ಕರ್ನಾಟಕ

karnataka

ETV Bharat / bharat

ಚಾರ್​ಧಾಮ್​ ಯಾತ್ರೆಗೆ ಉತ್ತರಾಖಂಡ ಸಜ್ಜು: ಈ ಬಾರಿ ದಾಖಲೆ ಮೀರಿ ಯಾತ್ರಿಕರ ನಿರೀಕ್ಷೆ - ಮುಖ ಸ್ಥಳಗಳಿಗೆ ಯಾತ್ರಿಗರು ಯಾತ್ರೆ

2013ರ ಭಾರಿ ಪ್ರವಾಹದಿಂದ ಚೇತರಿಕೆಗೊಂಡ ಬಳಿಕ ಚಾರ್​ಧಾಮ್​ ಯಾತ್ರೆ ಕೈಗೊಳ್ಳುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.

Uttarakhand gearing up for Chardham Yatra Begins from April 22
Uttarakhand gearing up for Chardham Yatra Begins from April 22

By

Published : Mar 14, 2023, 12:09 PM IST

ಡೆಹ್ರಾಡೂನ್​: ಪ್ರಸಿದ್ಧ ಉತ್ತರಾಖಂಡದ ಚಾರ್​ಧಾಮ್​ ಯಾತ್ರೆ ಪ್ರತೀ ಬಾರಿ ಅಕ್ಷಯ ತೃತೀಯದಿಂದ ಪ್ರಾರಂಭವಾಗುತ್ತದೆ. ಹಿಂದೂಗಳ 'ಮೋಕ್ಷಧಾಮ'ಗಳೆಂದೇ ಪರಿಗಣಿಸಿರುವ ಗಂಗೋತ್ರಿ, ಯಮುನೋತ್ರಿ, ಬದ್ರಿನಾಥ್​, ಕೇದಾರನಾಥ್​ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಯಾತ್ರಿಕರು ಯಾತ್ರೆ ಕೈಗೊಳ್ಳುತ್ತಾರೆ. 2013ರಲ್ಲಿ ಭಾರಿ ಪ್ರವಾಹದ ಚೇತರಿಕೆಯ ಬಳಿಕ ಯಾತ್ರೆ ಕೈಗೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಅದರಲ್ಲೂ ಈ ಬಾರಿ ಅಂದರೆ, 2023ರ 20 ದಿನಗಳ ನೋಂದಣಿ ಮುಗಿದಿದ್ದು, ದಾಖಲೆ ಮೀರಿದ ಸಂಖ್ಯೆಯಲ್ಲಿ ಯಾತ್ರಿಕರು ರಿಜಿಸ್ಟರ್​ ಮಾಡಿದ್ದಾರೆ. ಈಗಾಗಲೇ ಎರಡೂವರೆ ಲಕ್ಷ ಯಾತ್ರಿಕರು ದಾಖಲಾತಿ ನಡೆಸಿದ್ದು, ಅತಿ ಹೆಚ್ಚು ಮಂದಿ ಬದ್ರಿನಾಥ್​ ಮತ್ತು ಕೇದಾರನಾಥ್​​ಗೆ ಹೆಸರು ನೋಂದಣಿ ಮಾಡಿಸಿದ್ದಾರೆ.

ಚಾರ್​ಧಾಮ್​ ಯಾತ್ರೆಗೆ ಇನ್ನೂ ಒಂದೂವರೆ ತಿಂಗಳು ಅವಕಾಶ ಇದ್ದರೂ, ಯಾತ್ರಿಕರ ದಾಖಲಾತಿ ವೇಳೆ ಯಾವುದೇ ಸಮಸ್ಯೆ, ವ್ಯವಸ್ಥೆಯಲ್ಲಿ ತೊಡಕಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಅನೇಕ ಬಾರಿ ಚಾರ್​ಧಾಮ್​ ಯಾತ್ರೆಯ ವೇಳೆ ಹೆದ್ದಾರಿಯಲ್ಲಿ ಬೆಟ್ಟ ಕುಸಿತ ಸೇರಿದಂತೆ ಅನೇಕ ಸಮಸ್ಯೆಗಳು ಉದ್ಭವಿಸಿದ್ದವು. ಹಾಗಾಗಿ, ಯಾವುದೇ ಸಮಸ್ಯೆಗಳನ್ನು ಯಾತ್ರಿಕರು ಎದುರಿಸದಂತೆ ಲೋಕೋಪಯೋಗಿ ಇಲಾಖೆ ಜೆಸಿಬಿಗಳನ್ನು ರಸ್ತೆಗಳಲ್ಲಿ ನಿಯೋಜಿಸಿದ್ದು, ತಕ್ಷಣಕ್ಕೆ ರಸ್ತೆ ತೆರವು ಕಾರ್ಯದಲ್ಲಿ ಬಳಸಿಕೊಳ್ಳಲಾಗುತ್ತದೆ. ಇದರ ಜೊತೆಗೆ ಎನ್​ಡಿಆರ್​ಎಫ್​ ಮತ್ತು ಎಸ್​ಡಿಎಆರ್​ಎಫ್​ ಸಿಬ್ಬಂದಿಯನ್ನೂ ಕೂಡ ನೇಮಿಸಲಾಗಿದೆ.

