ಕರ್ನಾಟಕ

karnataka

ETV Bharat / bharat

ಬಸ್​ ದುರಂತದ ರಕ್ಷಣಾ ಕಾರ್ಯ ಅಂತ್ಯ, 26 ಮಂದಿ ಸಾವು; ಗಾಯಾಳುಗಳ ಭೇಟಿಯಾದ ಮಧ್ಯಪ್ರದೇಶ, ಉತ್ತರಾಖಂಡ ಸಿಎಂ - ಉತ್ತರಕಾಶಿ ಬಸ್​ ಅಪಘಾತ

ಉತ್ತರಕಾಶಿಯಲ್ಲಿ ಬಸ್ ದುರಂತ ಪ್ರಕರಣದಲ್ಲಿ ಮೃತರ ಸಂಖ್ಯೆ 26ಕ್ಕೆ ಏರಿಕೆಯಾಗಿದ್ದು, ಮೃತದೇಹಗಳನ್ನು ವಿಮಾನಗಳ ಮೂಲಕ ಏರ್​ಲಿಫ್ಟ್ ಮಾಡಲಾಗುವುದು ಎಂದು ಮಧ್ಯಪ್ರದೇಶ ಸಿಎಂ ತಿಳಿಸಿದ್ದಾರೆ.

Uttarkashi Bus Accident
Uttarkashi Bus Accident

By

Published : Jun 6, 2022, 10:56 AM IST

ಉತ್ತರಕಾಶಿ/ಡೆಹ್ರಾಡೂನ್​:ಚಾರ್ ಧಾಮ್ ಯಾತ್ರೆ ಕೈಗೊಂಡಿದ್ದ ಬಸ್​ ಕಣವಿಗೆ ಉರುಳಿಬಿದ್ದ ಪರಿಣಾಮ 26 ಪ್ರಯಾಣಿಕರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ನಿನ್ನೆ ಸಂಜೆ ನಡೆದಿದ್ದು, ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ಸಂಪೂರ್ಣವಾಗಿ ಅಂತ್ಯಗೊಂಡಿದೆ. ಇದೀಗ ಭೀಕರ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರನ್ನ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.

ಭೀಕರ ಅಪಘಾತ ನಡೆಯಲು ಬಸ್ ಬ್ರೇಕ್​ ಫೇಲ್​ ಆಗಿರುವುದು ಮುಖ್ಯ ಕಾರಣ ಎಂದು ತಿಳಿದು ಬಂದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದ ಅವರು, ಎಲ್ಲ ರೀತಿಯ ಸೌಲಭ್ಯ ಒದಗಿಸುವಂತೆ ಆಸ್ಪತ್ರೆ ಸಿಬ್ಬಂದಿಗೆ ತಿಳಿಸಿದ್ದಾರೆ. ಘಟನೆ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟಿರುವ ಕುಟುಂಬಕ್ಕೆ ಪ್ರಧಾನಮಂತ್ರಿ ವಿಪತ್ತು ನಿರ್ವಹಣಾ ನಿಧಿಯಿಂದ ರೂ.2 ಲಕ್ಷ ಮತ್ತು ಗಾಯಾಗಳುಗಳಿಗೆ ರೂ.50 ಸಾವಿರ ಪರಿಹಾರ ಘೋಷಿಸಿದ್ದಾರೆ.

ಉತ್ತರಕಾಶಿ ಬಸ್​ ದುರಂತದ ರಕ್ಷಣಾ ಕಾರ್ಯ ಅಂತ್ಯ; 26 ಮಂದಿ ಸಾವು

ಇದನ್ನೂ ಓದಿ:ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್​ ಕಮರಿಗೆ ಬಿದ್ದು ಭಾರಿ ದುರಂತ..​ 26 ಜನ ಸಾವು

ದುರ್ಘಟನೆಯಲ್ಲಿ ಮೃತಪಟ್ಟಿರುವ ಪ್ರಯಾಣಿಕರ ಮೃತದೇಹಗಳನ್ನ ಇದೀಗ ವಿಮಾನಗಳ ಮೂಲಕ ಅವರ ಊರುಗಳಿಗೆ ರವಾನೆ ಮಾಡಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ. 30 ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್​​ವೊಂದು ಯಮುನೋತ್ರಿ ಹೆದ್ದಾರಿಯ ದಮ್ತಾ ಬಳಿ ಸುಮಾರು 200 ಮೀಟರ್ ಆಳದ ಕಮರಿಗೆ ಬಿದ್ದಿತ್ತು. ಪರಿಣಾಮ 26 ಮಂದಿ ದುರ್ಮರಣಕ್ಕೀಡಾಗಿದ್ದರು.

ABOUT THE AUTHOR

...view details