ನವದೆಹಲಿ: ಕ್ಷಿಪ್ರ ರಾಜಕೀಯ ಬೆಳವಣಿಗೆಯೊಂದರಲ್ಲಿ ಉತ್ತರಾಖಂಡ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ನಾಲ್ಕೇ ತಿಂಗಳಲ್ಲಿ ತಿರಥ್ ಸಿಂಗ್ ರಾವತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಒಂದೇ ವರ್ಷದಲ್ಲಿ ಉತ್ತರಾಖಂಡ ಮೂವರು ಸಿಎಂ ಕಾಣ್ತಿರೋದು ಇದೇ ಮೊದಲು ಎನ್ನಲಾಗ್ತಿದೆ.
ಮಧ್ಯಾಹ್ನ 3 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷವು ಹೊಸ ಸಿಎಂ ಆಯ್ಕೆ ಮಾಡಲು ಸಭೆ ನಡೆಸುತ್ತದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಇತ್ತ ಹೈಕಮಾಂಡ್ ಶಾಸಕರಾದ ಸತ್ಪಾಲ್ ಮಹಾರಾಜ್ ಮತ್ತು ಧನ್ ಸಿಂಗ್ ರಾವತ್ ಅವರನ್ನು ದೆಹಲಿಗೆ ಕರೆಸಿದೆ. ಇದೆಲ್ಲದರ ಮಧ್ಯೆ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಡೆಹ್ರಾಡೂನ್ನಲ್ಲಿ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯ ವೀಕ್ಷಕರನ್ನಾಗಿ ನೇಮಿಸಿದೆ.
ರಾಜೀನಾಮೆ ಬಳಿಕ ಮಾತನಾಡಿರುವ ತಿರಥ್ ಸಿಂಗ್ ರಾವತ್, ಹೈಕಮಾಂಡ್ ನೀಡಿದ್ದ ಜವಾಬ್ದಾರಿಗೆ ಧನ್ಯವಾದ ಅರ್ಪಿಸಿದರು.