ಲಖನೌ (ಉತ್ತರಪ್ರದೇಶ): ಸರಿಯಾಗಿ 2019ರಂದು ಈ ದಿನದಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370ನೇ ವಿಧಿ ರದ್ದು ಮಾಡಿ ಐತಿಹಾಸಿಕ ನಿರ್ಣಯ ಕೈಗೊಂಡಿತ್ತು. ಈ ಹಿಂದೆ ಕಣಿವೆ ರಾಜ್ಯ ನಿರಂತರ ಹಿಂಸಾಚಾರ ಸೈನಿಕರ ಮೇಲಿನ ದಾಳಿ, ಭಯೋತ್ಪಾದಕರ ಅಟ್ಟಹಾಸದಿಂದ ತತ್ತರಿಸಿತ್ತು.
ಇದಕ್ಕೆ ಕಡಿವಾಣ ಹಾಕಲು ಮುಂದಾದ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. 370ನೇ ವಿಧಿ ರದ್ದುಗೊಂಡು ಇಂದಿಗೆ 4 ವರ್ಷಗಳು ಪೂರೈಸಿದೆ. ಸಧ್ಯ ಕಣಿವೆ ರಾಜ್ಯದಲ್ಲಿನ ಗಲಭೆ, ಹಿಂಸಚಾರ ಪ್ರಕರಣಗಳು ನಿಯಂತ್ರಣಕ್ಕೆ ಬಂದಿದ್ದು, ಅಲ್ಲಿಯ ಜನರು ನಿರ್ಭಯವಾಗಿ, ನೆಮ್ಮದಿಯ ಜೀವನ ಸಾಗಿಸುವಂತಾಗಿದೆ.
ಈ ಕುರಿತು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಯೋಗಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, "ಭಯೋತ್ಪಾದನೆ, ದುರಾಡಳಿತ ಮತ್ತು ಭಯೋತ್ಪಾಧನೆ ಪೋಷಕ ಮತ್ತು ನಮ್ಮ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಕಳಂಕವಾದ ಆರ್ಟಿಕಲ್ 370 ಮತ್ತು 35-ಎ ರದ್ದಾಗಿ ಇಂದಿಗೆ 4 ವರ್ಷಗಳು ಪೂರ್ಣಗೊಂಡಿದ್ದು, ಎಲ್ಲರಿಗೂ ಅಭಿನಂದನೆಗಳು"
"ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಅವರ ಯಶಸ್ವಿ ನಾಯಕತ್ವದಲ್ಲಿ ಕೈಗೊಂಡ ಈ ಐತಿಹಾಸಿಕ ಕಾರ್ಯದಿಂದ 'ಒಂದು ದೇಶ-ಒಂದು ಗುರುತು-ಒಂದು ಶಾಸನ' ಎಂಬ ಸಂಕಲ್ಪವು ಈಡೇರಿದೆ. ಇಂದು ಜಮ್ಮು- ಕಾಶ್ಮೀರ ಮತ್ತು ಲಡಾಖ್ 'ಸಬ್ಕಾ ಸಾಥ್ - ಸಬ್ಕಾ ವಿಕಾಸ್ - ಸಬ್ಕಾ ವಿಶ್ವಾಸ್ ಎಂಬ ಮನೋಭಾವದೊಂದಿಗೆ ಒಂದಾಗಿವೆ" ಎಂದು ಟ್ವೀಟ್ನಲ್ಲಿ ಬರೆದಿದ್ದಾರೆ.
ಏತನ್ಮಧ್ಯೆ ಸುಪ್ರೀಂಕೋರ್ಟ್ ಜಮ್ಮು ಮತ್ತು ಕಾಶ್ಮೀರದ ವಿಶೇಷಸ್ಥಾನಮಾನ 370ನೇ ವಿಧಿ ರದ್ದು ಮಾಡಿ, 2 ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಾಗಿಸಿದ್ದರ ವಿರುದ್ಧ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಪ್ರಾರಂಭಿಸಿದೆ. ಆಗಸ್ಟ್ 2ರಿಂದ ಪ್ರಾರಂಭಿಸಿದೆ. ಐವರು ನ್ಯಾಯಮೂರ್ತಿಗಳ ಒಳಗೊಂಡ ಸಾಂವಿಧಾನಿಕ ಪೀಠ ಅರ್ಜಿಗಳ ವಿಚಾರಣೆ ಮುಂದುವರೆಸಿದೆ.
ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿ ರದ್ದು ವಿರೋಧಿಸಿ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿದೆ. ಅವೆಲ್ಲವನ್ನು ಒಟ್ಟುಗೂಡಿಸಿ ಸುಪ್ರೀಂನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಸೂರ್ಯಕಾಂತ್ ಮತ್ತು ಸಂಜಯ್ ಕಿಶನ್ ಕೌಲ್ ಅವರಿದ್ದ ಪೀಠವು ವಿಚಾರಣೆ ಆರಂಭಿಸಿದೆ.
ಇದನ್ನೂ ಓದಿ:Article 370: ಸುಪ್ರೀಂಕೋರ್ಟ್ನ ಸಾಂವಿಧಾನಿಕ ಪೀಠದಿಂದ 370 ನೇ ವಿಧಿ ರದ್ದು ವಿರೋಧಿ ಅರ್ಜಿಗಳ ವಿಚಾರಣೆ ಇಂದಿನಿಂದ ಶುರು