ಹಲ್ದ್ವಾನಿ (ಉತ್ತರಾಖಂಡ):ಜಮ್ಮುವಿನಲ್ಲಿರುವ ವೈಷ್ಣೋದೇವಿ ದೇವಾಲಯಕ್ಕೆ ಕಳೆದ 20 ವರ್ಷಗಳಲ್ಲಿ ಸುಮಾರು 4,700 ಕೆ.ಜಿ ಬೆಳ್ಳಿ ಮತ್ತು 1,800 ಕೆ.ಜಿ ಚಿನ್ನ ದೇಣಿಗೆಯ ರೂಪದಲ್ಲಿ ಹರಿದುಬಂದಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಯಲ್ಲಿ ಮಾಹಿತಿ ಬಹಿರಂಗವಾಗಿದೆ.
ಮಾಹಿತಿ ಹಕ್ಕು ಕಾಯ್ದೆಯಲ್ಲಿ ಬಹಿರಂಗವಾದ ಅಂಕಿ ಅಂಶಗಳು ಸಾಮಾಜಿಕ ಕಾರ್ಯಕರ್ತ ಹೇಮಂತ್ ಗೌನಿಯಾ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಕೇಳಿದ್ದ ಪ್ರಶ್ನೆಗೆ ಈ ರೀತಿಯ ಉತ್ತರ ಬಂದಿದ್ದು, ಸುಮಾರು 2 ಸಾವಿರ ಕೋಟಿ ರೂಪಾಯಿ ನಗದು ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.
ಪ್ರತಿವರ್ಷ ಲಕ್ಷಾಂತರ ಭಕ್ತರು ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡಲಿದ್ದು, ದೇಶದ ಅತಿ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದ್ದು, ಪ್ರತಿವರ್ಷ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ನಗದು ಸಂಗ್ರಹವಾಗುತ್ತಿತ್ತು.
ಇದನ್ನೂ ಓದಿ:ಕಾರ್ಯಕರ್ತನ ಕಾಲಿಗೆರಗಿ ಪ್ರತಿ ನಮಸ್ಕಾರ ಮಾಡಿದ ಪ್ರಧಾನಿ ಮೋದಿ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೇಮಂತ್ ಗೌನಿಯಾ, ಪ್ರತಿ ವರ್ಷ ದೇವಾಲಯಕ್ಕೆ ಎಷ್ಟು ಹಣ, ಚಿನ್ನ ಬರುತ್ತದೆ ಎಂಬುದನ್ನು ನಾನು ತಿಳಿಯಬೇಕಿತ್ತು. ಈ ಸಂಪತ್ತನ್ನು ದೇವಾಲಯ ಮಂಡಳಿ ಇಲ್ಲಿಗೆ ಬರುವ ಯಾತ್ರಿಗಳಿಗೆ ಸೌಲಭ್ಯಗಳನ್ನು ಒದಗಿಸಲು ಬಳಸಬೇಕು. ಸರ್ಕಾರಿ ಶಾಲಾ ಕಟ್ಟಡಗಳಿಗೂ ಈ ಹಣ ಬಳಸಿಕೊಳ್ಳಬೇಕು ಎಂದಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆಯಲ್ಲಿ ಬಹಿರಂಗವಾದ ಅಂಕಿ ಅಂಶಗಳು ದೇವಾಲಯಕ್ಕೆ ಭೇಟಿ ನೀಡುವವರ ಸಂಖ್ಯೆಯನ್ನೂ ಕೂಡಾ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾಗಿದ್ದು, ಕೊರೊನಾ ಕಾರಣದಿಂದ 2020ನೇ ವರ್ಷದಲ್ಲಿ ಯಾತ್ರಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. 2011 ಮತ್ತು 2012ರ ಇಸವಿಯಲ್ಲಿ ಅತಿಹೆಚ್ಚು ಯಾತ್ರಿಕರು ಆಗಮಿಸಿದ್ದರು ಎಂಬ ಮಾಹಿತಿ ದೊರೆತಿದೆ.