ಡೆಹ್ರಾಡೂನ್ (ಉತ್ತರಾಖಂಡ): ಜನಸಮೂಹದ ಮೇಲೆ ಕಣ್ಣಿಡಲು ಕುಂಭಮೇಳ ಆಡಳಿತವು ಗಂಗಾ ಘಟ್ಟದಲ್ಲಿ ಹೆಡ್-ಕೌಂಟ್ ಸಾಫ್ಟ್‌ವೇರ್ ಹೊಂದಿರುವ ಕ್ಯಾಮೆರಾಗಳನ್ನು ಅಳವಡಿಸಿದೆ.
ಜನಸಂದಣಿ ಮಿತಿ ಮೀರಿದರೆ ಕ್ಯಾಮೆರಾಗಳು ತಕ್ಷಣ ಪೊಲೀಸರನ್ನು ಎಚ್ಚರಿಸುತ್ತವೆ. ಕುಂಭಮೇಳದ ಇನ್ಸ್‌ಪೆಕ್ಟರ್ ಜನರಲ್ ಸಂಜಯ್ ಗುಂಜ್ಯಾಲ್ ಮಾತನಾಡಿ, ಇಡೀ 107 ಘಾಟ್‌ಗಳ ಅಳತೆಯನ್ನು ತೆಗೆದುಕೊಳ್ಳಲಾಗಿದೆ. ಅದಕ್ಕೆ ಅನುಗುಣವಾಗಿ ಭಕ್ತರ ಸಂಖ್ಯೆಯ ಮಿತಿಯನ್ನು ನಿಗದಿಪಡಿಸಲಾಗಿದೆ ಎಂದರು.
107 ಗಂಗಾ ಘಟ್ಟಗಳ ಸಂಪೂರ್ಣ ಅಳತೆ ಮಾಡಲಾಗಿದೆ. ಅದರ ಪ್ರಕಾರ ಭಕ್ತರ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಸಾಮಾಜಿಕ ದೂರು ಅನುಸರಿಸುವ ದೃಷ್ಟಿಯಿಂದ, ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದ್ದರಿಂದ ನಿಗದಿತ ಸಂಖ್ಯೆಗಿಂತ ಹೆಚ್ಚಿನ ದಟ್ಟಣೆ ಇದ್ದರೆ, ನಮಗೆ ತಕ್ಷಣದ ಮಾಹಿತಿ ಸಿಗುತ್ತದೆ ಎಂದು ಹೇಳಿದರು.