ಡೆಹ್ರಾಡೂನ್, ಉತ್ತರಾಖಂಡ್ :ಚಾರ್ಧಾಮ್ ಯಾತ್ರೆಯನ್ನ ಉತ್ತರಾಖಂಡ ಸರ್ಕಾರ ಮಂಗಳವಾರ ಮುಂದೂಡಿದೆ. ನೈನಿತಾಲ್ ಹೈಕೋರ್ಟ್‌ನಲ್ಲಿ ಯಾತ್ರೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ. ಜೂನ್ 16ರ ನಂತರ ಈ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಸಚಿವ ಸುಬೋಧ್ ಯುನಿಯಾಲ್ ಸ್ಪಷ್ಟನೆ ನೀಡಿದ್ದಾರೆ.
ಕೊರೊನಾ ನೆಗೆಟಿವ್ ಇರುವ ಚಮೋಲಿ, ರುದ್ರಪ್ರಯಾಗ್, ಉತ್ತರಕಾಶಿ ಜಿಲ್ಲೆಗಳ ಜನತೆಗೆ ಚಾರ್ಧಾಮ್ ಯಾತ್ರೆ ಕೈಗೊಳ್ಳಲು ಅವಕಾಶ ನೀಡಿ ಸುಬೋಧ್ ಯುನಿಯಾಲ್ ಘೋಷಿಸಿದ ನಂತರ ಮತ್ತೆ ಚಾರ್ ಧಾಮ್ ಯಾತ್ರೆ ಮುಂದೂಡಲಾಗಿದೆ.