ಗೋರಖ್‌ಪುರ, ಉತ್ತರಪ್ರದೇಶ: ಚೀನಾದ ಇಬ್ಬರು ಯುವಕರು ಯುಪಿಐ ಮೂಲಕ ಗೋರಖ್‌ಪುರದ ವ್ಯಕ್ತಿಯೊಬ್ಬರ ಖಾತೆಯಿಂದ ವಾರದಲ್ಲಿ 1.52 ಕೋಟಿ ರೂ. ವ್ಯವಹಾರ ನಡೆಸಿದ್ದಾರೆ. ಕೇರಳದ ಸುಮಾರು 1000 ಖಾತೆಗಳಿಗೆ ಚೀನಾದ ಯುವಕರು ಹಣ ಕಳುಹಿಸಿದ್ದಾರೆ. ಪೊಲೀಸರ ತನಿಖೆಯಲ್ಲಿ ಈ ಮಾಹಿತಿ ಹೊರಬಿದ್ದಿದೆ.
ಶಾಂತಿಪುರಂ ನಿವಾಸಿ ಸಚ್ಚಿದಾನಂದ ದುಬೆ ಅವರು ಎಸ್‌ಎಸ್‌ಪಿ ಗೌರವ್ ಗ್ರೋವರ್‌ಗೆ ದೂರು ಪತ್ರ ಮತ್ತು ಖಾತೆಯ 200 ಪುಟಗಳ ವ್ಯವಹಾರದ ದಾಖಲೆಗಳನ್ನು ಸಲ್ಲಿಸಿದ್ದಾರೆ. ಕೆಲವರು ತಮ್ಮ ಖಾತೆಯೊಂದಿಗೆ ತಪ್ಪು ವಹಿವಾಟು ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜೂನ್ 2022 ರಲ್ಲಿ ಸಂಬಂಧಿಕರೊಬ್ಬರು ಖಾಸಗಿ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ತೆರೆದಿದ್ದರು. ಬಳಿಕ ಆತ ಬ್ಯಾಂಕ್‌ಗೆ ಕರೆದೊಯ್ದು ಮಹಿಳಾ ಉದ್ಯೋಗಿಯೊಬ್ಬರನ್ನು ಪರಿಚಯಿಸಿದ್ದರು. ಖಾತೆ ತೆರೆದ ಬಳಿಕ ನಾನು ಯಾವುದೇ ವಹಿವಾಟು ನಡೆಸಿಲ್ಲ ಎಂದು ಸಚ್ಚಿದಾನಂದ ಹೇಳಿದ್ದಾರೆ.