ಖೇಡಾ( ಗುಜರಾತ್):ಖೇಡಾ ಜಿಲ್ಲೆಯ ಮಹಮದಾಬಾದ್ ಬಳಿ ಗೂಡ್ಸ್ ರೈಲು ಹಳಿತಪ್ಪಿದೆ. ಈ ಘಟನೆಯಿಂದಾಗಿ ವಡೋದರಾದಿಂದ ಅಹಮದಾಬಾದ್‌ಗೆ ರೈಲು ಸಂಚಾರ ಸ್ಥಗಿತಗೊಂಡಿದೆ. ರೈಲ್ವೆ ಹಳಿಯ ಒಂದು ಬದಿಯನ್ನು ಮುಚ್ಚಲಾಗಿದೆ. ಗೂಡ್ಸ್ ಹಳಿ ತಪ್ಪಿದ್ದರಿಂದಾಗಿ ಯಾವುದೇ ಪ್ರಾಣಹಾನಿಯಾಗಿಲ್ಲ.
ವಡೋದರಾದಿಂದ ಅಹಮದಾಬಾದ್‌ಗೆ ತೆರಳುತ್ತಿದ್ದ ಗೂಡ್ಸ್ ರೈಲಿನ ಬೋಗಿ ಮಹಮದಾಬಾದ್ ಖೇಡಾ ರಸ್ತೆ ನಿಲ್ದಾಣದಲ್ಲಿ ಹಠಾತ್ ಹಳಿ ತಪ್ಪಿದೆ. ಕೆಲವು ತಾಂತ್ರಿಕ ಕಾರಣದಿಂದ ಕೋಚ್ ಹಳಿತಪ್ಪಿದೆ ಎಂದು ಹೇಳಲಾಗುತ್ತಿದೆ. ಗೂಡ್ಸ್ ಹಳಿ ತಪ್ಪಿದ ಮಾಹಿತಿ ಸಿಕ್ಕ ತಕ್ಷಣವೇ ರೈಲ್ವೆ ಅಧಿಕಾರಿಗಳು ಮತ್ತು ನೌಕರರು ಸ್ಥಳಕ್ಕೆ ಆಗಮಿಸಿದರು. ಪರಿಸ್ಥಿತಿಯ ಪರಿಶೀಲನೆ ನಡೆಸಿದರು.
ಈ ನಡುವೆ ಗೂಡ್ಸ್ ಹಳಿ ತಪ್ಪಿದ ಪರಿಣಾಮ ಅಹಮದಾಬಾದ್ - ವಡೋದರಾ ನಡುವೆ ರೈಲು ಸಂಚಾರಕ್ಕೆ ತೊಂದರೆಯಾಯಿತು. ಅದೇ ಸಮಯದಲ್ಲಿ, ವಡೋದರಾದಿಂದ ಅಹಮದಾಬಾದ್ ಕಡೆಗೆ ಬರುವ ರೈಲುಗಳನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಗೂಡ್ಸ್ ರೈಲನ್ನು ಮತ್ತೆ ಹಳಿಗೆ ತರಲು ರೈಲ್ವೆ ಇಲಾಖೆ ಯುದ್ಧೋಪಾದಿಯಲ್ಲಿ ಅಭಿಯಾನ ಆರಂಭಿಸಿದೆ.
ರೈಲು ಸಂಚಾರಕ್ಕೆ ತೊಂದರೆ:ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಮಹಮದಾಬಾದ್ ರೈಲು ನಿಲ್ದಾಣದ ಉತ್ತರ ಭಾಗದಲ್ಲಿರುವ ಗರ್ನಾಲಾ ಮೂಲಕ ಹಾದು ಹೋಗುತ್ತಿದ್ದ ಗೂಡ್ಸ್ ರೈಲಿನ ಚಕ್ರ ಹಠಾತ್ ಹಳಿತಪ್ಪಿತು. ಈ ಘಟನೆಯ ಮಾಹಿತಿ ಬಂದ ಕೂಡಲೇ ರೈಲ್ವೆ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದರು. ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಆದರೆ, ವಡೋದರಾದಿಂದ ಅಹಮದಾಬಾದ್‌ಗೆ ತೆರಳಬೇಕಾಗಿರುವ ರೈಲು ಸಂಚಾರಗಳಿಗೆ ಈ ಘಟನೆಯಿಂದ ವ್ಯತ್ಯಯ ಉಂಟಾಯಿತು. ಇದರಿಂದಾಗಿ ಕಾರ್ಮಿಕ ವರ್ಗ, ವಿದ್ಯಾರ್ಥಿ ವರ್ಗ ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು.
9 ರೈಲುಗಳ ಸಂಚಾರ ಸಂಪೂರ್ಣ ರದ್ದತಿ: ಕರ್ಣಾವತಿ ರೈಲು ಸೇರಿದಂತೆ ಪ್ರಮುಖ ರೈಲುಗಳನ್ನು ವಡೋದರ ಸುತ್ತಮುತ್ತ ನಿಲ್ಲಿಸಲಾಗಿತ್ತು. ಸಿಕ್ಕಿಬಿದ್ದ ರೈಲನ್ನು ಹಳಿಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಶೀಘ್ರದಲ್ಲೇ ಈ ಸಂಚಾರ ತೆರವುಗೊಳಿಸಲಾಗುವುದು. ಸದ್ಯ ರೈಲ್ವೆ ಸಿಬ್ಬಂದಿಯಿಂದ ಸಮರೋಪಾದಿಯಲ್ಲಿ ರಿಪೇರಿ ಕಾರ್ಯ ನಡೆಯುತ್ತಿದೆ. ಮುಂದಿನ ಎರಡು ದಿನಗಳ ಕಾಲ ಈ ಮಾರ್ಗದಲ್ಲಿ 9 ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
ತಿಂಗಳ ಹಿಂದೆಯೂ ನಡೆದಿತ್ತು ಅಪಘಾತ: ಒಂದು ತಿಂಗಳ ಹಿಂದೆ ಮಹಮದಾಬಾದ್ ಬಳಿ ಗೂಡ್ಸ್ ರೈಲಿನ ನಾಲ್ಕು ಬೋಗಿಗಳು ಹಳಿತಪ್ಪಿದವು. ಇದಾಗಿ ಒಂದು ತಿಂಗಳ ನಂತರ ಸೋಮವಾರ ಸಂಜೆ ಗೂಡ್ಸ್ ಹಳಿ ತಪ್ಪಿದೆ. ಭವಿಷ್ಯದಲ್ಲಿ ಯಾವುದೇ ದೊಡ್ಡ ಅಪಘಾತವನ್ನು ತಡೆಗಟ್ಟುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಹೊಸ ವ್ಯವಸ್ಥೆಯನ್ನು ರೂಪಿಸಬೇಕಾಗಿದೆ.
ಇದನ್ನು ಓದಿ:ಅಮೆರಿಕದಲ್ಲಿ ಏರ್ ಶೋ ವೇಳೆ ವಿಮಾನ ಪತನ: ಪ್ಯಾರಾಚೂಟ್ ಬಳಸಿ ಪ್ರಾಣ ಉಳಿಸಿಕೊಂಡ ಪೈಲಟ್ಗಳು!