ಏಪ್ರಿಲ್​ 22ರಿಂದ ಯಾತ್ರೆ ಆರಂಭ: ಏಪ್ರಿಲ್​ 22ರಂದು ಅಕ್ಷಯ ತೃತೀಯ ದಿನದಂದು ಚಾರ್​ಧಾಮ್​ ಯಾತ್ರೆಯ ಗಂಗೋತ್ರಿ ಮತ್ತು ಯಮುನೋತ್ರಿ ಧಾಮದ ಬಾಗಿಲು ತೆರೆಯಲಿದೆ. ಕೇದಾರನಾಥ್ ಧಾಮ್​ ಬಾಗಿಲು ಏಪ್ರಿಲ್​ 25 ರಂದು ತೆರೆದರೆ ಬದ್ರಿನಾಥ್​ ಧಾಮ ದ್ವಾರ ಏಪ್ರಿಲ್​ 27ರಂದು ತೆರೆಯಲಿದೆ. ಈ ಬಾರಿ ಅತಿ ಹೆಚ್ಚು ನೋಂದಣಿ ಆಗಿರುವ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ವ್ಯಾಪಾರಿಗಳು ಸಂತಸವಾಗಿದ್ದಾರೆ. ಪ್ರಸ್ತುತ ವರ್ಷ ಕೇದಾರನಾಥ್​​ಗೆ 1.14 ಲಕ್ಷ ಜನರು​ ಮತ್ತು ಬದ್ರಿನಾಥ್​ಗೆ 1.39 ಲಕ್ಷ ಜನರು ನೋಂದಣಿ ಮಾಡಿಸಿದ್ದು, ಜನಜಂಗುಳಿ ಉಂಟಾಗುವ ಸಾಧ್ಯತೆ ಇದೆ.

ಸರ್ಕಾರಕ್ಕೆ ಸವಾಲು: ಕೇದಾರ​ನಾಥ್​ ಧಾಮದ ಪ್ರಯಾಣ ಸರಳವಲ್ಲ. ಇಲ್ಲಿಗೆ ಸಾಗಲು ಯಾತ್ರಿಕರು ಕಡಿದಾದ ಬೆಟ್ಟದ ಸಾಲಿನಲ್ಲಿ 16 ಕಿ.ಮೀ ಸಾಗಬೇಕು. ಈ ವೇಳೆ ಆಮ್ಲಜನಕ ವ್ಯತ್ಯಯದಿಂದ ಹೃದಯಾಘಾತವಾಗುವ ಸಾಧ್ಯತೆಯೂ ಇರುತ್ತದೆ. ಕಳೆದ ವರ್ಷ ಅನೇಕ ಯಾತ್ರಿಕರು ಸಾವನ್ನಪ್ಪಿದ್ದರು. ಇದನ್ನು ಗಮನದಲ್ಲಿ ಇಟ್ಟುಕೊಂಡಿರುವ ಸರ್ಕಾರ ಈ ಬಾರಿ ಹಲವು ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ ಸಿದ್ಧತೆ ನಡೆಸಿದೆ. ಈ ಬಾರಿ 15 ಲಕ್ಷ ಭಕ್ತರು ಕೇದರ್​ನಾಥ್​ನ ದರ್ಶನ ಪಡೆಬಹುದು ಎಂದು ಸರ್ಕಾರ ಅಂದಾಜು ಮಾಡಿದೆ.

