ನವದೆಹಲಿ: ಭಾರತ್ ಬಯೋಟೆಕ್ ಸಂಸ್ಥೆಯ ಕೋವಿಡ್ ಲಸಿಕೆ ಮಕ್ಕಳಿಗೆ ನೀಡಲು ಭಾರತೀಯ ಪ್ರಧಾನ ಔಷಧ ನಿಯಂತ್ರಕ ಅನುಮತಿ ನೀಡುತ್ತಿದ್ದಂತೆ ಇದೀಗ ಜನವರಿ 3ರಿಂದ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ವ್ಯಾಕ್ಸಿನ್ ನೀಡಲಾಗುವುದು ಎಂದು ನಮೋ ಘೋಷಣೆ ಮಾಡಿದ್ದಾರೆ.
15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ವ್ಯಾಕ್ಸಿನ್: ನಮೋ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜನವರಿ 3ರಿಂದ 15 ರಿಂದ 18ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ವ್ಯಾಕ್ಸಿನ್ ನೀಡಲಾಗುವುದು ಎಂದು ಘೋಷಣೆ ಮಾಡಿದರು. ಶಾಲಾ- ಕಾಲೇಜ್ಗಳಿಗೆ ತರಳಿ ಮಕ್ಕಳಿಗೆ ವ್ಯಾಕ್ಸಿನ್ ನೀಡಲಾಗುವುದು ಎಂಬ ಮಾಹಿತಿ ನೀಡಿದರು.
ಭಾಷಣದ ಆರಂಭದಲ್ಲಿ ಕ್ರಿಸ್ಮಸ್ ಹಬ್ಬದ ಶುಭಾಶಯ ತಿಳಿಸಿದ ನಮೋ, ಒಮಿಕ್ರಾನ್ ಬಗ್ಗೆ ಯಾವುದೇ ರೀತಿಯಿಂದಲೂ ಆತಂಕಕ್ಕೊಳಗಾದಂತೆ ಮನವಿ ಮಾಡಿದರು. ದೇಶದಲ್ಲಿ ಒಮಿಕ್ರಾನ್ ಸೋಂಕಿನ ಭೀತಿ ಇದೆ. ಆದರೆ, ಮಾಸ್ಕ್ ಬಳಕೆ ಕಡ್ಡಾಯಗೊಳಿಸಿ ಎಂದು ಎಲ್ಲ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದರು.
ದೇಶದಲ್ಲಿ 18 ಲಕ್ಷ ಐಸೋಲೇಷನ್ ಬೆಡ್ಗಳಿವೆ ಜೊತೆಗೆ 5 ಲಕ್ಷ ಆಕ್ಸಿಜನ್ ಸಪೋರ್ಟ್ ಬೆಡ್ ಸಿದ್ಧಗೊಂಡಿವೆ ಎಂದಿರುವ ಅವರು, ದೇಶದಲ್ಲಿ ಶೇ. 90ರಷ್ಟು ಜನರಿಗೆ ಮೊದಲ ವ್ಯಾಕ್ಸಿನ್ ಡೋಸ್ ನೀಡಲಾಗಿದೆ ಎಂಬ ಮಾಹಿತಿ ಹಂಚಿಕೊಂಡರು. ಸಾಮೂಹಿಕ ಇಚ್ಛಾಶಕ್ತಿಯಿಂದ ನಾವು ಕೊರೊನಾ ವಿರುದ್ಧ ಹೋರಾಟ ಮಾಡಬೇಕಾಗಿದೆ. ದೇಶದಲ್ಲಿ ನಮ್ಮೆಲ್ಲರನ್ನೂ ಕೊರೊನಾ ಹೆಚ್ಚಾಗಿ ಕಾಡುತ್ತಿದೆ. ಇದಕ್ಕಾಗಿ ನಾವು ಸರ್ವ ಸನ್ನದ್ಧರಾಗಿದ್ದೇವೆ ಎಂಬ ಮಾಹಿತಿ ನೀಡಿದರು.
ಆರೋಗ್ಯ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಜನವರಿ 10ರಿಂದ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ಆರೋಗ್ಯ ಇಲಾಖೆ ಕಾರ್ಯಕರ್ತರಿಗೆ ಪ್ರಿಕಾಶನ್ ಡೋಸ್್ ನೀಡಲು ತೀರ್ಮಾನ ಕೈಗೊಳ್ಳಲಾಗಿದ್ದು, ಸಾಮೂಹಿಕ ಇಚ್ಛಾಶಕ್ತಿಯಿಂದ ಕೊರೊನಾ ವಿರುದ್ಧ ನಾವು ಹೋರಾಟ ಮುಂದುವರಿಸಬೇಕಿದೆ ಎಂದು ಕಿವಿ ಮಾತು ಹೇಳಿದರು. ದೇಶದಲ್ಲಿ ಈವರೆಗೆ 141 ಕೋಟಿ ಕೋವಿಡ್ ಡೋಸ್ ನೀಡಲಾಗಿದ್ದು, ಶೇ. 90ರಷ್ಟು ಜನರಿಗೆ ಮೊದಲ ಕೋವಿಡ್ ಲಸಿಕೆ ನೀಡಿದ್ದೇವೆ ಎಂದರು.