ವಾಶಿಮ್(ಮಹಾರಾಷ್ಟ್ರ):ಟ್ರ್ಯಾಕ್ಟರ್ ಮತ್ತು ವ್ಯಾನ್ ನಡುವೆ ಅಪಘಾತ ಸಂಭವಿಸಿ ನಾಲ್ವರು ಸಾವನ್ನಪ್ಪಿ, 10 ಮಂದಿ ಗಾಯಗೊಂಡಿರುವ ಘಟನೆ ಸೋಯತ್ಗ್ ಫತೇಹ್ ಬಳಿಯ ವಾಶಿಮ್-ಶೆಲುಬಜಾರ್ ರಸ್ತೆಯಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ದುರ್ಘಟನೆ ಫೆಬ್ರವರಿ 15ರ ಮಂಗಳವಾರ ರಾತ್ರಿ 9 ಗಂಟೆಯ ಸುಮಾರಿಗೆ ನಡೆದಿದೆ. ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಶಿಮ್ಗೆ ಹಿಂದಿರುಗುತ್ತಿದ್ದ ವ್ಯಾನ್ಗೆ ಟ್ರ್ಯಾಕ್ಟರ್ ಡಿಕ್ಕಿಯಾಗಿದೆ.