ಅಯೋಧ್ಯಾ (ಉತ್ತರ ಪ್ರದೇಶ):ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತಿಹಾಸಕಾರರ ವಿರುದ್ಧ ಆಕ್ರೋಶ ಹೊರಹಾಕಿದ್ದು, ರಾಜ ಮಹಾರಾಣಾ ಪ್ರತಾಪರ ಬಗ್ಗೆ ಏನೂ ಹೇಳದಿದ್ದರೂ ಅಕ್ಬರ್ನನ್ನು ಮಹಾನ್ ನಾಯಕ ಎಂದು ಬಿಂಬಿಸಿರುವುದಕ್ಕೆ ಆಪ್ಷೇಪ ವ್ಯಕ್ತಪಡಿಸಿದ್ದಾರೆ.
ಭಾರತೀಯ ಜನತಾ ಪಕ್ಷದ ಹಿಂದುಳಿದ ವರ್ಗ ಮೋರ್ಚಾ (ಸೆಲ್)ದ ಮೂರು ದಿನಗಳ ಕಾರ್ಯಕಾರಿ ಸಮಿತಿಯ ಸಭೆಯ ಸಮಾರೋಪ ದಿನದಂದು ಅವರು ಮಾತನಾಡಿ ಈ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಹಿಂದಿನ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡ ಯೋಗಿ ಆದಿತ್ಯನಾಥ್, ಹಿಂದಿನ ಸರ್ಕಾರಗಳು ಜಾತಿ ಆಧಾರದ ಮೇಲೆ ಸಮಾಜವನ್ನು ವಿಭಜಿಸಿದವು. ಆದರೆ, ನಮ್ಮ ಸರ್ಕಾರವು ನಿಶದ್ರಜ್, ಮಹಾರಾಜ್ ಸುಹಲ್ದೇವ್, ಮಹಾರಾಣಿ ಲಕ್ಷ್ಮಿಬಾಯಿ, ಶಿವಾಜಿ ಮಹಾರಾಜ್, ಮಹಾರಾಣಾ ಪ್ರತಾಪ್, ಝಲ್ಕರಿ ಮುಂತಾದ ನಾಯಕರು ಒದಗಿಸಿದ ಅಭಿವೃದ್ಧಿ ಮಾದರಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.