ಚಮೋಲಿ (ಉತ್ತರಾಖಂಡ):ಉತ್ತರಾಖಂಡ ಹಿಮನದಿ ದುರಂತದಲ್ಲಿ ಅವಶೇಷಗಳಡಿಯಿಂದ ಇನ್ನೂ ಎರಡು ಶವಗಳು ದೊರೆತಿದ್ದು, ಒಟ್ಟು ಸಾವನ್ನಪ್ಪಿದವರ ಸಂಖ್ಯೆ 68ಕ್ಕೆ ತಲುಪಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ತಪೋವನ್ ಸುರಂಗದ ಬಳಿ ಕಾರ್ಯಾಚರಣೆ ನಡೆಯುತ್ತಿದೆ.
ಚಮೋಲಿ (ಉತ್ತರಾಖಂಡ):ಉತ್ತರಾಖಂಡ ಹಿಮನದಿ ದುರಂತದಲ್ಲಿ ಅವಶೇಷಗಳಡಿಯಿಂದ ಇನ್ನೂ ಎರಡು ಶವಗಳು ದೊರೆತಿದ್ದು, ಒಟ್ಟು ಸಾವನ್ನಪ್ಪಿದವರ ಸಂಖ್ಯೆ 68ಕ್ಕೆ ತಲುಪಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ತಪೋವನ್ ಸುರಂಗದ ಬಳಿ ಕಾರ್ಯಾಚರಣೆ ನಡೆಯುತ್ತಿದೆ.
"ವಿಪತ್ತು ನಿಯಂತ್ರಣ ಕೊಠಡಿಯಿಂದ ಪಡೆದ ಮಾಹಿತಿಯ ಪ್ರಕಾರ, ಒಂದು ಮೃತದೇಹ ಶ್ರೀನಗರ ಚೌರಸ್ ಮತ್ತು ಇನ್ನೊಂದು ಕೀರ್ತಿ ನಗರದಲ್ಲಿ ಪತ್ತೆಯಾಗಿದೆ. ನಾಪತ್ತೆಯಾಗಿರುವ 206 ಜನರಲ್ಲಿ 68 ಶವಗಳು ಮತ್ತು 29 ಮಾನವ ಅಂಗಗಳು ಈವರೆಗೆ ದೊರೆತಿವೆ" ಎಂದು ಉತ್ತರಾಖಂಡ ಸರ್ಕಾರ ತಿಳಿಸಿದೆ.
ಇತರ 134 ಜನರಿಗಾಗಿ ರಕ್ಷಣಾ ಮತ್ತು ಶೋಧ ಕಾರ್ಯ ನಡೆಯುತ್ತಿದೆ. ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಸಿಬ್ಬಂದಿ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ಮತ್ತು ಇತರ ಏಜೆನ್ಸಿಗಳು ಚಮೋಲಿ ಜಿಲ್ಲೆಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.