ಪಾಟ್ನಾ (ಬಿಹಾರ) :ಈ ಪ್ರೇಮಿಗಳ ದಿನದಂದು ಏಕಾಂಗಿಯಾಗಿ ಉಳಿದು ಮರಗಳಿಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟ ವಿಶೇಷವಾದ ವ್ಯಕ್ತಿಯೊಬ್ಬರು ಪರಿಸರಕ್ಕೆ ತಮ್ಮದೇ ಆದ ಅಳಿಲು ಸೇವೆ ಮಾಡುತ್ತಿದ್ದಾರೆ. ಈವರೆಗೆ ಸುಮಾರು 8 ಲಕ್ಷ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಆ ವ್ಯಕ್ತಿ ಯಾರೆಂದರೇ ಬಿಹಾರದ, ಪಿಪ್ರಾ ಗ್ರಾಮದ ನಿವಾಸಿ ಗಜೇಂದ್ರ ಯಾದವ್. ಇವರು ಮರಗಳನ್ನು ತಮ್ಮ ಕುಟುಂಬಸ್ಥರೆಂದು ತಿಳಿದು ಅವುಗಳೊಂದಿಗೆ ಏಕಾಂಗಿ ಜೀವನ ನಡೆಸುತ್ತಿದ್ದಾರೆ.
ಮರಗಳು ಪ್ರಕೃತಿ ವಿಕೋಪಗಳಿಗೆ ಅಥವಾ ಇನ್ನಿತರ ಸಂದರ್ಭದಲ್ಲಿ ಮರಗಳಿಗೆ ಹಾನಿಯಾದಾಗಲೆಲ್ಲ ಈ ವ್ಯಕ್ತಿ ಬೇಸರಗೊಳ್ಳುತ್ತಾನೆ. ಗಜೇಂದ್ರ ಯಾದವ್ ಅವರು ನಾಲ್ವರ ಮಕ್ಕಳ ಪೈಕಿ ಮೊದಲ ಹಿರಿ ಮಗನಾಗಿದ್ದು, ದಸರಾ, ದೀಪಾವಳಿ, ರಕ್ಷಾ ಬಂಧನ ಮತ್ತು ದೇಶದಲ್ಲಿ ನಡೆಯುವ ಇನ್ನಿತರ ಎಲ್ಲಾ ಹಬ್ಬಗಳನ್ನು ಗಜೇಂದ್ರ ಮರಗಳೊಂದಿಗೆ ಆಚರಿಸಿಕೊಳ್ಳುತ್ತಾರೆ. ಇವರು ಇನ್ನೂ ಮದುವೆ ಆಗದೆ ಅವಿವಾಹಿತರಾಗಿದ್ದು, ಅಲ್ಲಿನ ಪ್ರದೇಶದಲ್ಲಿರುವ ಎಲ್ಲ ಮರಗಳನ್ನು ಪಾಲನೆ ಮಾಡಲು ನಿರ್ಧರಿಸಿದ್ದಾರೆ.
ಗಜೇಂದ್ರ ಅವರ ಈ ನಿಸ್ವಾರ್ಥದ ಸೇವೆಯನ್ನು ಗುರುತಿಸಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಅವರು ಪಾಟ್ನಾಗೆ ಆಹ್ವಾನಿಸಿ ಮತ್ತು ಗೌರವಿಸಲಾಯಿತು. ಹಾಗೂ ಪ್ರಧಾನಿ ಮೋದಿಯವರಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ. ಒಮ್ಮೆ ಗಜೇಂದ್ರ ಅವರ ಮಾತಿನಂತೆ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಐಜಿಪಿ ಆಗಿರುವ ವಿಕಾಸ್ ವೈಭವ್ ಅವರು ಸೆಮಾರ್ಕೋಲ್ ತಿರುತ್ ಕಾಲುವೆ ಬಳಿಯ ಛೇದಕದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಸಂದೇಶವನ್ನು ನೀಡಲು ಮಾವಿನ ಸಸಿ ನೆಟ್ಟಿದ್ದರು.