ಕರ್ನಾಟಕ

karnataka

ETV Bharat / bharat

ಹಿಮನದಿ ಸ್ಫೋಟ: ಮೃತರ ಸಂಖ್ಯೆ 32ಕ್ಕೆ ಏರಿಕೆ, 206 ಮಂದಿ ಕಣ್ಮರೆ - ಹಿಮನದಿ ಸ್ಫೋಟಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 32 ಶವಗಳು ಪತ್ತೆ

ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಹಿಮನದಿ ಸ್ಫೋಟಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 32 ಶವಗಳು ಪತ್ತೆಯಾಗಿವೆ. 206 ಜನರು ಕಣ್ಮರೆಯಾಗಿದ್ದಾರೆ.

ಹಿಮನದಿ ಸ್ಫೋಟ
ಹಿಮನದಿ ಸ್ಫೋಟ

By

Published : Feb 10, 2021, 12:11 PM IST

ಉತ್ತರಾಖಂಡ: ಚಮೋಲಿ ಜಿಲ್ಲೆಯಲ್ಲಿ ಉಂಟಾದ ಹಿಮನದಿ ಸ್ಫೋಟದಿಂದ ಭಾರೀ ಪ್ರವಾಹ ಉಂಟಾಗಿದ್ದು, ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.

ಚಮೋಲಿ ಜಿಲ್ಲೆಯಲ್ಲಿ ಮುಂದುವರೆದ ಕಾರ್ಯಚರಣೆ

ನಿನ್ನೆ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ರೈನಿ ಗ್ರಾಮದಲ್ಲಿ ಕುಸಿದು ಬಿದ್ದ ಕಟ್ಟಡಗಳ ಅವಶೇಷಗಳ ಅಡಿಯಲ್ಲಿದ್ದ ಐವರ ಮೃತದೇಹಗಳನ್ನು ಹೊರಗೆಳೆಯಲಾಗಿದೆ. ಚಮೋಲಿಯ 2.5 ಕಿ.ಮೀ ಉದ್ದದ ತಪೋವನ್ ಸುರಂಗದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಸುರಂಗದೊಳಗೆ ಸುಮಾರು 25 ರಿಂದ 35 ಜನರು ಸಿಕ್ಕಿಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ಸುಮಾರು 206 ಜನರು ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಭಾನುವಾರ ಉತ್ತರಾಖಂಡದ ಅಲಕಾನಂದ ಮತ್ತು ದೌಲಿಗಂಗಾ ನದಿಗಳಲ್ಲಿ ಪ್ರವಾಹ ಉಂಟಾಗಿದ್ದರಿಂದ ರಿಷಿಗಂಗಾ ಜಲವಿದ್ಯುತ್ ಯೋಜನೆ ಮತ್ತು ಎನ್​ಟಿಪಿಸಿ ಕೊಚ್ಚಿ ಹೋಗಿದೆ. ಈ ಘಟನೆಯಲ್ಲಿ ಇದುವರೆಗೂ 32 ಜನರ ಮೃತದೇಹಗಳು ಪತ್ತೆಯಾಗಿವೆ. ಇನ್ನೂ 206 ಜನರು ನಾಪತ್ತೆಯಾಗಿದ್ದು, ಅವರು ಬದುಕುಳಿದಿರುವ ಸಾಧ್ಯತೆ ಕಡಿಮೆಯಿದೆ. ಹೀಗಾಗಿ ಅವರ ಮೃತ ದೇಹಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.

ಇದನ್ನೂ ಓದಿ:ಹಿಮನದಿ ಸ್ಫೋಟ : ಈವರೆಗೆ 26 ಶವ ಪತ್ತೆ

ABOUT THE AUTHOR

...view details