ಡೆಹ್ರಾಡೂನ್ (ಉತ್ತರಾಖಂಡ):ದೇಶದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ, ಜನರು ತಮ್ಮ ಮೂರನೇ ಡೋಸ್ ಲಸಿಕೆಯನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಇದರ ಪರಿಣಾಮವಾಗಿ 70,000 ಲಸಿಕೆಗಳ ಅವಧಿಯು ಈ ವರ್ಷದ ಡಿಸೆಂಬರ್ ವೇಳೆಗೆ ಮುಗಿಯಲಿದೆ. ಆರಂಭಿಕ ಹಂತಗಳಲ್ಲಿ, ಬಹಳಷ್ಟು ಜನರು ಲಸಿಕೆ ಪಡೆಯಲು ಬರುತ್ತಿದ್ದರು.
ಆದರೆ, ಈಗ ಲಸಿಕೆ ಹಾಕಿಸಿಕೊಳ್ಳಲು ಆಸಕ್ತಿ ತೋರಿಸುತ್ತಿಲ್ಲ. ಹಾಗಾಗಿ ರಾಜ್ಯಾದ್ಯಂತ ನಿತ್ಯ ಸುಮಾರು 2,000 ಜನರು ಮಾತ್ರ ಬೂಸ್ಟರ್ ಡೋಸ್ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳು ಮತ್ತು ಬೂಸ್ಟರ್ ಡೋಸ್‌ಗಳಿವೆ. 70,000 ಡೋಸ್ ಬೂಸ್ಟರ್‌ಗಳ ಹೊರತಾಗಿ, ಸುಮಾರು 27,000 ಡೋಸ್ ಕೋವಾಕ್ಸಿನ್ ಮತ್ತು ಸುಮಾರು 47,000 ಡೋಸ್ ಕೋವಿಶೀಲ್ಡ್ ಲಭ್ಯವಿದೆ ಮತ್ತು ಈ ಎಲ್ಲ ಲಸಿಕೆಗಳ ಅವಧಿಯು ಡಿಸೆಂಬರ್‌ನಲ್ಲಿ ಮುಕ್ತಾಯಗೊಳ್ಳಲಿವೆ. ಆದರೆ, ಜನರು ಮಾತ್ರ ಲಸಿಕೆ ಹಾಕಿಸಿಕೊಳ್ಳಲು ಬರುತ್ತಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ.
ಇದನ್ನೂ ಓದಿ:ಕೋವ್ಯಾಕ್ಸಿನ್ ಕುರಿತ ಸುಳ್ಳು ವರದಿಗಳಿಗೆ ಸ್ಪಷ್ಟನೆ: ಯಾವುದೇ ರಾಜಕೀಯ ಒತ್ತಡ ಇರಲಿಲ್ಲ ಎಂದ ಆರೋಗ್ಯ ಸಚಿವಾಲಯ