ಕರ್ನಾಟಕ

karnataka

ETV Bharat / bharat

ಯುಎಸ್​ನಲ್ಲಿ ಅಧ್ಯಯನ ಮಾಡುವ ಭಾರತೀಯರ ಸಂಖ್ಯೆ ದ್ವಿಗುಣ : ಸಚಿವ ಡೇವಿಡ್ ಕೆನಡಿ - ಯುನೈಟೆಡ್ ಸ್ಟೇಟ್ಸ್​​ನಲ್ಲಿ ಅಧ್ಯಯನ

ಮುಂದಿನ ವರ್ಷದ ಆರಂಭದಲ್ಲಿ ಹೈದರಾಬಾದ್‌ನಲ್ಲಿ ಎರಡನೇ ಎಜುಕೇಶನ್ ಯುಎಸ್ಎ ಕೇಂದ್ರವನ್ನು ವೈ-ಆ್ಯಕ್ಸಿಸ್ ಫೌಂಡೇಶನ್ ಉದ್ಘಾಟಿಸಲಿದೆ. ಯುನೈಟೆಡ್ ಸ್ಟೇಟ್ಸ್​​ನಲ್ಲಿ ಅಧ್ಯಯನ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಅವಕಾಶಗಳ ಬಗ್ಗೆ ನಿಖರ, ಸಮಗ್ರ ಮತ್ತು ನವೀಕೃತ ಮಾಹಿತಿ ನೀಡುತ್ತದೆ..

ಯುಎಸ್​
ಯುಎಸ್​

By

Published : Nov 16, 2020, 5:54 PM IST

ನವದೆಹಲಿ:ಸುಮಾರು ಎರಡು ಲಕ್ಷ ಭಾರತೀಯ ವಿದ್ಯಾರ್ಥಿಗಳು 2019-20ನೇ ಸಾಲಿನಲ್ಲಿ ಉನ್ನತ ಶಿಕ್ಷಣ ಪಡೆಯಲು ಅಮೆರಿಕವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಓಪನ್ ಡೋರ್ಸ್ ವರದಿಯಿಂದ ತಿಳಿದು ಬಂದಿದೆ.

ವಿಶ್ವದಾದ್ಯಂತದ ಇರುವ ಸುಮಾರು ಒಂದು ದಶ ಲಕ್ಷಕ್ಕೂ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳಲ್ಲಿ ಶೇ.20ರಷ್ಟು ವಿದ್ಯಾರ್ಥಿಗಳನ್ನು ಅಮೆರಿಕ ಹೊಂದಿದೆ. ಯುನೈಟೆಡ್ ಸ್ಟೇಟ್ಸ್​ಗೆ ಭಾರತದಿಂದ ಬರುವ ವಿದ್ಯಾರ್ಥಿಗಳ ಸಂಖ್ಯೆ ಕೂಡ ಇತ್ತೀಚೆಗೆ ಏರಿದೆ.

ಭಾರತೀಯ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು, ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಿದ್ಯಾರ್ಥಿಗಳಿಗೆ ಏಳು ಯುಎಸ್ಎ ಸಲಹಾ ಕೇಂದ್ರಗಳ ಮೂಲಕ ಸಲಹೆ ನೀಡುತ್ತದೆ. ನವದೆಹಲಿ, ಹೈದರಾಬಾದ್, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಅಹಮದಾಬಾದ್ ಮತ್ತು ಮುಂಬೈನಲ್ಲಿ ಕೇಂದ್ರಗಳಿವೆ.

ಮುಂದಿನ ವರ್ಷದ ಆರಂಭದಲ್ಲಿ ಹೈದರಾಬಾದ್‌ನಲ್ಲಿ ಎರಡನೇ ಎಜುಕೇಶನ್ ಯುಎಸ್ಎ ಕೇಂದ್ರವನ್ನು ವೈ-ಆ್ಯಕ್ಸಿಸ್ ಫೌಂಡೇಶನ್ ಉದ್ಘಾಟಿಸಲಿದೆ. ಯುನೈಟೆಡ್ ಸ್ಟೇಟ್ಸ್​​ನಲ್ಲಿ ಅಧ್ಯಯನ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಅವಕಾಶಗಳ ಬಗ್ಗೆ ನಿಖರ, ಸಮಗ್ರ ಮತ್ತು ನವೀಕೃತ ಮಾಹಿತಿ ನೀಡುತ್ತದೆ. ಅಲ್ಲದೇ, ಯುಎಸ್ಎ ಸಲಹೆಗಾರರಿಂದ ಎಲ್ಲಾ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ.

ಯುನೈಟೆಡ್ ಸ್ಟೇಟ್ಸ್​​ನಲ್ಲಿ ಅಧ್ಯಯನ ಮಾಡುವ ಬಗ್ಗೆ ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳಲು ಬಯಸುವ ವಿದ್ಯಾರ್ಥಿಗಳು ಐಒಎಸ್ ಮತ್ತು ಆಂಡ್ರಾಯ್ಡ್ ಸಾಧನಗಳಲ್ಲಿ ಉಚಿತವಾಗಿ ಲಭ್ಯವಿರುವ ಎಜುಕೇಶನ್ ಯುಎಸ್ಎ ಇಂಡಿಯಾ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬಹುದು.

ABOUT THE AUTHOR

...view details