ಕರ್ನಾಟಕ

karnataka

ETV Bharat / bharat

ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಭೂ ಕುಸಿತ.. ರಸ್ತೆಯಲ್ಲಿ ಸಿಲುಕಿದ 1500 ಪ್ರಯಾಣಿಕರು - ಎಸ್​ಡಿಆರ್​ಎಫ್​ ಪಡೆಗಳು ಸತತ ಕಾರ್ಯಾಚರಣೆ

ಮಂಗಳವಾರವಷ್ಟೇ ಈ ರಸ್ತೆಯಲ್ಲಿ ಭೂ ಕುಸಿತ ಸಂಭವಿಸಿತ್ತು. ಇದರಿಂದಾಗಿ ತಕ್ಷಣ ಸ್ಥಳಕ್ಕೆ ಧಾವಿಸಿದ್ದ ಎನ್​ಡಿಆರ್​ಎಫ್​ ಹಾಗೂ ಎಸ್​ಡಿಆರ್​ಎಫ್​ ಪಡೆಗಳು ಸತತ ಕಾರ್ಯಾಚರಣೆ ಬಳಿಕ ರಾತ್ರಿ 11 ಗಂಟೆಯ ಸುಮಾರಿಗೆ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದರು. ಆದರೆ ಇಂದು ಮತ್ತೆ ಭೂ ಕುಸಿತ ಸಂಭವಿಸಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.

uttarakhand-nearly-1500-passengers-stuck-in-uttarkashi
ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಭೂ ಕುಸಿತ

By

Published : Sep 22, 2022, 5:00 PM IST

ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಹೆಲ್ಗುಗಡ್ ಬಳಿ ಭಾರಿ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದೆ. ಪರಿಣಾಮ ಇಂದು 15 ಗಂಟೆಗಳಿಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತ್ತು. ಹೆಲ್ಗುಗಡ್​ ಸಮೀಪದ ಸುಂಗರ್ ನಡುವೆ ಭೂಕುಸಿತ ಸಂಭವಿಸಿದ ಪರಿಣಾಮವಾಗಿ ಗಂಗೋತ್ರಿ ಹೆದ್ದಾರಿ ಎಂದು ಕರೆಯಲ್ಪಡುವ ರಾಷ್ಟ್ರೀಯ ಹೆದ್ದಾರಿ 108ರ ಸಂಚಾರವನ್ನು ಬಂದ್​ ಮಾಡಲಾಗಿದೆ.

ವರದಿಗಳ ಪ್ರಕಾರ, ಸುಂಗರ್ ಮತ್ತು ಗಂಗ್ನಾನಿ ಪ್ರದೇಶಗಳಲ್ಲಿ ಪ್ರಸ್ತುತ 1,500 ಕ್ಕೂ ಹೆಚ್ಚು ಪ್ರಯಾಣಿಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇಲ್ಲಿ ಸಂಚರಿಸುತ್ತಿದ್ದ ಸವಾರರೆಲ್ಲ ತಮ್ಮ ತಮ್ಮ ವಾಹನಗಳಲ್ಲಿ ಬಂಧಿಯಾಗಿದ್ದು, ಪೇಚಿಗೆ ಸಿಲುಕಿದ್ದಾರೆ.

ಮಳೆ ಕಡಿಮೆ ಆಗಿದ್ದರಿಂದ ಬುಧವಾರವಷ್ಟೇ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. ಮಂಗಳವಾರವಷ್ಟೇ ಈ ರಸ್ತೆಯಲ್ಲಿ ಭೂ ಕುಸಿತ ಸಂಭವಿಸಿತ್ತು. ಇದರಿಂದಾಗಿ ತಕ್ಷಣ ಸ್ಥಳಕ್ಕೆ ಧಾವಿಸಿದ್ದ ಎನ್​ಡಿಆರ್​ಎಫ್​ ಹಾಗೂ ಎಸ್​ಡಿಆರ್​ಎಫ್​ ಪಡೆಗಳು ಸತತ ಕಾರ್ಯಾಚರಣೆ ಬಳಿಕ ರಾತ್ರಿ 11 ಗಂಟೆಯ ಸುಮಾರಿಗೆ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದರು. ಆದರೆ ಇಂದು ಮತ್ತೆ ಭೂ ಕುಸಿತ ಸಂಭವಿಸಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.

ಈ ಮಧ್ಯೆ, ರಾಜ್ಯದ ರುದ್ರಪ್ರಯಾಗ ಜಿಲ್ಲೆಯ ಕೇದಾರನಾಥ ಹೆದ್ದಾರಿಯಲ್ಲಿ ಬುಧವಾರ ಇದೇ ರೀತಿ ಭೂಕುಸಿತ ಸಂಭವಿಸಿದೆ. ಎನ್‌ಎಚ್‌ನ ಒಂದು ಭಾಗವು ಒಳಹೊಕ್ಕಿದ್ದರಿಂದ ಆ ಪ್ರದೇಶದಲ್ಲಿ ಕಾರುಗಳು ರಸ್ತೆಯ ಎರಡೂ ಬದಿಗಳಲ್ಲಿ ಜಾಮ್ ಆಗುತ್ತಿರುವುದು ಕಂಡುಬಂದಿದೆ. ರಾಷ್ಟ್ರೀಯ ಹೆದ್ದಾರಿ ನಿಗಮ ಸ್ಥಳಕ್ಕೆ ಧಾವಿಸಿ ದುರಸ್ತಿ ಕಾರ್ಯವನ್ನು ಕೈಗೊಂಡಿದೆ.

ಇದನ್ನು ಓದಿ:ಮನೆ ಗೋಡೆ ಕುಸಿತ: ಅವಶೇಷಗಳಡಿ ಸಿಲುಕಿ ಒಡಹುಟ್ಟಿದ ನಾಲ್ವರು ಪುಟ್ಟ ಮಕ್ಕಳು ಬಲಿ!

ABOUT THE AUTHOR

...view details