ಕರ್ನಾಟಕ

karnataka

ETV Bharat / bharat

ಭಾರತದ ಬಗ್ಗೆ ಅಮೆರಿಕ ಸೈಲೆಂಟಾಗಿದೆ, 'ನನಗೆ ಆರ್ಥಿಕ ಸಮಾನತೆ ಬೇಕು'- ರಾಹುಲ್ ಗಾಂಧಿ - ನಿಕೋಲಸ್ ಬರ್ನ್ಸ್ ಜತೆ ರಾಹುಲ್ ಗಾಂಧಿ ಸಂಭಾಷಣೆ

ಚುನಾವಣೆಗಳ ವಿರುದ್ಧ ಹೋರಾಡಲು ನನಗೆ ಸಾಂಸ್ಥಿಕ ರಚನೆಗಳು ಬೇಕು. ನನ್ನನ್ನು ರಕ್ಷಿಸುವ ನ್ಯಾಯಾಂಗ ವ್ಯವಸ್ಥೆ ನನಗೆ ಬೇಕು. ನನಗೆ ಸಮಂಜಸವಾಗಿ ಮುಕ್ತವಾದ ಮಾಧ್ಯಮ ಬೇಕು. ನನಗೆ ಆರ್ಥಿಕ ಸಮಾನತೆ ಬೇಕು. ನನಗೆ ರಾಜಕೀಯ ಪಕ್ಷವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವ ಸಾಂಸ್ಥಿಕ ರಚನೆಗಳ ಒಂದು ಕೂಟ ಬೇಕೇಬೇಕು. ನಾನು ಅವುಗಳನ್ನು ಹೊಂದಿಲ್ಲ ಎಂದು ರಾಹುಲ್​ ಗಾಂಧಿ ಹೇಳಿದರು.

Rahul Gandhi
Rahul Gandhi

By

Published : Apr 3, 2021, 1:01 PM IST

ನವದೆಹಲಿ:ಭಾರತದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಅಮೆರಿಕ ಮೌನವಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಜಾಗತಿಕ ಪ್ರಜಾಪ್ರಭುತ್ವಗಳ ದೃಷ್ಟಿ ಕೋನದ ಬಗ್ಗೆ ಮಾತನಾಡುವಾಗ ಈ ವಿಷಯ ಪ್ರಸ್ತಾಪಿಸಿದರು.

ಅಮೆರಿಕವು ಅಗಾಧವಾದ ಕಲ್ಪನೆ ಹೊಂದಿದ ಒಂದು ರಾಷ್ಟ್ರವೆಂದು ನಾನು ಮೂಲಭೂತವಾಗಿ ನಂಬುತ್ತೇನೆ. ನಿಮ್ಮ ಸಂವಿಧಾನದಲ್ಲಿ ಸ್ವಾತಂತ್ರ್ಯದ ಕಲ್ಪನೆಯನ್ನು ಅದು ಸುತ್ತುವರೆದಿದೆ. ಆದರೆ, ನೀವು ಆ ಕಲ್ಪನೆಯನ್ನು ಸಮರ್ಥಿಸಿಕೊಳ್ಳಬೇಕು ಎಂದು ಅಮೆರಿಕದ ಮಾಜಿ ರಾಯಭಾರಿ, ಪ್ರಸ್ತುತ ಹಾರ್ವರ್ಡ್ ಕೆನಡಿ ಶಾಲೆಯ ಪ್ರಾಧ್ಯಾಪಕ ನಿಕೋಲಸ್ ಬರ್ನ್ಸ್ ಜತೆ ಅವರ ಜತೆಗಿನ ಆನ್‌ಲೈನ್ ಚರ್ಚೆಯ ವೇಳೆ ರಾಹುಲ್ ಗಾಂಧಿ ಹೇಳಿದರು.

ಭಾರತದಲ್ಲಿ ಇಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಅಮೆರಿಕದ ಮೂಲಭೂತದಿಂದ ನಾನು ಏನನ್ನೂ ಕೇಳುತ್ತಿಲ್ಲ ಎಂದು, ಚೀನಾ ಮತ್ತು ರಷ್ಯಾ ಪ್ರಜಾಪ್ರಭುತ್ವ ಒಡ್ಡುತ್ತಿರುವ ಕಠಿಣ ಸವಾಲುಗಳ ವಿಚಾರದ ಪ್ರಶ್ನೆಗೆ ಉತ್ತರಿಸಿದರು.

ಇದನ್ನೂ ಓದಿ: ಮೋದಿ, ಶಾ, ನಡ್ಡಾ ಪ್ರಚಾರದಲ್ಲಿ ಭಾಗಿಯಾಗದಂತೆ ನಿರ್ಬಂಧಿಸಿ: ಕಾಂಗ್ರೆಸ್ ಮನವಿ

ಭಾರತದಲ್ಲಿ ಇಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಾನು ಅಮೆರಿಕದಿಂದ ಏನನ್ನೂ ಕೇಳುತ್ತಿಲ್ಲ. ನೀವು 'ಪ್ರಜಾಪ್ರಭುತ್ವಗಳ ಪಾಲುದಾರಿಕೆ' ಎಂದು ಹೇಳುತ್ತಿದ್ದರೆ, ಇಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಅಮೆರಿಕವು ಒಂದು ಆಳವಾದ ಮತ್ತು ಸ್ವಾತಂತ್ರ್ಯದ ಕಲ್ಪನೆ ಮತ್ತು ಪ್ರಬಲವಾದ ಸಂವಿಧಾನವನ್ನು ಹೊಂದಿರುವ ರಾಷ್ಟ್ರ. ಅದು ಬಹಳ ಶಕ್ತಿಯುತವಾದ ಕಲ್ಪನೆ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಆದರೆ, ನೀವು ಆ ಕಲ್ಪನೆಯನ್ನು ಸಮರ್ಥಿಸಿಕೊಳ್ಳಬೇಕು ಎಂಬುದನ್ನು ವಿಶ್ವ ಬಯಸುತ್ತಿದೆ.

ಚುನಾವಣೆಗಳ ವಿರುದ್ಧ ಹೋರಾಡಲು ನನಗೆ ಸಾಂಸ್ಥಿಕ ರಚನೆಗಳು ಬೇಕು. ನನ್ನನ್ನು ರಕ್ಷಿಸುವ ನ್ಯಾಯಾಂಗ ವ್ಯವಸ್ಥೆ ನನಗೆ ಬೇಕು. ನನಗೆ ಸಮಂಜಸವಾಗಿ ಮುಕ್ತವಾದ ಮಾಧ್ಯಮ ಬೇಕು. ನನಗೆ ಆರ್ಥಿಕ ಸಮಾನತೆ ಬೇಕು. ನನಗೆ ರಾಜಕೀಯ ಪಕ್ಷವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವ ಸಾಂಸ್ಥಿಕ ರಚನೆಗಳ ಒಂದು ಕೂಟ ಬೇಕು. ನಾನು ಅವುಗಳನ್ನು ಹೊಂದಿಲ್ಲ ಎಂದು ರಾಹುಲ್​ ಅಸಮಾಧಾನ ಹೊರ ಹಾಕಿದರು.

ABOUT THE AUTHOR

...view details