ಇಂದು ಪ್ರೇಮಿಗಳ ದಿನ. ಆದರೆ ಪ್ರೇಮ ಎಂದರೆ ಒಂದು ದಿನದ ಸಂಭ್ರಮವಲ್ಲ, ಪ್ರೇಮವನ್ನು ಪ್ರತಿದಿನ, ಪ್ರತಿಕ್ಷಣ ಅನುಭವಿಸಬೇಕು. ಒಂದು ದಿನದ ಆಚರಣೆಯ ಪ್ರೀತಿ–ಪ್ರೇಮಕ್ಕೆಲ್ಲ ಅರ್ಥವಿಲ್ಲ ಎಂದು ಹೇಳುವವರೂ ನಮ್ಮ ನಡುವೆ ಇದ್ದಾರೆ. ಪ್ರೇಮಿಗಳ ದಿನದ ಆಚರಣೆಯ ಬಗ್ಗೆ ಇಂದಿಗೂ ದ್ವಂದ್ವವಿದೆ. ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸುವವರ ಪ್ರಕಾರ ಈ ದಿನದ ಆಚರಣೆಗೆ ಅರ್ಥವಿಲ್ಲ. ಆದರೆ ಪ್ರೇಮಿಗಳ ಪ್ರಕಾರ ಈ ದಿನ ಅವರಿಗೆ ಪ್ರಮುಖವಾಗಿದೆ. ಅದೇನೇ ಬೇಕು ಬೇಡಗಳಿದ್ದರೂ ಪ್ರೇಮಿಗಳ ದಿನದ ಸಂಭ್ರಮ ಮಾತ್ರ ಎಂದಿಗೂ ಮಾಸಿಲ್ಲ. ಪ್ರೀತಿಯ ಬಗ್ಗೆ ಹಿಂದೂ ಸಂಪ್ರದಾಯಗಳಲ್ಲಿ, ದೈವಿಕ ದಂಪತಿಗಳ ಅನೇಕ ಕಥೆಗಳಿವೆ. ಪ್ರೀತಿಯ ಆದರ್ಶವನ್ನು ಸಾಕಾರಗೊಳಿಸುವ ದೇವತೆಗಳು ಮತ್ತು ಅವರ ಕಥೆಗಳು ನಮಗೆ ಆದರ್ಶ. ಪ್ರೀತಿ ಎಂದರೆ ಶತಮಾನಗಳಿಂದ ಹಿಂದೂ ಭಕ್ತರ ಕಲ್ಪನೆಯನ್ನು ವಿಶೇಷವಾಗಿ ಉಳಿಸಿಕೊಂಡಿರುವ ಒಂದು ಜೋಡಿ ರಾಧಾ ಮತ್ತು ಕೃಷ್ಣ.
ವಿಭಿನ್ನ ಪ್ರೇಮಕಥೆ: ರಾಧಾ ಕೃಷ್ಣ ಪ್ರೀತಿ ಕಥೆ ಸಾಕಷ್ಟು ಜನರಿಗೆ ತಿಳಿದಿರಬಹುದು. ರಾಧಾ-ಕೃಷ್ಣರ ಪ್ರೀತಿ ಎಷ್ಟು ಬಲವಾಗಿತ್ತೆಂದರೆ ಎಲ್ಲಾದರು ಕೃಷ್ಣನಿಗೆ ಏಟಾದರೆ ಅದನ್ನು ಶ್ರೀಕೃಷ್ಣ ತನ್ನ ರಾಧೆಗೆ ಏನೋ ಚಿಂತೆಯಲ್ಲಿದ್ದಾಳೆ, ಸಂಕಷ್ಟದಲ್ಲಿದ್ದಾಳೆಂದು ಭಾವಿಸುತ್ತಿದ್ದನಂತೆ. ಪುರಾಣಗಳಲ್ಲಿ ರಾಧೆಯು ಶ್ರೀಕೃಷ್ಣನ ಶಾಶ್ವತ ಸಂಗಾತಿಯೆಂದು ಕರೆಯಲಾಗುತ್ತಿತ್ತು. ಆಧುನಿಕ ಜಗತ್ತಿನ ಪ್ರೀತಿ-ಪ್ರೇಮಕ್ಕಿಂತಲೂ ರಾಧಕೃಷ್ಣರ ಪ್ರೀತಿ ತುಂಬಾನೇ ವಿಭಿನ್ನವಾಗಿದೆ ಹಾಗೂ ರೋಚಕವಾಗಿದೆ. ಇವರಿಬ್ಬರ ಪ್ರೀತಿ ಕಥೆ ಎಂತವರನ್ನಾದರೂ ಕೂಡ ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತದೆ.
