ಕರ್ನಾಟಕ

karnataka

ETV Bharat / bharat

ವಿಶಾಖಪಟ್ಟಣಂನ ಕರಾವಳಿಗೆ ತಲುಪಿದ ಅಮೆರಿಕನ್ ಯುದ್ಧನೌಕೆ ಸಿವಿಎನ್-70..ಏನುಂಟು ಏನಿಲ್ಲ!!? - Visakhapatnam

ಅಮೆರಿಕನ್ ಯುದ್ಧನೌಕೆ ಯುಎಸ್ಎಸ್ ಕಾರ್ಲ್ ವಿನ್ಸನ್ (ಸಿವಿಎನ್ -70) ವಿಶಾಖಪಟ್ಟಣಂನ ಕರಾವಳಿಗೆ ತಲುಪಿದೆ.

USS carl Vinson warship reached to Visakhapatnam
ವಿಶಾಖಪಟ್ಟಣಂನ ಕರಾವಳಿಗೆ ತಲುಪಿದ ಅಮೇರಿಕನ್ ಯುದ್ಧನೌಕೆ ಸಿವಿಎನ್-70

By

Published : Oct 14, 2021, 7:33 PM IST

ನವದೆಹಲಿ: ಪ್ರಸಿದ್ಧ ಅಮೆರಿಕನ್ ಯುದ್ಧನೌಕೆ ಯುಎಸ್ಎಸ್ ಕಾರ್ಲ್ ವಿನ್ಸನ್ (ಸಿವಿಎನ್ -70) ವಿಶಾಖಪಟ್ಟಣಂನ ಕರಾವಳಿಗೆ ತಲುಪಿದೆ. ಬಂಗಾಳ ಕೊಲ್ಲಿಯಲ್ಲಿ 'ಆಪರೇಷನ್ ಮಲಬಾರ್' ಸಮರಾಭ್ಯಾಸದ ತಂತ್ರಗಳಲ್ಲಿ ಭಾಗವಹಿಸಲು ಯುಎಸ್ ನೌಕಾಪಡೆಯು ಸಿವಿಎನ್ -70 ಅನ್ನು ವಿಶಾಖಪಟ್ಟಣಂಗೆ ಕಳುಹಿಸಿದೆ.

ಯುಎಸ್ಎಸ್ ಕಾರ್ಲ್ ವಿನ್ಸನ್ ನೌಕೆಯನ್ನು 1980ರಲ್ಲಿ ಯುಎಸ್ ನೌಕಾಪಡೆಗೆ ಪರಿಚಯಿಸಲಾಯಿತು. ಜಾರ್ಜಿಯಾದ ನಾಯಕ ಕಾರ್ಲ್ ವಿನ್ಸನ್ ಅವರು ಯುಎಸ್ ನೌಕಾಪಡೆಗೆ ಸಲ್ಲಿಸಿದ ಸೇವೆಗಳಿಗಾಗಿ ನೌಕೆಗೆ ಹೀಗೆ ಹೆಸರಿಸಲಾಗಿದೆ. ಇದು 1983 ರಿಂದ ಸೇವೆ ಸಲ್ಲಿಸುತ್ತಿದೆ. ಪ್ರಸ್ತುತ ಅಗತ್ಯಗಳಿಗೆ ತಕ್ಕಂತೆ ಕಾಲಕಾಲಕ್ಕೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಆಧುನೀಕರಿಸಲಾಗಿದೆ. ಸಾಮಾನ್ಯ ವಿಮಾನವಾಹಕ ನೌಕೆಗಳಿಗೆ ಹೋಲಿಸಿದರೆ, ಇದರ ಗಾತ್ರ ಮತ್ತು ಸೌಲಭ್ಯಗಳು ತುಂಬಾ ದೊಡ್ಡದಾಗಿದೆ.

ಯುದ್ಧ ನೌಕೆಯ ಕೆಲವು ವಿಶೇಷತೆಗಳು:

  • ಯುದ್ಧ ನೌಕೆಯಿಂದ ಕ್ಷಿಪಣಿಗಳನ್ನು ಕೂಡ ಉಡಾಯಿಸಬಹುದು.
  • ಅದು ತಕ್ಷಣವೇ ಎದುರಾಳಿಗಳನ್ನು ಪತ್ತೆಹಚ್ಚಬಲ್ಲ ಸುಧಾರಿತ ವ್ಯವಸ್ಥೆಗಳನ್ನು ಹೊಂದಿದೆ.
  • ಇದು ಅತ್ಯಾಧುನಿಕ ಯುದ್ಧ ವಿಮಾನಗಳು, ಹೆಲಿಕಾಫ್ಟರ್‌ಗಳನ್ನು ಹೊಂದಿದ್ದು, ಏಕಕಾಲದಲ್ಲಿ ಶತ್ರು ರಾಷ್ಟ್ರಗಳ ಮೇಲೆ ದಾಳಿ ಮಾಡಬಹುದಾಗಿದೆ.
  • ಕೆಲ ಯುದ್ಧಗಳ ಕಾರ್ಯಾಚರಣೆಗಳಲ್ಲಿ ಈ ಹಡಗು ಪ್ರಮುಖ ಪಾತ್ರ ವಹಿಸಿದೆ.
  • ಒಸಾಮಾ ಬಿನ್ ಲಾಡೆನ್ ಮೃತದೇಹವನ್ನು ಈ ಯುದ್ಧ ನೌಕೆಯಲ್ಲಿ ಸಾಗಿಸಲಾಗಿತ್ತು.

ಯುಎಸ್ಎಸ್ ಕಾರ್ಲ್ ವಿನ್ಸನ್:

  • ತೂಕ: 1,13,500 ಟನ್.
  • ಉದ್ದ: 1,092 ಅಡಿಗಳು.
  • ಅಗಲ: 252 ಅಡಿ.
  • ವೇಗ: ಗಂಟೆಗೆ 56 ಕಿ.ಮೀ.
  • ಸಿಬ್ಬಂದಿ: 6,012.

ಪೂರ್ವ ಲಡಾಖ್‌ನಲ್ಲಿ ಗಡಿ ಸಂಘರ್ಷದ ಬಗ್ಗೆ 13ನೇ ಸುತ್ತಿನ ಭಾರತ - ಚೀನಾ ಸೇನಾ ಮಟ್ಟದ ಮಾತುಕತೆ ವಿಫಲವಾದ ಮರುದಿನವೇ ಬಂಗಾಳ ಕೊಲ್ಲಿಯಲ್ಲಿ ಭಾರತ ಎರಡನೇ ಹಂತದ ಆಪರೇಷನ್ ಮಲಬಾರ್ ಸಮರಾಭ್ಯಾಸವನ್ನು ಕ್ವಾಡ್ ದೇಶಗಳೊಂದಿಗೆ ಆರಂಭಿಸಿದೆ. ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ಸೇನೆಗಳು ಶಕ್ತಿ ಪ್ರದರ್ಶನದಲ್ಲಿ ಭಾಗಿಯಾಗಿವೆ.

ABOUT THE AUTHOR

...view details