ರುದ್ರಪ್ರಯಾಗ್: ಉತ್ತರಾಖಂಡ್ನ ಮಣಿಗುಹ್ ಗ್ರಾಮವನ್ನು ಮೊದಲ ಗ್ರಂಥಾಲಯವನ್ನು ಗ್ರಾಮವಾಗಿ ರೂಪಿಸಲಾಗಿದ್ದು, ಬಸಂತ್ ಪಂಚಮಿಯ ಶುಭದಿನದಂದು ಧಾರ್ಮಿಕ ಕಾರ್ಯಗಳ ಮೂಲಕ ಪ್ರಾರಂಭ ಮಾಡಲಾಗಿದೆ. ಉದ್ಘಾಟನೆ ವೇಳೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಇಲ್ಲಿನ ಸ್ಥಳೀಯ ಶಾಲೆ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು. ದೆಹಲಿಯಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಉತ್ತರಾಖಂಡ್ನ ಮೊದಲ ಗ್ರಂಥಾಲಯ ಗ್ರಾಮ ಉದ್ಘಾಟನೆಗೆ ಆಗಮಿಸಿದರು
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ರಮೇಶ್ ಪಹಡಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.ಗ್ರಾಮೀಣ ಪ್ರದೇಶದಲ್ಲಿ ಜ್ಞಾನ ಸಂಪಾದನೆಗೆ ಅತ್ಯಂತ ಸರಳ ಮತ್ತು ಸುಲಭವಾದ ಮಾರ್ಗಗಳನ್ನು ಒದಗಿಸುವುದು ಅಭಿವೃದ್ಧಿಯ ಚಿಂತನೆಯನ್ನು ತೋರಿಸುತ್ತದೆ. ಗ್ರಂಥಾಲಯವು ದೇಶ ಮತ್ತು ಸಮಾಜದ ಪ್ರಗತಿಯ ಬಾಗಿಲು ತೆರೆಯಲಿದೆ. ಉದ್ಯೋದ ಹಿನ್ನೆಲೆ ಗಿರಿಶಿಖರದಂತಹ ಸ್ಥಳಗಳಿಂದ ದೊಡ್ಡ ಮಟ್ಟದಲ್ಲಿ ಜನರು ವಲಸೆ ಹೋಗುತ್ತಿದ್ದಾರೆ.
ಅವರ ನೋವು ಪ್ರತಿ ಗಿರಿಶಿಖರದಲ್ಲಿದೆ. ನನ್ನ ತಂದೆ ಕೂಡ ಉದ್ಯೋಗಕ್ಕಾಗಿ ಚಿಕ್ಕವಯಸ್ಸಿನಲ್ಲೇ ವಲಸೆ ಹೋದರು. ಆದರೆ, ಅವರ ಜೀವನದುದ್ದಕ್ಕೂ ಅವರು ಗ್ರಾಮವನ್ನು ಮರೆಯಲಿಲ್ಲ. ಮತ್ತೆ ತಮ್ಮ ಗ್ರಾಮಕ್ಕೆ ಮರಳಬೇಕು ಎಂಬುದು ಅವರ ಕನಸ್ಸಾಗಿತ್ತು. ಆದರೆ, ಜೀವನದ ಓಟದಲ್ಲಿ ಅದು ಸಾಧ್ಯವಾಗಲಿಲ್ಲ ಎಂದು ಗೋವನ್ ಘರ್ ಫೌಂಡೇಶನ್ ಸಂಸ್ಥಾಪಕರಾದ ಬಿನಾ ನೆಗಿ ಮಿಶ್ರಾ ತಿಳಿಸಿದ್ದಾರೆ.
ಬಿನಾ ಕನಸಿನ ಕೂಸು ಈ ಗ್ರಾಮ: ಉತ್ತರಾ ಖಂಡ್ನ ಅಗಸ್ತ್ಯಮುನಿಯ ಮಣಿಗುಹ್ ಗ್ರಂಥಾಲಯದ ಗ್ರಾಮ ಬಂಜಗಡ್ಡುನ ಬಿನಾ ನೆಗಿ ಮಿಶ್ರಾ ಅವರ ಪರಿಕಲ್ಪನೆ ಆಗಿದೆ. ಎಂಬಿಎ ಮುಗಿದ ಬಳಿಕ ಬಿನಾ, ದೆಹಲಿಯ ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಆಕೆ ತಮ್ಮ ಗ್ರಾಮವನ್ನು ಮರೆಯಲಿಲ್ಲ. ಇದೆ ಕಾರಣಕ್ಕಾಗಿ ತಮ್ಮ ಗ್ರಾಮಕ್ಕೆ ಏನಾದರೂ ಮಾಡಬೇಕು ಎಂದು ಅವರು ತುಡಿಯುತ್ತಿದ್ದರು.