ಚಂಪಾವತ್ (ಉತ್ತರಾಖಂಡ್): ತಮ್ಮ ತವರು ಕ್ಷೇತ್ರವಾದ ಚಂಪಾವತ್ ನಲ್ಲಿ ಎರಡು ದಿನಗಳ ಪ್ರವಾಸದಲ್ಲಿರುವ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಇಲ್ಲಿನ ಜನರೊಂದಿಗೆ ಬೆರೆತು ಅವರ ಕಷ್ಟ ಸುಖಗಳನ್ನು ಆಲಿಸಿದ್ದಾರೆ. ಇದೇ ವೇಳೆ ಅವರು ತಮ್ಮ ನೇತೃತ್ವದರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಸಂಬಂಧ ಅಭಿಪ್ರಾಯವನ್ನು ಪಡೆದಿದ್ದಾರೆ.
ಚಹಾ ಸವಿದು ಸಂಭಾಷಣೆ: ಗುರುವಾರ ಟೆಂಪಲ್ ರನ್ ನಡೆಸಿದ ಸಿಎಂ ಇಂದು ಮುಂಜಾನೆ ಚಂಪಾವತ್ನ ರಸ್ತೆಯಲ್ಲಿ ಮುಂಜಾನೆ ವಾಕ್ ಮಾಡುವ ಮೂಲಕ ಸ್ಥಳೀಯರಿಂದಿಗೆ ಸಂಭಾಷಣೆ ಇಳಿದಿದ್ದುರು. ಅವರ ಈ ವರ್ತನೆ ಕಂಡ ಅನೇಕ ಮಂದಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹಿರಿ ಕಿರಿಯರೆನ್ನದೇ ಎಲ್ಲರನ್ನು ಪ್ರೀತಿಯಂದ ಮಾತನಾಡಿದ ಅವರ ಪರಿಗೆ ಜನರು ಕೂಡ ಹರ್ಷ ವ್ಯಕ್ತಪಡಿಸಿದರು. ಬೆಳಗಿನ ಸೂರ್ಯ ನಮಸ್ಕಾರದ ಬಳಿಕ ನಗರದ ರಸ್ತೆಯಲ್ಲಿ ವಾಕಿಂಗ್ ಆರಂಭಿಸಿದ ಅವರು, ಅಲ್ಲಿಯೇ ರಸ್ತೆ ಬದಿಯಲ್ಲಿದ್ದ ಟೀ ಅಂಗಡಿಗೆ ಹೋಗಿ ಚಹಾ ಸವಿದಿದ್ದಾರೆ. ನಗರದ ಬ್ಲಾಕ್ ರೋಡ್ನಲ್ಲಿದ್ದ ನಿತ್ಯಾನಂದ ಜೋಶಿ ಅವರ ಚಹಾದ ಅಂಗಡಿಗೆ ತೆರಳಿದ ಸಿಎಂ, ಚಹಾದಂಗಡಿ ನಡೆಸುತ್ತಿದ್ದ ಹಿರಿಯ ವ್ಯಕ್ತಿಯೊಂದಿಗೆ ಸಂಭಾಷಣೆ ನಡೆಸಿ, ಅಚ್ಚರಿ ಮೂಡಿಸಿದ್ದಾರೆ. ಈ ವೇಳೆ ಅವರ ಸಮಸ್ಯೆ ಆಲಿಸಿದ ಅವರು, ತಮ್ಮ ಸರ್ಕಾರದ ಕಲ್ಯಾಣ ಯೋಜನೆ ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಪ್ರತಿಕ್ರಿಯೆಯನ್ನು ಪಡೆದಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ ಧಾಮಿ, ಸಾರ್ವಜನಿಕರ ಮುಖದಲ್ಲಿ ಕಾಣುವ ಸಂತೃಪ್ತಿಯ ಭಾವವು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ನಮ್ಮನ್ನು ಪ್ರೇರೇಪಿಸುತ್ತದೆ ಎಂದಿದ್ದಾರೆ.