ವಡೋದರಾ (ಗುಜರಾತ್): ಬ್ಯಾಂಕಿನಿಂದಲೇ ನಕಲಿ ನೋಟು ಬಂದಿದೆ ಎಂದು ಗ್ರಾಹಕರ ಲಕ್ಷ್ಯವನ್ನು ಸೆಳೆದುಎಟಿಎಂ ಕಾರ್ಡ್ನಿಂದ ಹಣ ಡ್ರಾ ಮಾಡಿರುವ ಪ್ರಕರಣ ಗುಜರಾತ್‌ನ ವಡೋದರಾದಿಂದ ಬೆಳಕಿಗೆ ಬಂದಿದೆ. ಹೌದು, ಹಿಂದೆಂದೂ ಕಂಡಿರದಂತ ವಂಚನೆ ಪ್ರಕರಣಯೊಂದು ನಡೆದಿದೆ. ನಕಲಿ ನೋಟುಗಳ ನೆಪ ಹೇಳಿಕೊಂಡು ಬಂದಿರುವ ವಂಚಕ, ಖಾತೆದಾರರರೊಬ್ಬರ ಜೊತೆಗೆ ಮಾತಿಗಿಳಿದು ಅವರ ಒರಿಜಿನಲ್ ಎಟಿಎಂ ಕಾರ್ಡ್ ಬಳಸಿಕೊಂಡು ಲಕ್ಷಾಂತರ ರೂಪಾಯಿ ಎಗರಿಸಿ ಪರಾರಿಯಾಗಿದ್ದಾನೆ.
ವಡೋದರದ ಪದ್ರಾದಲ್ಲಿ ನೆಲೆಸಿರುವ ವ್ಯಕ್ತಿ ವಂಚನೆಗೆ ಒಳಗಾಗಿದ್ದಾರೆ. ಈ ವ್ಯಕ್ತಿ ಎಟಿಎಂನಿಂದ ಹಣ ತೆಗೆಯಲು ಹೋಗಿದ್ದವರು. ನೋಟು ನಕಲಿ ಬಂದಿದೆ ಎಂದು ಹೇಳಿ 2.54 ಲಕ್ಷಕ್ಕೂ ಹೆಚ್ಚು ಹಣವನ್ನು ವಂಚಕರು ಲಪಟಾಯಿಸಿದ್ದಾರೆ. ವಿಷಯ ತಿಳಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನಕಲಿ ನೋಟುಗಳು ನೆಪ ಹೇಳಿ ವಂಚನೆ:ಎಟಿಎಂನಿಂದ ಹಣ ತೆಗೆದುಕೊಳ್ಳಲು ಬಂದ ಮಗನ್‌ಭಾಯ್ ಭಿಖಾಭಾಯಿ ಅವರು ಬರಿಗೈಯಲ್ಲಿ ಮನೆಗೆ ಮರಳಿದ್ದಾರೆ. ಉಮಿಯಾ ವಾಡಿ ಪ್ರದೇಶದ ಬ್ಯಾಂಕ್ ಆಫ್ ಬರೋಡಾಗೆ ಹಣ ತೆಗೆದುಕೊಳ್ಳಲು ಹೋದಾಗ ಕೆಲವರು ಭಿಖಾಭಾಯಿಯನ್ನು ಗಮನಿಸುತ್ತಿದ್ದರು. ವಂಚಕರು ಬ್ಯಾಂಕ್ನವರು ನೀಡಿದ ಕೆಲವು ನೋಟುಗಳು ನಕಲಿ ಎಂದು ಹೇಳಿ ಖಾತೆದಾರರೊಬ್ಬರ ಎಟಿಎಂ ಬಳಸಿ ದುಡ್ಡು ಲಪಟಾಯಿಸಿ ಪರಾರಿಯಾಗಿದ್ದಾರೆ.
ಲಾಲ್ಜಿಭಾಯ್ ಅವರು ಮುಜ್ಪುರ್ ಮತ್ತು ಏಕಲಬಾರಾ ಗ್ರಾಮಗಳ ನಡುವೆ ಇರುವ ಎಟಿಎಂನಿಂದ ಹಣ ಡ್ರಾ ಮಾಡಲು ಹೋಗಿದ್ದರು. ಆ ವೇಳೆ, ಮುಖಕ್ಕೆ ರುಮಾಲು ಹಾಕಿಕೊಂಡು ಬಂದ ದುಷ್ಕರ್ಮಿಗಳು ಇಂತಹ ಉಪಾಯವನ್ನು ಬಳಸಿಕೊಂಡಿದ್ದು, ಖಾತೆಯಿಂದ 2,54,300 ನಗದು ಡ್ರಾ ಮಾಡಿಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ.