ನವದೆಹಲಿ: ಭಾರತದ ಕೊರೊನಾ ವಿರುದ್ಧದ ಹೋರಾಟಕ್ಕೆ ಉಜ್ಬೇಕಿಸ್ತಾನವು ಕೈ ಜೋಡಿಸಿದ್ದು, 100 ಆಮ್ಲಜನಕ ಸಾಂದ್ರಕಗಳು ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ರವಾನಿಸಿದೆ. ಉಜ್ಬೇಕಿಸ್ತಾನದ ಅನಿವಾಸಿ ಭಾರತೀಯರು 51 ಆಮ್ಲಜನಕ ಸಾಂದ್ರಕಗಳನ್ನು ಕೊಡುಗೆ ನೀಡಿದ್ದಾರೆ.
COVID-19 ಬಿಕ್ಕಟ್ಟು: ಉಜ್ಬೇಕಿಸ್ತಾನದಿಂದ 100 ಆಮ್ಲಜನಕ ಸಾಂದ್ರಕಗಳು ಭಾರತಕ್ಕೆ ಆಗಮನ
ಭಾರತಕ್ಕೆ ಉಜ್ಬೇಕಿಸ್ತಾನವು ವೈದ್ಯಕೀಯ ಸಾಮಗ್ರಿಗಳನ್ನು ರವಾನಿಸಿದ್ದು, ಕೊರೊನಾ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿದೆ. 100 ಆಮ್ಲಜನಕ ಸಾಂದ್ರಕಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳು ಶನಿವಾರ ಭಾರತಕ್ಕೆ ಆಗಮಿಸಿವೆ.
ಉಜ್ಬೇಕಿಸ್ತಾನದಿಂದ ಸಹಾಯ
ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ, "ಉಜ್ಬೇಕಿಸ್ತಾನದಿಂದ 100 ಆಮ್ಲಜನಕ ಸಾಂದ್ರಕಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು ಸ್ವೀಕರಿಸಿದ್ದೇವೆ. ನಿಮ್ಮ ಸಹಕಾರಕ್ಕೆ ಧನ್ಯವಾದ" ಎಂದು ಟ್ವೀಟ್ ಮಾಡಿದ್ದಾರೆ.
"ಉಜ್ಬೇಕಿಸ್ತಾನದಲ್ಲಿರುವ ಅನಿವಾಸಿ ಭಾರತೀಯರು 51 ಆಮ್ಲಜನಕ ಸಾಂದ್ರಕಗಳನ್ನು ದಾನ ಮಾಡಿದ್ದಕ್ಕಾಗಿ ವಿಶೇಷ ಧನ್ಯವಾದಗಳು" ಎಂದು ಬಾಗ್ಚಿ ಹೇಳಿದ್ದಾರೆ.