ಕೃಷ್ಣ ಯಾರು?:ರಾಧಾ ಮತ್ತು ಕೃಷ್ಣನ ಕಥೆಯು ಭಾಗವತ ಪುರಾಣದಲ್ಲಿ ಮೊದಲ ಬಾರಿಗೆ ಕಂಡು ಬರುತ್ತದೆ. ಪೂರ್ವ ಭಾರತದಲ್ಲಿ 12ನೇ ಶತಮಾನದಲ್ಲಿದ್ದ ಜಯದೇವ ಬರೆದ "ಗೀತಗೋವಿಂದ" ಎಂಬ ಸಂಸ್ಕೃತ ಕಾವ್ಯದಲ್ಲಿ ಅವರ ಕಥೆಯನ್ನು ಮತ್ತಷ್ಟು ವಿವರಿಸಲಾಗಿದೆ. ಕೃಷ್ಣ ಅತ್ಯಂತ ಜನಪ್ರಿಯ ಮತ್ತು ಪ್ರೀತಿಯ ಹಿಂದೂ ದೇವತೆ. ವಿಷ್ಣುವಿನ ಅವತಾರ ಅಥವಾ ಸ್ವತಃ ಪರಮಾತ್ಮನೆಂದು ಪರಿಗಣಿಸಲಾಗಿದೆ. ಹಿಂದೂ ನಂಬಿಕೆಯಲ್ಲಿ, ವಿಷ್ಣುವು ಬ್ರಹ್ಮಾಂಡವನ್ನು ಸಂರಕ್ಷಿಸುತ್ತಾನೆ. ಆಗಾಗ ಕೆಲವು ತಪ್ಪನ್ನು ಸರಿಪಡಿಸಲು ಐಹಿಕ ರೂಪವನ್ನು ಪಡೆಯುವ ಮೂಲಕ ಜಗತ್ತನ್ನು ರಕ್ಷಿಸಿದನು ಎಂದು ಹೇಳಲಾಗಿದೆ.
ಕೃಷ್ಣನ ಜೀವನ ಕಥೆ ರೋಚಕವಾಗಿದೆ. ಸಾಹಸ ಮತ್ತು ದುರಂತದಿಂದ ಕೂಡಿದೆ. ಕೃಷ್ಣ ಜನಿಸಿದಾಗ, ಅವನ ಸೋದರ ಮಾವ ಕಂಸ ಎಂಬ ರಾಜ ಕೊಲ್ಲಲು ಆದೇಶಿಸುತ್ತಾನೆ. ಭವಿಷ್ಯ ವಾಣಿಯು ಇದಕ್ಕೆ ಕಾರಣವಾಗಿತ್ತು. ಆದರೆ ರಾಜಮನೆತನದಲ್ಲಿ ಜನಿಸಿದ ಕೃಷ್ಣ ಸಾವಿನಿಂದ ಪಾರಾಗಿ ವೃಂದಾವನದ ಬುಕೊಲಿಕ್ ಪ್ರದೇಶದ ಗೋಪಾಲಕರು ಮತ್ತು ಗೋಪಿಕೆಯರ ನಡುವೆ ಬೆಳೆಯುತ್ತಾನೆ. ಅವನು ಗೋಪಿಯರೊಂದಿಗೆ ಎಲ್ಲಾ ರೀತಿಯ ತಮಾಷೆಯ ಕಿಡಿಗೇಡಿತನದಲ್ಲಿ ತೊಡಗಿದ್ದ. ತನ್ನ ಕೊಳಲು ನುಡಿಸುತ್ತ ವೃಂದಾವನದ ಕಾಡುಗಳಲ್ಲಿ ಅಲೆದಾಡುತ್ತಿದ್ದ. ಎಲ್ಲಾ ಗೋಪಿಯರು ಕೃಷ್ಣನನ್ನು ಪ್ರೀತಿಸುತ್ತಿದ್ದರು. ಆದರೆ ಅವನ್ನು ಪ್ರೀತಿಸಿದ್ದು, ಮಾತ್ರ ರಾಧೆಯನ್ನು.
ರಾಧಾ ಕೃಷ್ಣರ ಮೊದಲ ಭೇಟಿ:ಕೆಲವೊಂದು ಕಥೆಗಳ ಪ್ರಕಾರ ರಾಧೆ 11ನೇ ತಿಂಗಳ ಚಿಕ್ಕ ಮಗುವಾಗಿದ್ದಾಗ ಮೊದಲ ಬಾರಿ ಶ್ರೀಕೃಷ್ಣನನ್ನು ಭೇಟಿಯಾಗುತ್ತಾಳಂತೆ. ರಾಧೆ 11 ತಿಂಗಳು ಮಗುವಾಗಿದ್ದಾಗ ಕೃಷ್ಣ 1 ದಿನದ ಪುಟ್ಟ ಮಗುವಾಗಿದ್ದನಂತೆ. ಆತನನ್ನು ತೊಟ್ಟಿಲಿಗೆ ಹಾಕುವ ದಿನದಂದು ರಾಧೆ ತನ್ನ ತಾಯಿ ಕೀರ್ತಿಯೊಂದಿಗೆ ಕೃಷ್ಣನಿದ್ದ ನಂದಗಾಂವ್‌ಗೆ ಬರುತ್ತಾಳೆ. ಆ ಸಂದರ್ಭದಲ್ಲಿ ರಾಧೆ ತನ್ನ ತಾಯಿಯ ತೋಳುಗಳಲ್ಲಿದ್ದರೆ, ಕೃಷ್ಣ ತೊಟ್ಟಿಲಲ್ಲಿ ಆಟವಾಡುವ ಮಗುವಾಗಿದ್ದ.