ನವದೆಹಲಿ :ಭಾರತವು ವಿಶ್ವಸಂಸ್ಥೆಯ ಖಾಯಂ ಸದಸ್ಯತ್ವ ಸ್ಥಾನ ಪಡೆಯಲು ಉಜ್ಬೇಕಿಸ್ತಾನ ರಾಯಭಾರಿ ದಿಲ್ಶೋದ್ ಅಖಾಟೊವ್ ಬೆಂಬಲಿಸಿದ್ದಾರೆ. ಭಾರತವು ವಿಶ್ವಸಂಸ್ಥೆಯ ಅತಿದೊಡ್ಡ ಸದಸ್ಯ ರಾಷ್ಟ್ರಗಳಲ್ಲಿ ಒಂದಾಗಿದ್ದು, ಖಾಯಂ ಸದಸ್ಯತ್ವ ದೊರೆತರೆ ಆಗ್ನೇಯ ಏಷ್ಯಾ ಅಭಿವೃದ್ಧಿಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸಲಿದೆ ಎಂದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಖಾಟೊವ್, ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ಸ್ಥಾನ ದೊರೆತರೆ ತುಂಬಾ ಒಳ್ಳೆಯದು. ಯುಎನ್‌ಎಸ್‌ಸಿಯ ಖಾಯಂ ಸದಸ್ಯ ಸ್ಥಾನ ಪಡೆಯಲು ಭಾರತಕ್ಕೆ ಉಜ್ಬೇಕಿಸ್ತಾನ ಸದಾ ಬೆಂಬಲಿಸುತ್ತದೆ ಎಂದು ಅವರು ಹೇಳಿದ್ದಾರೆ.
ಜನವರಿ 1, 2021ರಿಂದ ಡಿಸೆಂಬರ್ 31, 2022ರವರೆಗೆ ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿದೆ. ಈ ಹಿನ್ನೆಲೆ ಈ ಎರಡು ವರ್ಷದ ಸದಸ್ಯತ್ವದ ಅವಧಿಯಲ್ಲಿ ಮೊದಲ ಬಾರಿಗೆ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಇಂದಿನಿಂದ ಭಾರತ ಒಂದು ತಿಂಗಳ ಕಾಲದವರೆಗೆ ವಹಿಸಿಕೊಂಡಿದೆ.
ಇದನ್ನೂ ಓದಿ: ಇಂದಿನಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಭಾರತ
ಜುಲೈನಲ್ಲಿ ಭದ್ರತಾ ಮಂಡಳಿಯ ನೇತೃತ್ವ ವಹಿಸಿದ್ದಕ್ಕಾಗಿ ಮತ್ತು ವಿಶ್ವಸಂಸ್ಥೆಯಲ್ಲಿ ಭಾರತವನ್ನು ಬೆಂಬಲಿಸಿದ್ದಕ್ಕಾಗಿ ತಿರುಮೂರ್ತಿ ಫ್ರಾನ್ಸ್‌ಗೆ ಧನ್ಯವಾದ ಅರ್ಪಿಸಿದರು. ಭಾರತವು ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ನವದೆಹಲಿಯಲ್ಲಿರುವ ಫ್ರೆಂಚ್ ರಾಯಭಾರಿ ಎಮ್ಯಾನುಯೆಲ್ ಲೆನೈನ್, ಇಂದು ಜಗತ್ತು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ನಿಭಾಯಿಸಲು ತನ್ನ ದೇಶವು ಭಾರತದೊಂದಿಗೆ ಕೆಲಸ ಮಾಡಲಿದೆ ಎಂದು ಹೇಳಿದರು.