ಕರ್ನಾಟಕ

karnataka

ETV Bharat / bharat

ಉತ್ತರ ಪ್ರದೇಶ ಚುನಾವಣೆ: ಕುಸ್ತಿಪಟು ಬಬಿತಾ ಫೋಗಟ್ ವಿರುದ್ಧ ಎಫ್‌ಐಆರ್ - ಉತ್ತರ ಪ್ರದೇಶ ಚುನಾವಣೆ

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಚುನಾವಣಾ ಆಯೋಗದ ಮಾರ್ಗಸೂಚಿ ಮತ್ತು ಕೋವಿಡ್​ ನಿಯಮ ಉಲ್ಲಂಘಿಸಿದ ಕುಸ್ತಿಪಟು ಬಬಿತಾ ಫೋಗಟ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

FIR lodged against wrestler Babita Phogat
ಕುಸ್ತಿಪಟು ಬಬಿತಾ ಫೋಗಟ್ ವಿರುದ್ಧ ಎಫ್‌ಐಆರ್

By

Published : Jan 25, 2022, 3:05 AM IST

ಬಾಗ್‌ಪತ್ (ಉತ್ತರ ಪ್ರದೇಶ): ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದ ವೇಳೆ ಚುನಾವಣಾ ಆಯೋಗದ ಮಾರ್ಗಸೂಚಿಗಳು ಮತ್ತು ಕೋವಿಡ್​ ನಿಯಮ ಉಲ್ಲಂಘಿಸಿದ್ದಕ್ಕಾಗಿ ಕುಸ್ತಿಪಟು ಬಬಿತಾ ಫೋಗಟ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಬಬಿತಾ ಫೋಗಟ್ ಅವರು ಸೋಮವಾರ ಬಾಗ್‌ಪತ್‌ನ ಬರೌತ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೃಷ್ಣಪಾಲ್ ಎಸ್. ಮಲಿಕ್ ಪರ ಪ್ರಚಾರ ನಡೆಸಿದ್ದರು. ಈ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದ ಫೋಗಟ್ ಹಾಗೂ ಇತರ 63 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ದೇಶದಲ್ಲಿ ಕೋವಿಡ್ ಪ್ರಕರಣಗಳು ಏರಿಕೆ ಮಟ್ಟದಲ್ಲಿರುವ ಕಾರಣ ಭಾರತೀಯ ಚುನಾವಣಾ ಆಯೋಗವು ರ‍್ಯಾಲಿ ಮತ್ತು ರೋಡ್‌ ಶೋಗಳ ಮೇಲಿನ ನಿಷೇಧವನ್ನು ಜನವರಿ 31ರವರೆಗೆ ವಿಸ್ತರಿಸಿ ಶನಿವಾರ ಆದೇಶಿಸಿತ್ತು. ಆದರೆ ಇದರ ಬೆನ್ನಲ್ಲೇ ಕೋವಿಡ್​ ನಿಯಮಗಳನ್ನು ಉಲ್ಲಂಘನೆ ಪ್ರಕರಣ ನಡೆದಿದೆ.

ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯು 7 ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದ ಮತದಾನವು ಫೆಬ್ರವರಿ 10, ಎರಡನೇ ಹಂತ ಫೆಬ್ರವರಿ 14, ಮೂರನೇ ಹಂತ ಫೆಬ್ರವರಿ 20, ನಾಲ್ಕನೇ ಹಂತ ಫೆಬ್ರವರಿ 23, ಐದನೇ ಹಂತ ಫೆಬ್ರವರಿ 27, ಮಾರ್ಚ್ 3ರಂದು ಆರನೇ ಹಂತ ಮತ್ತು ಮಾರ್ಚ್​ 7ರಂದು ಏಳನೇ ಹಂತದ ಮತದಾನ ಇರಲಿದೆ.

ಇದನ್ನೂ ಓದಿ:ಉತ್ತರ ಪ್ರದೇಶ ವಿಧಾನಸಭೆ ಫೈಟ್​​: ಕೊನೆಗೂ ಅಭ್ಯರ್ಥಿಗಳ ಲಿಸ್ಟ್ ರಿಲೀಸ್ ಮಾಡಿದ ಸಮಾಜವಾದಿ

ABOUT THE AUTHOR

...view details