ಕರ್ನಾಟಕ

karnataka

ETV Bharat / bharat

ಬಾಲಕನನ್ನು ನೀರಿಗೆ ಎಳೆದೊಯ್ದ ಮೊಸಳೆ : ಎಕ್ಸರೇಯಲ್ಲಿ ಹೊಟ್ಟೆ ಖಾಲಿ, ನದಿಯಲ್ಲೂ ಸಿಗದ ಮೃತದೇಹ!

13 ವರ್ಷದ ವೀರ್ ಸಿಂಗ್ ಖತಿಮಾದ ಯುಪಿ ಗಡಿಯ ಸಮೀಪ ಸುನ್ಪಹಾರ್ ಗ್ರಾಮದ ದೇವಾ ನದಿಯಿಂದ ಎಮ್ಮೆಯನ್ನು ದಾಟಿಸುತ್ತಿದ್ದನು. ಆಗ ಮೊಸಳೆ ಆತನನ್ನು ನೀರಿಗೆ ಎಳೆದೊಯ್ದಿದೆ ಎಂದು ಹೇಳಲಾಗುತ್ತಿದೆ.

ಮಗುವನ್ನು ನೀರಿಗೆ ಎಳೆದೊಯ್ದ ಮೊಸಳೆ : ಎಕ್ಸರೇಯಲ್ಲಿ ಹೊಟ್ಟೆ ಖಾಲಿ, ಕೆರೆಯಲ್ಲೂ ಸಿಗದ ಮೃತದೇಹ!
ಮಗುವನ್ನು ನೀರಿಗೆ ಎಳೆದೊಯ್ದ ಮೊಸಳೆ : ಎಕ್ಸರೇಯಲ್ಲಿ ಹೊಟ್ಟೆ ಖಾಲಿ, ಕೆರೆಯಲ್ಲೂ ಸಿಗದ ಮೃತದೇಹ!

By

Published : Jul 4, 2022, 7:21 PM IST

Updated : Jul 4, 2022, 7:41 PM IST

ಖತಿಮಾ(ಉತ್ತರಾಖಂಡ): ಸುನ್ಪಹಾರ್ ಗ್ರಾಮದಲ್ಲಿ ಎಮ್ಮೆಯನ್ನು ನದಿ ದಾಟಿಸಲು ಮುಂದಾದ 13 ವರ್ಷದ ಬಾಲಕನನ್ನು ಮೊಸಳೆ ನದಿಗೆ ಎಳೆದೊಯ್ದಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆಯ ನೆರವಿನಿಂದ ಮೊಸಳೆಯನ್ನು ಹಿಡಿದಿದ್ದಾರೆ. ತರಾತುರಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಮೊಸಳೆಯನ್ನು ಸರ್ಕಾರಿ ಪಶು ಆಸ್ಪತ್ರೆಗೆ ಎಳೆದೊಯ್ದು ಎಕ್ಸ್ ರೇ ಮಾಡಿಸಿದ್ದಾರೆ. ಆದ್ರೆ, ಎಕ್ಸ್ ರೇಯಲ್ಲಿ ಮೊಸಳೆಯ ಹೊಟ್ಟೆ ಖಾಲಿ ಇರುವುದು ಕಂಡು ಬಂದಿದೆ.

ಮತ್ತೊಂದೆಡೆ, ಮುಖ್ಯಮಂತ್ರಿ ಪುಷ್ಕರ್ ಧಾಮಿ ಸಂತ್ರಸ್ತರ ಕುಟುಂಬಗಳೊಂದಿಗೆ ಮಾತನಾಡಿದ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುವ ಭರವಸೆ ನೀಡಿದ್ದಾರೆ. ಗ್ರಾಮಸ್ಥರ ಪ್ರಕಾರ 13 ವರ್ಷದ ವೀರ್ ಸಿಂಗ್ ಖತಿಮಾದ ಯುಪಿ ಗಡಿಯ ಸಮೀಪ ಸುನ್ಪಹಾರ್ ಗ್ರಾಮದ ದೇವಾ ನದಿಯಿಂದ ಎಮ್ಮೆಯನ್ನು ದಾಟಿಸುತ್ತಿದ್ದನು. ಆಗ ಮೊಸಳೆ ಆತನನ್ನು ನೀರಿಗೆ ಎಳೆದೊಯ್ದಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ತಿಳಿದ ಊರಿನ ಜನರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಮಾಹಿತಿ ಮೇರೆಗೆ ಪೊಲೀಸರು ಹಾಗೂ ಅರಣ್ಯ ಇಲಾಖೆ ತಂಡಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಸಾಕಷ್ಟು ಹುಡುಕಾಟ ನಡೆಸಿದರೂ ಬಾಲಕನ ಗುರುತು ಪತ್ತೆಯಾಗಿಲ್ಲ. ಜೊತೆಗೆ ಮೊಸಳೆಯ ಹೊಟ್ಟೆಯಲ್ಲೂ ಈತನ ಮಾಂಸದ ಕುರುಹು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಪಿಎಸ್ಐ ನೇಮಕಾತಿ ಪ್ರಕರಣ: ಹಿರಿಯ ಐಪಿಎಸ್ ಅಧಿಕಾರಿ ಅರೆಸ್ಟ್, 10 ಪೊಲೀಸ್ ಕಸ್ಟಡಿಗೆ​

Last Updated : Jul 4, 2022, 7:41 PM IST

ABOUT THE AUTHOR

...view details