ಕರ್ನಾಟಕ

karnataka

ETV Bharat / bharat

ಕೋವಿಡ್ ನಿಯಮ​ ಉಲ್ಲಂಘನೆ ಪ್ರಕರಣಗಳನ್ನು ಹಿಂಪಡೆಯಲು ಉತ್ತರಾಖಂಡ ಸರ್ಕಾರ ನಿರ್ಧಾರ

ಉತ್ತರಾಖಂಡದ ನೂತನ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ನೇತೃತ್ವದಲ್ಲಿ ಮೊದಲ ಕ್ಯಾಬಿನೆಟ್ ಸಭೆ ಶುಕ್ರವಾರ ನಡೆದಿತ್ತು. ಸಭೆಯಲ್ಲಿ ಕೋವಿಡ್​ ಉಲ್ಲಂಘನೆಗೆ ಸಂಬಂಧಿಸಿದಂತೆ ದಾಖಲಾದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ.

ಮೊದಲ ಕ್ಯಾಬಿನೆಟ್ ಸಭೆ
First Cabinet Meeting

By

Published : Mar 13, 2021, 8:38 AM IST

Updated : Mar 13, 2021, 8:50 AM IST

ಡೆಹ್ರಾಡೂನ್:ಉತ್ತರಾಖಂಡ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ತಿರಥ್ ಸಿಂಗ್ ರಾವತ್ ಅವರು ಕೋವಿಡ್ ನಿಯಮ​​ ಉಲ್ಲಂಘನೆಗೆ ಸಂಬಂಧಿಸಿದಂತೆ ದಾಖಲಾದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ.

ಮಂಗಳವಾರ ಹುದ್ದೆಯಿಂದ ಕೆಳಗಿಳಿದ ತ್ರಿವೇಂದ್ರ ಸಿಂಗ್ ರಾವತ್ ಅವರ ಸ್ಥಾನಕ್ಕೆ ಉತ್ತರಾಖಂಡಿನ ನೂತನ ಮುಖ್ಯಮಂತ್ರಿಯಾಗಿ 56 ವರ್ಷದ ಬಿಜೆಪಿಯ ಲೋಕಸಭಾ ಸಂಸದ ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದರು.

ಶುಕ್ರವಾರ ಮೊದಲ ಕ್ಯಾಬಿನೆಟ್ ಸಭೆ ನಡೆಸಿದ್ದ ರಾವತ್​​, ಕೊರೊನಾ ಮಾರ್ಗಸೂಚಿಗಳ ಉಲ್ಲಂಘನೆಗಾಗಿ ದಾಖಲಾದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಓಂಪ್ರಕಾಶ್ ತಿಳಿಸಿದ್ದಾರೆ.

ಓದಿ: ಇಂದು ವಾರಣಾಸಿಗೆ ರಾಷ್ಟ್ರಪತಿ ಆಗಮನ: ಗಂಗಾ ಆರತಿ ವೀಕ್ಷಿಸಲಿರುವ ಕೋವಿಂದ್​

ಇದರ ಜೊತೆಗೆ ಮಾರ್ಚ್ 18 ರಂದು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸರ್ಕಾರ ನಾಲ್ಕು ವರ್ಷ ಪೂರೈಸಿದ ಅಂಗವಾಗಿ ವರ್ಷಾಚರಣೆ ಆಚರಿಸಲು ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

Last Updated : Mar 13, 2021, 8:50 AM IST

ABOUT THE AUTHOR

...view details