಂಧಿಸಿದ್ದಾರೆ.

Vandalised Pak Hindu temple to be reconstructed
ಪಾಕ್​​ನಲ್ಲಿ ಧ್ವಂಸಗೊಂಡ ಹಿಂದೂ ದೇವಾಲಯದ ಪುನರ್ ನಿರ್ಮಾಣಕ್ಕೆ ಮುಂದಾದ ಸರ್ಕಾರ

By

Published : Jan 2, 2021, 10:06 AM IST

ಪೇಶಾವರ್ (ಪಾಕಿಸ್ತಾನ): ಪಾಕಿಸ್ತಾನದ ಖೈಬರ್ ಪುಖ್ತುನ್ಖ್ವಾ ಪ್ರಾಂತ್ಯದ ಕರಾಕ್ ಜಿಲ್ಲೆಯಲ್ಲಿ ನೆಲಸಮಗೊಳಿಸಿದ್ದ ದೇವಾಲಯದ ಪುನರ್​ ನಿರ್ಮಾಣಕ್ಕೆ ಅಲ್ಲಿನ ಸ್ಥಳೀಯ ಸರ್ಕಾರ ನಿರ್ಧರಿಸಿದೆ. ಕರಾಕ್​​​ನ ಟೆರ್ರಿ ಪ್ರದೇಶದಲ್ಲಿದ್ದ ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಿ ಅಲ್ಲಿನ ಜನರು ಧ್ವಂಸಗೊಳಿಸಿದ್ದರು.

ಈ ಘಟನೆಯನ್ನ ಗಂಭೀರವಾಗಿ ಪರಿಗಣಿಸಿರುವ ಖೈಬರ್ ಪುಖ್ತುನ್ಖ್ವಾ (ಕೆಪಿ) ಸರ್ಕಾರವು ಹಿಂದೂ ದೇವಾಲಯದ ಪುನರ್ ನಿರ್ಮಾದ ಘೋಷಣೆ ಮಾಡಿದ್ದು, ದಾಳಿಕೋರರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಮುಖ್ಯಮಂತ್ರಿ ಖೈಬರ್ ಪುಖ್ತುನ್ಖ್ವಾ (ಕೆಪಿ) ಮಹಮೂದ್ ಖಾನ್, ಹಿಂದೂ ದೇವಾಲಯದ ಪುನರ್ ನಿರ್ಮಾಣ ಕುರಿತು ಖಚಿತಪಡಿಸಿಕೊಳ್ಳಲು ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದಾರೆ. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಪೊಲೀಸ್ ಅಧಿಕಾರಿಗಳು 3 ಧರ್ಮಗುರುಗಳು ಸೇರಿದಂತೆ 45 ಜನರನ್ನು ಬಂಧಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:ಕಂಗನಾ vs ಬಿಎಂಸಿ: ಫ್ಲ್ಯಾಟ್​ ವಿಲೀನ ವೇಳೆ ರಣಾವತ್ ನಿಯಮ ಉಲ್ಲಂಘಿಸಿದ್ದಾರೆ ಎಂದ ಕೋರ್ಟ್

ಹಿಂದೂ ದೇವಾಲಯದ ವಿಸ್ತರಣೆಯ ವಿವಾದದ ಬಗ್ಗೆ ಕೋಪಗೊಂಡವರು ಮತ್ತು ಹಿಂಸಾತ್ಮಕ ಪ್ರತಿಭಟನಾಕಾರರು ಶ್ರೀ ಪರಮಹನ್ಸ್ಜಿಮಹಾರಾಜರ ಸಮಾಧಿಯ ಮೇಲೆ ಬುಧವಾರ ದಾಳಿ ನಡೆಸಿ ಬೆಂಕಿ ಹಚ್ಚಿದ್ದರು.

ABOUT THE AUTHOR

...view details