ಕರ್ನಾಟಕ

karnataka

ETV Bharat / bharat

ಇ ಸಿಗರೇಟ್​ಗಳ ಬಳಕೆ ಉತ್ತೇಜನ ಬೇಡ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ - ಕೇಂದ್ರ ಸರ್ಕಾರ ಈಗಾಗಲೇ ಇ ಸಿಗರೇಟ್

ಇ ಸಿಗರೇಟ್​ ಅನ್ನು ಈಗಾಗಲೇ ದೇಶದಲ್ಲಿ ನಿರ್ಬಂಧಿಸಲಾಗಿದೆ. ಇದನ್ನು ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧವಾಗಿದೆ.

Use of e cigarettes should not be encouraged: Union Ministry of Information and Broadcasting
Use of e cigarettes should not be encouraged: Union Ministry of Information and Broadcasting

By

Published : May 10, 2023, 10:36 AM IST

ಬೆಂಗಳೂರು: ಎಲೆಕ್ಟ್ರಾನಿಕ್​​ ಸಿಗರೇಟ್​ಗಳ ಅಪಾಯವನ್ನು ಮನಗಂಡ ಕೇಂದ್ರ ಸರ್ಕಾರ ಈಗಾಗಲೇ ಇ ಸಿಗರೇಟ್ (ಎಲೆಕ್ಟ್ರಾನಿಕ್​ ಸಿಗರೇಟ್​​) ಉತ್ಪನ್ನದ​ ಮಾರಾಟ ಮತ್ತು ಬಳಕೆ ನಿಷೇಧಿಸಿದೆ. ಈ ನಿಯಮಗಳನ್ನು ಮಾಧ್ಯಮಗಳಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಜೊತೆಗೆ ಇದರ ನಿಬಂಧನೆಗಳು ಉಲ್ಲಂಘನೆ ಆಗದಂತೆ ನೋಡಿಕೊಂಡು, ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಾಧ್ಯಮಗಳಿಗೆ ಸೂಚಿಸಿದೆ.

ಕೆಲವು ಪ್ರಮುಖ ಮಾಧ್ಯಮಗಳು ಇ ಸಿಗರೇಟುಗಳನ್ನು ಉತ್ತೇಜಿಸಲು ಮುಂದಾಗಿದೆ ಎಂಬುದು ನವದೆಹಲಿಯಲ್ಲಿ ನಡೆದ ವ್ಯಾಪಾರ ಶೃಂಗ ಸಭೆಯಲ್ಲಿ ಕಂಡು ಬಂದಿದೆ. ಈ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಗಮನಕ್ಕೆ ಕೂಡ ಬಂದಿದೆ. ಈ ಸಂಬಂಧ ಮುದ್ರಣ, ಎಲೆಕ್ಟ್ರಾನಿಕ್​ ಮತ್ತು ಡಿಜಿಟಲ್​ ಸೇರಿದಂತೆ ಎಲ್ಲ ಮಾಧ್ಯಮಗಳಿಗೆ ಸಚಿವಾಲಯ ತಿಳಿಸಿದೆ.

ನಿಯಮ ಮೀರಿದವರಿಗೆ ಎಚ್ಚರಿಕೆ: ಎಲೆಕ್ಟ್ರಾನಿಕ್ ಸಿಗರೇಟ್‌ಗಳ ನಿಷೇಧ (ಉತ್ಪಾದನೆ, ಉತ್ಪಾದನೆ, ಆಮದು, ರಫ್ತು, ಸಾರಿಗೆ, ಮಾರಾಟ, ವಿತರಣೆ, ಸಂಗ್ರಹಣೆ ಮತ್ತು ಜಾಹೀರಾತು) ಕಾಯ್ದೆ 2019 ಜಾರಿಗೆ ತರಲಾಗಿದೆ. ಈ ಕಾಯ್ದೆ ಅನುಸಾರ ಎಲೆಕ್ಟ್ರಾನಿಕ್ ಸಿಗರೇಟುಗಳ ಬಳಕೆಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಉತ್ತೇಜಿಸುವ ಜಾಹೀರಾತುಗಳನ್ನು ನಿಷೇಧಿಸುತ್ತದೆ. ಒಂದು ವೇಳೆ ನಿಯಮ ಮೀರಿ ಈ ವಸ್ತುಗಳ ಉತ್ತೇಜಿಸುವ ಜಾಹೀರಾತು ಪ್ರಸಾರಗಳಿಗೆ 1 ವರ್ಷ ಶಿಕ್ಷೆ ಅಥವಾ 1 ಲಕ್ಷ ದಂಡ ಅಥವಾ ಇವೆರಡನ್ನು ವಿಧಿಸಬಹುದಾಗಿದೆ.