ಈ ಹಿನ್ನಲೆಯಲ್ಲಿ ಕೇದಾರನಾಥ್​ ಧಾಮ್​ನಲ್ಲಿ 50 ಹಾಸಿಗೆಯ ಆಸ್ಪತ್ರೆ ಸಜ್ಜುಗೊಳಿಸಲಾಗಿದೆ. ಇದರ ಹೊರತಾಗಿ ವೈದ್ಯರ ತಂಡವನ್ನು ಯಾತ್ರೆ ನಡೆಸುವ ಮಾರ್ಗಮಧ್ಯೆ ನಿಯೋಜಿಸಲಾಗಿದೆ ಎಂದು ಮುಖ್ಯ ಮಂತ್ರಿ ಪುಷ್ಕರ್​ ಸಿಂಗ್​ ಧಾಮಿ ಮಾಹಿತಿ ನೀಡಿದ್ದಾರೆ. ಚಾರ್​ಧಾಮ್​ಗೆ ಸೌಲಭ್ಯ ಹೆಚ್ಚಿಸುವ ಸಂಬಂಧ ಕೇಂದ್ರ ಸರ್ಕಾರ ಸಲಹೆ ಪಡೆದ ಅವರು, ಇದೇ ವೇಳೆ ಅನೇಕ ಸಚಿವರನ್ನು ಯಾತ್ರೆಗೆ ಆಹ್ವಾನಿಸಿದ್ದಾರೆ.

ರಿಜಿಸ್ಟರ್​ ಪ್ರಕ್ರಿಯೆ ಹೇಗೆ?:ಕೇದಾರ​ನಾಥ್​ ಬಾಗಿಲು ತೆಗೆಯುವ ಸಂದರ್ಭದಲ್ಲಿ ಯಾತ್ರಿಕರು ಸಣ್ಣ ಮಂಜಿನ ಮಳೆಗೂ ಸಾಕ್ಷಿಯಾಗಬಹುದು. ಇಲ್ಲಿ ಯಾತ್ರಿಕರಿಗೆ ಧ್ಯಾನಕ್ಕಾಗಿ ಗುಹೆಗಳನ್ನು ನಿರ್ಮಿಸಲಾಗಿದೆ. ಈ ಯಾತ್ರೆಗೂ ಮುನ್ನ ರಾಜ್ಯ ಸರ್ಕಾರದ ಚಾರ್​ಧಾಮ್​ ಯಾತ್ರೆ 2023ಗೆ ನೋಂದಣಿ ಮಾಡುವುದು ಅವಶ್ಯ. ಉತ್ತರಾಖಂಡ ಸರ್ಕಾರದ ಅಧಿಕೃತ ಜಾಲತಾಣ https://registrationandtouristcare.uk.gov.in/ ದಲ್ಲಿ ನೋಂದಣಿ ಮಾಡಬಹುದು. ಇದರ ಹೊರತಾಗಿ 8394833833ಗೆ ವಾಟ್ಸಾಪ್​ ನಂಬರ್​ ಮೂಲಕವೂ ರಿಜಿಸ್ಟರ್​ ಮಾಡಿಕೊಳ್ಳಬಹುದು. ಈ ದಾಖಲಾತಿ ವೇಳೆ ಆಧಾರ್​, ಆರೋಗ್ಯ ಮಾಹಿತಿ ಸೇರಿದಂತೆ ಕೆಲವು ದಾಖಲೆಗಳನ್ನು ನೀಡಬೇಕು. ದಾಖಲಾತಿ ಬಳಿಕ ಸರ್ಟಿಫಿಕೇಟ್​ ಅನ್ನು ಕಡ್ಡಾಯವಾಗಿ ಡೌನ್​ಲೋಡ್​ ಮಾಡಿ ಪ್ರಿಂಟ್​ ಪಡೆಯಿತು. ಯಾತ್ರೆ ವೇಳೆ ಈ ಸರ್ಟಿಫಿಕೇಟ್​ ತೋರಿಸುವುದು ಅತ್ಯವಶ್ಯಕ. ದಾಖಲಾತಿ ಇಲ್ಲದವರಿಗೆ ಈ ಯಾತ್ರೆ ಕೈಗೊಳ್ಳುವ ಅವಕಾಶ ಇಲ್ಲ.

ಇದನ್ನೂ ಓದಿ:'ದ ಎಲಿಫೆಂಟ್‌ ವಿಸ್ಪರರ್ಸ್‌' ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ: ಒಲಿದು ಬಂತು ಆಸ್ಕರ್‌ ಪ್ರಶಸ್ತಿ!.. ಬೆಳ್ಳಿ ಹೇಳಿದ್ದೇನು?

ABOUT THE AUTHOR

...view details