ಡೆಹ್ರಾಡೂನ್:ಉತ್ತರಾಖಂಡದ ಸಚಿವ ಡಾ.ಹರಕ್ ಸಿಂಗ್ ರಾವತ್ ಅವರಿಗೆ ರುದ್ರಪ್ರಯಾಗ್ನ ಜಿಲ್ಲಾ ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿ ಜೊತೆಗೆ 1,000 ರೂ. ದಂಡ ಹಾಕಿ ಆದೇಶ ನೀಡಿದೆ.
ಸಚಿವ ಡಾ.ಹರಕ್ ಸಿಂಗ್ ರಾವತ್ಗೆ 3 ತಿಂಗಳು ಜೈಲು ಶಿಕ್ಷೆ: ರುದ್ರಪ್ರಯಾಗ್ ನ್ಯಾಯಾಲಯದ ಆದೇಶ - ನೌಕರರ ಜೊತೆ ಅಲಭ್ಯವಾಗಿ ವರ್ತನೆ ಪ್ರಕರಣ
2012 ರ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಉತ್ತರಾಖಂಡ ಸಚಿವ ಡಾ.ಹರಕ್ ಸಿಂಗ್ ರಾವತ್ ಮತ್ತು ಅವರ ಬೆಂಬಲಿಗರ ವಿರುದ್ಧ, ಸರ್ಕಾರಿ ನೌಕರರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು. ಇದೀಗ ರುದ್ರಪ್ರಯಾಗ್ ಜಿಲ್ಲಾ ನ್ಯಾಯಾಲಯವು ಮೂರು ತಿಂಗಳ ಜೈಲು ಶಿಕ್ಷೆ ಹಾಗೂ 1,000 ರೂ. ದಂಡವನ್ನು ವಿಧಿಸಿ ಆದೇಶ ಹೊರಡಿಸಿದೆ.

ಸಚಿವ ಡಾ.ಹರಕ್ ಸಿಂಗ್ ರಾವತ್
2012ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸರ್ಕಾರಿ ನೌಕರರ ಜೊತೆ ಅಸಭ್ಯವಾಗಿ ವರ್ತಿಸಿರುವುದಕ್ಕೆ ಈ ಶಿಕ್ಷೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಸರ್ಕಾರಿ ನೌಕರರ ಜೊತೆ ಹರಕ್ ಸಿಂಗ್ ಅವರು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಡಾ. ರಾವತ್ ಮತ್ತು ಅವರ ಬೆಂಬಲಿಗರರು ಪ್ರಕರಣ ದಾಖಲಿಸಿದ್ರು.
ಈ ಪ್ರಕರಣವು ಕಳೆದ ಎಂಟು ವರ್ಷಗಳಿಂದ ರುದ್ರಪ್ರಯಾಗ್ ನ್ಯಾಯಾಲಯದಲ್ಲಿತ್ತು. ಆದರೆ ಮೇಲ್ಮನೆ ಅವಧಿಯವರೆಗೆ ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ.
Last Updated : Nov 12, 2020, 6:20 AM IST