ಈ ಹಿನ್ನಲೆ ಈ ರೀತಿಯ ಜಾಹೀರಾತು ಅಥವಾ ಯಾವುದೇ ಪ್ರಚಾರ ಅಥವಾ ಇತರ ಪ್ರಚಾರಗಳ ಮೂಲಕ ಉಲ್ಲಂಘಿದಂತೆ ನೋಡಿಕೊಳ್ಳುವ ಕೆಲಸಗಳನ್ನು ನಡೆಸಬೇಕಿದೆ ಎಂದು ಸಚಿವಾಲಯ ತಿಳಿಸಿದೆ.

ಏನಿದು ಇ ಸಿಗರೇಟ್​​: ಇ ಸಿಗರೇಟುಗಳು ಹೆಚ್ಚಿನ ನಿಕೋಟಿನ್​ ಅಂಶವನ್ನು ಹೊಂದಿದ್ದು, ಇದು ಬ್ಯಾಟರಿ ಚಾಲಿತ ಸಾಧನವಾಗಿದೆ. ಇದರಲ್ಲಿ ತಂಬಾಕು ಇರುವುದಿಲ್ಲ ಆದರೆ, ನಿಕೋಟಿನ್​ ಅಂಶ ಹೆಚ್ಚಾಗಿರುತ್ತದೆ. ಇದು ಸಿಗರೇಟ್​ ಸೇದಿದ ಅನುಭೂತಿಯನ್ನು ನೀಡಿದರು ಇವು ಶ್ವಾಸಕೋಶದ ಕೋಶಗಳನ್ನು ಹಾನಿ ಮಾಡುತ್ತದೆ. ಯುವ ಜನರಲ್ಲಿ ಹೆಚ್ಚಿನ ವ್ಯಸನಕ್ಕೆ ಕಾರಣವಾಗುವ ಇದು ಹೆಚ್ಚು ಅಪಾಯಕಾರಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈ ಉತ್ಪನ್ನಗಳ ಮಾರಾಟಕ್ಕೆ ನಿಷೇಧ ಹೇರುವಂತೆ ಪ್ರಸ್ತಾಪವನ್ನು ಮೋದಿ ನೇತೃತ್ವದ ಸರ್ಕಾರ ಮುಂದೆ ಇರಿಸಲಾಗಿತ್ತು.

ಈ ಹಿನ್ನಲೆ ಸಂವಿಧಾನದ 47 ನೇ ಪರಿಚ್ಛೇದದ ಪ್ರಕಾರ ಸಾರ್ವಜನಿಕ ಆರೋಗ್ಯದ ಒಟ್ಟಾರೆ ಹಿತದೃಷ್ಟಿಯಿಂದ, ಎಲ್ಲ ರೀತಿಯ ಎಲೆಕ್ಟ್ರಾನಿಕ್ ನಿಕೋಟಿನ್ ವಿತರಣಾ ವ್ಯವಸ್ಥೆಗಳು, ಹೀಟ್ ನಾಟ್ ಬರ್ನ್ ಪ್ರಾಡಕ್ಟ್ಸ್, ಇ-ಹುಕ್ಕಾ ಸೇರಿದಂತೆ ಇ-ಸಿಗರೇಟ್​​ಗಳನ್ನು ನಿಷೇಧಿಸಲು ನಿರ್ಧರಿಸಿತು. ಭವಿಷ್ಯದ ಆತಂಕ ಗಮನಿಸಿದ ಕೇಂದ್ರ ಸರ್ಕಾರ ಈ ಉತ್ಪನ್ನಗಳ ಮಾರಾಟ, ರಫ್ತು, ಆಮದು, ವಿತರಣೆ ಮತ್ತು ಜಾಹೀರಾತಿಗೆ ನಿರ್ಬಂಧ ವಿಧಿಸಿದೆ. ಅಲ್ಲದೇ, ಈ ನಿರ್ಬಂಧಗಳನ್ನು ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆಯನ್ನು ನೀಡಲಾಗುವುದು ಎಂದು ಕೂಡ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಚೀತಾ ಉದಯ್​ ಸಾವಿಗೆ ಮೂತ್ರಪಿಂಡ ಸೋಂಕು ಕಾರಣ: ವರದಿ

ABOUT THE AUTHOR

...view details