ಡೆಹ್ರಾಡೂನ್ (ಉತ್ತರಾಖಂಡ):ಉತ್ತರಾಖಂಡ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಇಂದು ತಮ್ಮ ಸಂಪುಟವನ್ನು ವಿಸ್ತರಿಸುವ ನಿರೀಕ್ಷೆಯಿದೆ ಎಂದು ರಾಜ್ಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖ್ಯಸ್ಥ ಬನ್ಸಿಧರ್ ಭಗತ್ ಗುರುವಾರ ತಿಳಿಸಿದ್ದಾರೆ.
ಇಂದು ಉತ್ತರಾಖಂಡ ಸಂಪುಟ ವಿಸ್ತರಣೆ ಸಾಧ್ಯತೆ! - ಉತ್ತರಾಖಂಡ ರಾಜಕೀಯ ಬಿಕ್ಕಟ್ಟು
ಉತ್ತರಾಖಂಡ ಸಿಎಂ ಇತ್ತೀಚೆಗೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಅಧಿಕಾರ ವಹಿಸಿಕೊಂಡಿದ್ದಾರೆ. ಇನ್ನು ರಾವತ್ ಇಂದು ತಮ್ಮ ಸಂಪುಟವನ್ನು ವಿಸ್ತರಿಸುವ ನಿರೀಕ್ಷೆಯಿದೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಬನ್ಸಿಧರ್ ಭಗತ್ ಗುರುವಾರ ತಿಳಿಸಿದ್ದಾರೆ.
ತಿರತ್ ಸಿಂಗ್ ರಾವತ್ ಅವರು ಉತ್ತರಾಖಂಡ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ಇಲ್ಲಿನ ರಾಜ್ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಬೇಬಿ ರಾಣಿ ಮೌರ್ಯ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.
ಉತ್ತರಾಖಂಡದ ಉಸ್ತುವಾರಿ ದುಶ್ಯಂತ್ ಗೌತಮ್ ಬಳಿ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಅವರ ಕ್ಯಾಬಿನೆಟ್ ವಿಸ್ತರಣೆಯ ಬಗ್ಗೆ ಕೇಳಿದಾಗ "ಶೀಘ್ರದಲ್ಲೇ ಕ್ಯಾಬಿನೆಟ್ ವಿಸ್ತರಣೆ ನಡೆಯಲಿದೆ" ಎಂದು ಹೇಳಿದರು. ಇನ್ನು ವಿಸ್ತರಣೆ ಮಾತುಕತೆಯ ಮಧ್ಯೆ, ನಗರಾಭಿವೃದ್ಧಿ ರಾಜ್ಯ ಸಚಿವ ಮದನ್ ಕೌಶಿಕ್ ಕೂಡ ಗೌತಮ್ ಅವರನ್ನು ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಭೇಟಿ ಮಾಡಿದ್ದರು.