ಕರ್ನಾಟಕ

karnataka

ETV Bharat / bharat

ಲಸಿಕೆ ಪೂರೈಕೆ ಜುಲೈ ಅಂತ್ಯದವರೆಗೆ ಸವಾಲು: ತೆಲಂಗಾಣ ಸಚಿವ ಕೆಟಿಆರ್​ - ತೆಲಂಗಾಣ ಸರ್ಕಾರ

ಎನ್ಐಟಿಐ ಆಯೋಗ್​ನ ಆರೋಗ್ಯ ಸದಸ್ಯರಾದ ವಿ.ಕೆ. ಪಾಲ್​ ಅವರ ಹೇಳಿಕೆಯಾದ​ "ಆಗಸ್ಟ್-ಡಿಸೆಂಬರ್ 2021ರ ನಡುವೆ 216 ಕೋಟಿ ಡೋಸ್ ಲಸಿಕೆ ಲಭ್ಯವಿರುತ್ತದೆ. ಭಾರತದಲ್ಲಿ ವರ್ಷಪೂರ್ತಿ ವ್ಯಾಕ್ಸಿನೇಷನ್ ಡ್ರೈವ್ ಮುಂದುವರಿಯುತ್ತದೆ" ಎಂಬುದನ್ನು ತೆಲಂಗಾಣ ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ. ರಾಮರಾವ್ ಉಲ್ಲೇಖಿಸಿದ್ದಾರೆ.

KTR
ತೆಲಂಗಾಣ ಸಚಿವ ಕೆಟಿಆರ್

By

Published : May 14, 2021, 11:09 AM IST

ಹೈದರಾಬಾದ್:ಕೋವಿಡ್ -19 ಲಸಿಕೆಗಳ ಪೂರೈಕೆ ಜುಲೈ ಅಂತ್ಯದ ವೇಳೆಗೆ ಅಥವಾ ಆಗಸ್ಟ್ ಆರಂಭದ ವೇಳೆಗೆ ದೇಶಾದ್ಯಂತ ಪ್ರಾರಂಭವಾಗುತ್ತದೆ. ಅಲ್ಲಿಯವರೆಗೆ ಸವಾಲಾಗಿ ಪರಿಣಮಿಸುತ್ತದೆ ಎಂದು ತೆಲಂಗಾಣ ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ. ರಾಮರಾವ್ ಹೇಳಿದ್ದಾರೆ.

ಲಸಿಕೆಗಳು ಮತ್ತು ಔಷಧಿಗಳ ಖರೀದಿ ಕುರಿತು ರಾಜ್ಯ ಕಾರ್ಯಪಡೆಯ ಮುಖ್ಯಸ್ಥರಾಗಿರುವ ಸಚಿವರು, ಕೇಂದ್ರದಿಂದ ಲಸಿಕೆಗಳ ಸರಬರಾಜನ್ನು ಪಡೆಯಲು ರಾಜ್ಯವು ಕೆಲಸ ಮಾಡುತ್ತಿದೆ. ಲಸಿಕೆ ತಯಾರಕರೊಂದಿಗೆ ಚರ್ಚೆಯಲ್ಲಿ ತೊಡಗಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

"ಲಸಿಕೆ ಸರಬರಾಜು ಜುಲೈ ಅಂತ್ಯ ಅಥವಾ ಆಗಸ್ಟ್ ಆರಂಭದ ವೇಳೆಗೆ ದೇಶಾದ್ಯಂತ ಪ್ರಾರಂಭಿಸುತ್ತದೆ. ಅಲ್ಲಿಯವರೆಗೆ ಇದು ಸವಾಲಾಗಿ ಪರಿಣಮಿಸುತ್ತದೆ" ಎಂದು ಅವರು ಟ್ವಿಟರ್‌ನಲ್ಲಿ ಹೇಳಿದರು.

ಎನ್ಐಟಿಐ ಆಯೋಗ ಆರೋಗ್ಯ ಸದಸ್ಯರಾದ ವಿ.ಕೆ. ಪಾಲ್​ ಅವರ ಹೇಳಿಕೆಯಾದ​ "ಆಗಸ್ಟ್-ಡಿಸೆಂಬರ್ 2021ರ ನಡುವೆ 216 ಕೋಟಿ ಡೋಸ್ ಲಸಿಕೆ ಲಭ್ಯವಿರುತ್ತದೆ. ಭಾರತದಲ್ಲಿ ವರ್ಷಪೂರ್ತಿ ವ್ಯಾಕ್ಸಿನೇಷನ್ ಡ್ರೈವ್ ಮುಂದುವರಿಯುತ್ತದೆ" ಎಂಬುದನ್ನು ಕೆಟಿಆರ್‌ ಇದೇ ವೇಳೆ ಉಲ್ಲೇಖಿಸಿದ್ದಾರೆ.

ವ್ಯಾಕ್ಸಿನೇಷನ್ ಮತ್ತು ಲಸಿಕೆ ಲಭ್ಯತೆಯ ಬಗ್ಗೆ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ ಕೆಟಿಆರ್, "ಕೇಂದ್ರವು ವಿತರಣೆಯನ್ನು ನಿರ್ವಹಿಸುತ್ತಿರುವುದರಿಂದ ರಾಜ್ಯಕ್ಕೆ ಸೀಮಿತ ಪಾತ್ರವಿದೆ. ಮೊದಲ ಡೋಸ್​ ತೆಗೆದುಕೊಂಡ ಎಲ್ಲ 45 ಲಕ್ಷ ಜನರಿಗೆ ಎರಡನೇ ಡೋಸ್ ಪಡೆಯುವ ಬಗ್ಗೆ ಪ್ರಸ್ತುತ ರಾಜ್ಯವು ಸಿದ್ಧತೆ ನಡೆಸುತ್ತಿದೆ" ಎಂದು ಹೇಳಿದರು.

ಸಂಗ್ರಹಣೆಗಾಗಿ ಜಾಗತಿಕ ಟೆಂಡರ್‌ಗಳನ್ನು ಕರೆಯಲು ನಿರ್ಧರಿಸಿದ ತೆಲಂಗಾಣ ಸರ್ಕಾರ ಪ್ರಸ್ತುತ, ಭಾರತ್ ಬಯೋಟೆಕ್, ಸೀರಮ್ ಸಂಸ್ಥೆ ಮತ್ತು ಡಾ. ರೆಡ್ಡಿಸ್ ಲ್ಯಾಬ್ಸ್ ಜೊತೆ ಚರ್ಚೆ ನಡೆಸುತ್ತಿದೆ.

ಒಟ್ಟು 45 ವರ್ಷಕ್ಕಿಂದ ಮೇಲ್ಪಟ್ಟ 92.24 ಲಕ್ಷ ಜನರಲ್ಲಿ 45.37 ಲಕ್ಷ ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, ಎರಡನೇ ಡೋಸ್ ಅನ್ನು 10.3 ಲಕ್ಷಕ್ಕೂ ಹೆಚ್ಚು ಜನರಿಗೆ ನೀಡಲಾಗಿದೆ.

ABOUT THE AUTHOR

...view details